ಹೆಬ್ಬಾಲೆ ಏ. ೩: ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ ಕನ್ನಡ ವಿಭಾಗದಲ್ಲಿ ೩ ಚಿನ್ನದ ಪದಕಗಳನ್ನು ಪಡೆದು ಕೊಡಗಿನ ಅವಿನಾಶ್ ಈರಪ್ಪ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳನೇ ಹೊಸಕೋಟೆ ನಿವಾಸಿ ರೈತ ಈರಪ್ಪ ಹಾಗೂ ಪಾರ್ವತಿ ದಂಪತಿಗಳ ಪುತ್ರ. ಮೈಸೂರು ಕ್ರಾ ಫರ್ಡ್ ಭವನದಲ್ಲಿ ನಡೆದ ವಿಶ್ವವಿದ್ಯಾಲಯದ ೧೦೨ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ವಿವಿ ಕುಲಪತಿ ಪ್ರೊ. ಜಿ. ಹೇಮಂತ್‌ಕುಮಾರ್ ಪ್ರಶಸ್ತಿ ಪತ್ರ ಹಾಗೂ ಪದಕ ಪ್ರದಾನ ಮಾಡಿ ಗೌರವಿಸಿದರು. ಈ ಸಂದರ್ಭ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಎ.ಪಿ. ಜ್ಞಾನಪ್ರಕಾಶ್ ಹಾಗೂ ಕುಲಸಚಿವ ಪ್ರೊ.ಶಿವಪ್ಪ ಇದ್ದರು.