ಮಾಸ್ಕ್ ಧರಿಸಲು ತಜ್ಞರ ಸಮಿತಿ ಸಲಹೆ

ಬೆಂಗಳೂರು, ಏ. ೩: ಕೋವಿಡ್ ಮೂರನೇ ಅಲೆ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಸಾಕಷ್ಟು ಇಳಿಮುಖವಾಗಿದೆ. ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಮಾಸ್ಕ್ ಧರಿಸುವುದು ಕೂಡ ಕಡಿಮೆಯಾಗಿದೆ. ಮಾಸ್ಕ್ ಧರಿಸದಿದ್ದಕ್ಕಾಗಿ ಜನರಿಗೆ ದಂಡ ವಿಧಿಸುವುದನ್ನು ನಿಲ್ಲಿಸಲು ಕೆಲವು ರಾಜ್ಯಗಳು ನಿರ್ಧರಿಸಿದ್ದರೂ, ಕರ್ನಾಟಕದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದನ್ನು ನಿಲ್ಲಿಸಿಲ್ಲವಾದ್ದರಿಂದ ರಾಜ್ಯ ಸರ್ಕಾರ ಜನರಿಗೆ ಮಾಸ್ಕ್ ಧರಿಸುವುದು ಬೇಡ ಎಂದು ಕಡ್ಡಾಯವಾಗಿ ಹೇಳಿಲ್ಲ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಸಲಹೆ ಅಥವಾ ಅಧಿಸೂಚನೆ ಹೊರಡಿಸಬೇಕೇ ಎಂಬುದನ್ನು ರಾಜ್ಯ ಸರ್ಕಾರ ಅಂತಿಮವಾಗಿ ನಿರ್ಧರಿಸಬೇಕು ಎಂದು ಟಿಎಸಿ ತಜ್ಞರು ಹೇಳಿದ್ದಾರೆ. ಮಾಸ್ಕ್ ಆದೇಶವನ್ನು ಕೈಬಿಡದಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಹಲವಾರು ರಾಜ್ಯಗಳು ಮಾಸ್ಕ್ ಧರಿಸುವ ಆದೇಶವನ್ನು ಹಿಂತೆಗೆದುಕೊAಡಿವೆ ಎಂದು ನಮಗೆ ತಿಳಿದಿದ್ದರೂ, ಪರಿಸ್ಥಿತಿಯ ಸ್ಥಳೀಯ ಮೌಲ್ಯಮಾಪನದ ಆಧಾರದ ಮೇಲೆ ಪ್ರತಿ ರಾಜ್ಯವು ತನ್ನದೇ ಆದ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರದ ಮಾರ್ಗಸೂಚಿಗಳು ಸ್ಪಷ್ಟವಾಗಿವೆ. ಗಾಳಿ-ಬೆಳಕು ಸರಿಯಾಗಿ ಬಾರದ ಸ್ಥಳಗಳು, ಜನನಿಬಿಡ ಪ್ರದೇಶಗಳು ಮತ್ತು ಆಸ್ಪತ್ರೆಗಳಲ್ಲಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು ಎಂದು ನಮ್ಮ ಸಮಿತಿ ಹೇಳಿದೆ ಎಂದು ಟಿಎಸಿ ಅಧ್ಯಕ್ಷ ಡಾ. ಎಂ.ಕೆ. ಸುದರ್ಶನ್ ಹೇಳಿದರು. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿರಬಹುದು. ಆದರೆ ನಾವು ಕೋವಿಡ್-೧೯ ನಿಂದ ಮುಕ್ತರಾಗಿಲ್ಲ. ಅಂರ‍್ರಾಷ್ಟಿçÃಯ ಪ್ರಯಾಣ ಸೇರಿದಂತೆ ಎಲ್ಲಾ ಸಾರ್ವಜನಿಕ ಚಟುವಟಿಕೆಗಳು ತೆರೆದುಕೊಂಡಿವೆ, ಆದ್ದರಿಂದ ಜಾಗರೂಕತೆ ಹೆಚ್ಚಾಗಿರಬೇಕಾಗುತ್ತದೆ. ಪ್ರಸ್ತುತ ಪರೀಕ್ಷಾ ತಂತ್ರವು ರೋಗಲಕ್ಷಣದ ಜನರನ್ನು ಪರೀಕ್ಷಿಸುವುದು ಮಾತ್ರ, ಆದ್ದರಿಂದ ಲಕ್ಷಣರಹಿತ ಜನರನ್ನು ಗುರುತಿಸಲಾಗುವುದಿಲ್ಲ. ಮೂರನೇ ಅಲೆ ಮುಗಿದಿದೆ ಆದರೆ ಕೋವಿಡ್ ಮುಗಿದಿಲ್ಲ ಎಂದು ಸುದರ್ಶನ್ ವಿವರಿಸಿದ್ದಾರೆ. ಅನೇಕ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣವು ಕಂಡುಬAದಿದೆ. ಅಂರ‍್ರಾಷ್ಟಿçÃಯ ಸಂಚಾರದ ಮುಕ್ತ ಹರಿವು ಇದೆ. ಕೇವಲ ೨ ಪ್ರತಿಶತದಷ್ಟು ಪ್ರಯಾಣಿಕರ ಮಾದರಿಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಜೂನ್‌ನಲ್ಲಿ ನಾಲ್ಕನೇ ಅಲೆಯ ಸಾಧ್ಯತೆಯೊಂದಿಗೆ, ಕರ್ನಾಟಕದಲ್ಲಿ ಮಾಸ್ಕ್ ಧರಿಸುವ ಆದೇಶವನ್ನು ಮುಂದುವರಿಸಲು ತಜ್ಞರು ನಿರ್ಧರಿಸಿದ್ದಾರೆ. ಈ ಮಧ್ಯೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್, ಟಿಎಸಿ ಶಿಫಾರಸಿನ ಆಧಾರದ ಮೇಲೆ ಆರೋಗ್ಯ ಇಲಾಖೆಯು ಮಾಸ್ಕ್ ಕಡ್ಡಾಯವನ್ನು ಮುಂದುವರಿಸಬೇಕು ಎಂದು ಹೇಳಿದೆ. ಅಂತಿಮ ನಿರ್ಧಾರ ಸಚಿವರು ತೆಗೆದುಕೊಳ್ಳುತ್ತಾರೆ ಎಂದರು.

ಪಾಕ್ ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕಾರ

ಇಸ್ಲಾಮಾಬಾದ್, ಏ. ೩: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಪಾಕ್ ನ್ಯಾಷನಲ್ ಅಸೆಂಬ್ಲಿ ಉಪ ಸ್ಪೀಕರ್ ತಿರಸ್ಕರಿಸಿದ್ದು, ಇದು ಅಸಂವಿಧಾನಿಕ ಎಂದು ಘೋಷಿಸಿದ್ದಾರೆ. ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಸಂವಿಧಾನದ ವಿಧಿ ೫ಕ್ಕೆ ವಿರುದ್ಧವಾಗಿದೆ ಎಂದು ಹೇಳಿ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯ ಉಪ ಸ್ಪೀಕರ್ ಖಾಸಿಂ ಖಾನ್ ಸೂರಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಇದರಿಂದ ಪ್ರಧಾನಿಯಾಗಿ ಇಮ್ರಾನ್ ಖಾನ್ ಮುಂದುವರೆಯಲಿದ್ದಾರೆ. ಕೂಡಲೇ ರಾಷ್ಟçವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್, ಅಸೆಂಬ್ಲಿ ವಿಸರ್ಜನೆಗೆ ರಾಷ್ಟಾçಧ್ಯಕ್ಷರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಪ್ರಜಾಸತಾತ್ಮಕ ಹಾದಿಯಲ್ಲಿ ಚುನಾವಣೆ ನಡೆಯಲಿ, ಚುನಾವಣೆಗೆ ಸಜ್ಜಾಗುವಂತೆ ಪಾಕಿಸ್ತಾನದ ಜನರಿಗೆ ಕರೆ ನೀಡುವುದಾಗಿ ಹೇಳಿದರು. ಸ್ಪೀಕರ್ ನಿರ್ಧಾರ ವಿಚಾರದಲ್ಲಿ ಪ್ರತಿಯೊಬ್ಬ ಪಾಕಿಸ್ತಾನಿ ಪ್ರಜೆಯನ್ನು ಅಭಿನಂದಿಸುತ್ತೇನೆ. ವಿದೇಶಿ ಪಿತೂರಿಯಿಂದ ನನ್ನ ವಿರೋಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಯಾರು ಆಡಳಿತ ನಡೆಸಬೇಕು ಎಂಬುದನ್ನು ಪಾಕಿಸ್ತಾನದ ಜನರು ನಿರ್ಧರಿಸಲಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದರು. ಇದಕ್ಕೂ ಮುನ್ನ ಪಾಕಿಸ್ತಾನ ರಾಷ್ಟಿçÃಯ ಅಸೆಂಬ್ಲಿಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಮೇಲಿನ ಮತದಾನ ವೇಳೆಯಲ್ಲಿ ಇಮ್ರಾನ್ ಖಾನ್ ಅಸೆಂಬ್ಲಿಯಲ್ಲಿ ಇರಲಿಲ್ಲ.

ಐಸಿಸ್‌ಗೆ ಯುವಕರ ಸೆಳೆಯುತ್ತಿದ್ದ ವ್ಯಕ್ತಿ ಬಂಧನ

ಹೈದರಾಬಾದ್, ಏ. ೩: ಅಂರ‍್ರಾಷ್ಟಿçÃಯ ಉಗ್ರ ಸಂಘಟನೆ ಐಸಿಸ್‌ಗೆ ಯುವಕರ ಸೆಳೆಯುತ್ತಿದ್ದ ವ್ಯಕ್ತಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಭಯೋತ್ಪಾದಕ ಸಂಘಟನೆ ಪರ ಪ್ರಚಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಸಿಸಿಎಸ್ ಸೈಬರ್ ಕ್ರೆöÊಂ ಪೊಲೀಸರು ಬಂಧಿಸಿದ್ದು, ಫಲಕ್‌ನುಮಾ ನಿವಾಸಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಕೆಲವು ತಿಂಗಳುಗಳಿAದ ಹೈದರಾಬಾದ್‌ನಲ್ಲಿ ಐಸಿಸ್ ಪರ ಸಹಾನುಭೂತಿ ಹೊಂದಿದವರನ್ನು ಸಂಪರ್ಕಿಸಲು ಈತ ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಸುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಈ ಹಿಂದೆಯೂ ಆರೋಪಿ ಹಲವು ಬಾರಿ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ತನ್ನ ಸ್ನೇಹಿತರು ಮತ್ತು ಸಂಬAಧಿಕರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಜಿಹಾದ್ ಕಡೆಗೆ ಆಕರ್ಷಿತರಾಗಲು ವೀಡಿಯೋಗಳನ್ನು ಕಳುಹಿಸುತ್ತಿದ್ದ. ಇದಕ್ಕಾಗಿಯೇ ವಿಶೇಷವಾಗಿ ಅಪ್ಲಿಕೇಶನ್‌ಗಳನ್ನು ರಚಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಟನ್ನಿಂಗ್ ಕುರಿತು ಆದೇಶ ಹೊರಡಿಸಿಲ್ಲ

ಬೆಂಗಳೂರು, ಏ. ೩: ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ಸರ್ಕಾರದ ಪಶು ಸಂಗೋಪನಾ ಇಲಾಖೆ ಹೊರಡಿಸಿದೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಇಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಇಲಾಖೆಯಿಂದ ಸ್ಟನ್ನಿಂಗ್ ಕಡ್ಡಾಯ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಿಲ್ಲ, ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಪತ್ರದ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಅಭಿಪ್ರಾಯ, ಹೇಳಿಕೆ ನೀಡುತ್ತೇನೆ ಎಂದು ಹೇಳಿದ್ದಾರೆ. ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರ ಯುಗಾದಿ ಹೊಸತೊಡಕಿನ ಮಧ್ಯೆ ತಾರಕಕ್ಕೇರಿ ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ ಎಂದು ಹೇಳಲಾಗಿತ್ತು. ಅದರಂತೆ, ಇನ್ನು ಮುಂದೆ ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಿರುವ ಬಗ್ಗೆ ಹೇಳಲಾಗಿತ್ತು. ಅದಕ್ಕೆ ಪಶು ಸಂಗೋಪನಾ ಇಲಾಖೆ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಪ್ರಾಣಿಗಳಿಗೆ ವಿಪರೀತ ಹಿಂಸೆ ನೀಡದೆ, ಅವುಗಳು ನರಳಾಡದಂತೆ ಮಾಡಿ ಕೊಲ್ಲುವುದಕ್ಕೆ ಸ್ಟನ್ನಿಂಗ್ ಎನ್ನುತ್ತಾರೆ. ಸ್ಟನ್ನಿಂಗ್ ವೇಳೆ ಪ್ರಾಣಿಗಳ ತಲೆಗೆ ಜೋರಾಗಿ ಹೊಡೆಯಲಾಗುತ್ತದೆ. ಆಗ ಪ್ರಾಣಿಗಳ ತಲೆಗೆ ಪೆಟ್ಟು ಬಿದ್ದು ಅವುಗಳ ಮೆದುಳು ನಿಷ್ಕಿçಯಗೊಳ್ಳುತ್ತದೆ. ಆ ವೇಳೆ ಪ್ರಾಣಿಗಳನ್ನು ವಧೆ ಮಾಡಲಾಗುತ್ತದೆ.

ಉಗ್ರರೆಂದು ಭಾವಿಸಿ ನಾಗರಿಕರ ಮೇಲೆ ಗುಂಡೇಟು

ಗುವಾಹಟಿ, ಏ. ೩: ನಾಗಾಲ್ಯಾಂಡ್‌ನಲ್ಲಿ ಜನಸಾಮಾನ್ಯರ ಹತ್ಯೆಯ ಘಟನೆಯ ಬೆನ್ನಲ್ಲೆ, ಅರುಣಾಚಲ ಪ್ರದೇಶದಲ್ಲಿ ಇಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ಸೇನೆಯ ಎಲೈಟ್ ೨೧ ಪ್ಯಾರಾದ ಸಿಬ್ಬಂದಿ ಇಬ್ಬರನ್ನು ಉಗ್ರರೆಂದು ಭಾವಿಸಿ, ಗುಂಡು ಹಾರಿಸಿದ್ದಾರೆ. ಪರಿಣಾಮ ಗುಂಡೇಟು ತಗುಲಿದ ಇಬ್ಬರೂ ವ್ಯಕ್ತಿಗಳಿಗೆ ತೀವ್ರ ಗಾಯಗಳಾಗಿವೆ. ನೋಖ್ಪುವಾ ವಾಂಗ್ಪನ್ ಹಾಗೂ ರಾಮ್ವಾಂಗ್ ವಾಂಗ್ಸು ಗುಂಡೇಟು ತಗುಲಿದ ವ್ಯಕ್ತಿಗಳಾಗಿದ್ದು, ಓರ್ವ ವ್ಯಕ್ತಿಗೆ ಎಡಗಾಲಿಗೆ ಗಾಯಗಳಾಗಿದ್ದರೆ ಮತ್ತೋರ್ವ ವ್ಯಕ್ತಿಗೆ ಬಲಗೈನಲ್ಲಿ ಗಾಯಗಳಾಗಿವೆ. ಇಬ್ಬರನ್ನೂ ವಿಮಾನ ಕಾರ್ಯಾಚರಣೆಯ ಮೂಲಕ ಅಸ್ಸಾಂನ ದಿಬ್ರುಘರ್‌ಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಚಾಸ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತರು ಮೀನು ಹಿಡಿದು ವಾಪಸ್ಸಾ ಗುತ್ತಿದ್ದರು ಈ ವೇಳೆ ಸೇನೆ ಅವರಿಬ್ಬರನ್ನೂ ಉಗ್ರರೆಂದು ತಪ್ಪಾಗಿ ಭಾವಿಸಿ ಗುಂಡಿನ ದಾಳಿ ನಡೆಸಿದೆ. ತಕ್ಷಣಕ್ಕೆ ಸೇನೆ ಅಥವಾ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ. ಈ ಘಟನೆಗೆ ಸಂಬAಧಿಸಿದ ವೀಡಿಯೋದಲ್ಲಿ ಅಧಿಕಾರಿಯೊಬ್ಬರು ಸಂತ್ರಸ್ತರ ಕುಟುಂಬಸ್ಥರಿಗೆ ಪರಿಹಾರ ನೀಡುವುದಾಗಿ ಹೇಳಿರುವುದು ವರದಿಯಾಗಿದೆ. ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತೇವೆ. ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳನ್ನು ಸುತ್ತುವರೆದಿದ್ದರು. ವೈದ್ಯರು ಹೇಳಿರುವ ಪ್ರಕಾರ ಸಂತ್ರಸ್ತರಿಗೆ ಮಾರಣಾಂತಿಕ ಗಾಯಗಳಾಗಿಲ್ಲ.