ಕಣಿವೆ, ಏ. ೩ : ಆಹಾರಕ್ಕಾಗಿ ಹಾಹಾಕಾರ ಪಟ್ಟು ಕಾಡಿನಿಂದ ನಾಡಿಗೆ ಧಾವಿಸಿದ್ದ ಕಾಡಾನೆಗಳು ಜಲಾಶಯದ ನೀರಿನಲ್ಲಿ ಸರಿ ಸುಮಾರು ಒಂದೂವರೆ ಕಿಲೋ ಮೀಟರ್‌ಗೂ ಹೆಚ್ಚು ದೂರ ಈಜಿ ತಮ್ಮ ಗೂಡಿಗೆ ಸೇರಿಕೊಂಡ ದೃಶ್ಯ ಭಾನುವಾರ ಎದುರಾಯಿತು.

ಕಳೆದ ಬಾರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಲಾಶಯದಲ್ಲಿ ಸಂಗ್ರಹಗೊAಡ ನೀರು ಕಡಿಮೆಯಾಗದ ಕಾರಣ ಕಾಡಾನೆಗಳು ಜಲಾಶಯ ದಾಟಲು ಹರಸಾಹಸ ಪಡುವಂತಹ ಸ್ಥಿತಿ ಇದೆ. ಕಾಡಾನೆಗಳ ಹಿಂಡು ಜಲಾಶಯದ ಮಧ್ಯ ಭಾಗದಲ್ಲಿಯೇ ಈಜಿ ಆಕಡೆಯಿಂದ ಈಕಡೆಯ ದಂಡೆಯನ್ನು ಸುರಕ್ಷಿತವಾಗಿ ಸೇರಿವೆ.

ಮರಿಯೊಂದಿಗೆ ತಾಯಿಯಾನೆ ಸೇರಿ ನಾಲ್ಕು ಕಾಡಾನೆಗಳ ಹಿಂಡು ಕಂಡು ಬಂತು. ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳಿಗೆ ತಿನ್ನಲು ಸೂಕ್ತವಾದ ಆಹಾರ ಇಲ್ಲದ ಕಾರಣ ಆಹಾರವನ್ನು ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅರಸಿ ಅನತಿ ದೂರದ ಯಡವನಾಡು ಅರಣ್ಯದತ್ತ ಈ ಕಾಡಾನೆ ಹಿಂಡು ಮುಖ ಮಾಡಿತ್ತು ಎನ್ನಲಾಗಿದೆ. ಯಡವನಾಡು ವ್ತಾಪ್ತಿಯಲ್ಲಿ ಕೆಲವಾರು ದಿನಗಳು ಸುತ್ತಾಡಿ ಅಲ್ಲಲ್ಲಿ ಅರೆ ಬರೆ ಹೊಟ್ಟೆ ತುಂಬಿಸಿಕೊAಡ ಕಾಡಾನೆಗಳು ಮತ್ತದೇ ತಮ್ಮ ಗೂಡಿಗೆ ಭಾನುವಾರ ಮರಳಿವೆ ಎಂದು ಹುದುಗೂರಿನ ಗ್ರಾಮ ಪಂಚಾಯಿತಿ ಸದಸ್ಯ ರವಿ ಶಕ್ತಿ ಯೊಂದಿಗೆ ವಿವರಿಸಿದರು. ಅರಣ್ಯ ಇಲಾಖೆ ಕಾಡಿನಲ್ಲಿ ಕಾಡಾನೆಗಳಿಗೆ ಬೇಕಾದಂತಹ ಸಸ್ಯರಾಶಿಗಳನ್ನು ಬಿತ್ತನೆ ಮಾಡುವ ಮೂಲಕ ಬೆಳೆಸುವಲ್ಲಿ ಪ್ರಯತ್ನ ಪಡಬೇಕಿದೆ.

ಆಹಾರ ಹಾಗೂ ಕುಡಿವ ನೀರಿಗಾಗಿ ದೊಡ್ಡ ಹೊಟ್ಟೆಯ ಕಾಡಾನೆಗಳು ಸಂಕಟಪಡದAತೆ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ‘ಕಾಡಾನೆಗಳ ಕುಲ ಹಾಗೂ ಕಾಡಂಚಿನ ಕೃಷಿಕ ಸಂಕುಲ’ ಕ್ಕೆ ವರವಾಗಬೇಕಾಗಿದೆ. ಆ ಕೆಲಸ ಅತೀ ತುರ್ತಾಗಿ ಆಗಬೇಕಿದೆ. ಈ ಬಗ್ಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ವನ್ಯ ಪ್ರಾಣಿ ಹಾಗೂ ಪರಿಸರ ಸಂಘಗಳು ಶ್ರಮಿಸಬೇಕಿದೆ.

- ಕೆ.ಎಸ್.ಮೂರ್ತಿ