ಸಚಿವ ಸಿ.ಸಿ. ಪಾಟೀಲ್

ಮಡಿಕೇರಿ, ಏ. ೩: ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರವು (ಎನ್.ಎಚ್.ಎಐ) ರಾಷ್ಟಿçÃಯ ಹೆದ್ದಾರಿ ೨೭೫ರ ಮೈಸೂರು-ಮಡಿಕೇರಿ ಮಾರ್ಗದಲ್ಲಿ ೪ ಪಥದ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಟೆಂಡರ್ ಆಹ್ವಾನಿಸಿದೆ. ಒಟ್ಟು ಮೂರು ಪ್ಯಾಕೇಜ್‌ಗಳಲ್ಲಿ ಹುಣಸೂರು, ಬಿಳಿಕೆರೆ, ಇಲವಾಲ ಮತ್ತು ಮೈಸೂರಿನಲ್ಲಿ ಬೈಪಾಸ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ.

ಸದನ ಕಲಾಪದಲ್ಲಿ ಜೆಡಿಎಸ್‌ನ ಸಿ.ಎನ್. ಮಂಜೇಗೌಡ ಕೇಳಿದ ಪ್ರಶ್ನಗೆ ಉತ್ತರಿಸಿದ ಅವರು, ಮೈಸೂರು-ಮಡಿಕೇರಿ ಸೆಕ್ಷನ್ ಮಾರ್ಗವು ಶ್ರೀರಂಗಪಟ್ಟಣ, ಮೈಸೂರು, ಹುಣಸೂರು, ಪಿರಿಯಾಪಟ್ಟಣ ಮತ್ತು ಸೋಮವಾರಪೇಟೆ ತಾಲೂಕಿನ ಆನೆಕಾಡು ಅರಣ್ಯದ ಮೂಲಕ ಹಾದು ಹೋಗಲಿದೆ. ಮಡಿಕೇರಿ-ಮಂಗಳೂರು ಸೆಕ್ಷನ್ ಮಾರ್ಗವು ಕುಶಾಲನಗರದಿಂದ ಪ್ರಾರಂಭವಾಗಿ ಮಡಿಕೇರಿ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕಿನ ಮಾಣಿ ಮಾರ್ಗವಾಗಿ ಹಾದು ಹೋಗುತ್ತದೆ ಎಂದು ಹೇಳಿದರು.

ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಬರುವ ರಾಷ್ಟಿçÃಯ ಹೆದ್ದಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸುತ್ತಿದ್ದು, ಬೈಪಾಸ್ ಮಾಡುವ ಪ್ರಸ್ತಾವನೆ ಇರುವುದಿಲ್ಲ. ಮೈಸೂರು-ಕುಶಾಲನಗರ ರಸ್ತೆಗೆ ಕಾಮಗಾರಿಯ ಗುತ್ತಿಗೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಕುಶಾಲನಗರ-ಮಡಿಕೇರಿ ಮಾರ್ಗ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಗುತ್ತಿಗೆ ಪಡೆದ ಕಂಪೆನಿಗಳೇ ಬಂಡವಾಳ ಹೂಡಿಕೆ ಮಾಡಿ ರಾಷ್ಟಿçÃಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿವೆ. ಹಾಗಾಗಿ, ಆ ಕಂಪೆನಿಗಳಿಗೆ ಟೋಲ್ ಶುಲ್ಕ ಸಂಗ್ರಹಕ್ಕೆ ಅನುವು ಮಾಡಿಕೊಡಲಾಗಿದೆ. ಟೋಲ್ ಪ್ಲಾಜಾದ ಸುತ್ತಮುತ್ತಲ ೧೦ ಕಿ.ಮೀ. ಪರಿಧಿಯಲ್ಲಿರುವ ಹಳ್ಳಿಗಳ ಜನರಿಗೆ ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಕೃಷಿ ಸಂಬAಧಿ ವಾಹನಗಳು ಹಾಗೂ ದ್ವಿಚಕ್ರ ವಾಹನಗಳಿಂದ ಟೋಲ್ ಪಡೆಯುತ್ತಿಲ್ಲ. ಟೋಲ್ ಶುಲ್ಕ ಇಳಿಕೆ ಸಂಬAಧ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಆಶ್ವಾಸನೆ ನೀಡಿದರು.