ಚೆಯ್ಯಂಡಾಣೆ, ಏ. ೩: ಎಸ್‌ಜೆಎಂ ಎಮ್ಮೆಮಾಡು ರೇಂಜ್ ವತಿಯಿಂದ ಪವಿತ್ರ ರಂಝಾನ್ ತಿಂಗಳು ಆರಂಭವಾಗುವ ಪ್ರಯುಕ್ತ ಎಮ್ಮೆಮಾಡು ರೇಂಜ್ ವ್ಯಾಪ್ತಿಯ ೪೫ ಉಸ್ತಾದರುಗಳಿಗೆ ರಂಜಾನ್ ಕಿಟ್ ವಿತರಿಸಲಾಯಿತು. ಕಾರ್ಯಕ್ರಮವನ್ನು ವೆಲ್ಫೇರ್ ಅಧ್ಯಕ್ಷ ಸಯ್ಯಿದ್ ಸೈಫುದ್ದೀನ್ ಅಲ್ ಹೈದರೂಸಿ ಉದ್ಘಾಟನೆ ಮಾಡಿದರು. ರೇಂಜ್ ಅಧ್ಯಕ್ಷ ಅಬ್ದುಲ್ ರಝಾಕ್ ಸಅದಿ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಸಖಾಫಿ ಉಪಸ್ಥಿತರಿದ್ದರು. ಸಹಕರಿಸಿದ ದೇಶ-ವಿದೇಶದಲ್ಲಿರುವ ದಾನಿಗಳಿಗೆ ಸಯ್ಯಿದ್ ಅಬ್ದುಲ್ ಅಝೀಝ್ ತಂಙಳ್ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ನಝೀರ್ ಸಖಾಫಿ ಸ್ವಾಗತಿಸಿದರೆ, ವೆಲ್ಫೇರ್ ಕಾರ್ಯದರ್ಶಿ ಶಬೀರ್ ಸಖಾಫಿ ವಂದನಾರ್ಪಣೆಗೈದರು.