ಮಡಿಕೇರಿ, ಏ. ೩: ಶುಭಕೃತ್ ನಾಮ ಸಂವತ್ಸರದ ಯುಗಾದಿ ಆಚರಣೆ ಜಿಲ್ಲೆಯಾದ್ಯಂತ ಸಂಭ್ರಮದಿAದ ನಡೆಯಿತು. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆಗಳು ನೆರವೇರಿದವು. ಬೇವು ಬೆಲ್ಲವನ್ನು ಸವಿಯುವದರೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಓಂಕಾರೇಶ್ವರ ದೇವಾಲಯ, ವಿಜಯ ವಿನಾಯಕ ಸೇರಿದಂತೆ ಹಲವು ದೇವಾಲಯಗಳಲ್ಲಿ ಪೂಜಾಕೈಂಕರ್ಯಗಳು ನೆರವೇರಿದವು.ಸೋಮವಾರಪೇಟೆ: ಹೊಸ ವರ್ಷ ಯುಗಾದಿಯನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಯುಗಾದಿ ಹಿನ್ನೆಲೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ತೆರಳಿ ಪೂಜಾ ಕಾರ್ಯದಲ್ಲಿ ಭಾಗಿಯಾದರು. ಬೇವು ಬೆಲ್ಲ ಸೇವಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಯುಗಾದಿ ಹಬ್ಬದ ಹಿಂದಿನ ದಿನ ಬೇವು ಹಾಗೂ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಪಟ್ಟಣದ ವಿದ್ಯಾಗಣಪತಿ, ಬಸವೇಶ್ವರ, ಸೋಮೇಶ್ವರ, ಕಟ್ಟೆ ಬಸವೇಶ್ವರ, ಅಯ್ಯಪ್ಪಸ್ವಾಮಿ ಹಾಗೂ ಮುತ್ತಪ್ಪ ಸ್ವಾಮಿ, ಹಾನಗಲ್ಲು ಗಣಪತಿ ದೇವಾಲಯ, ಬಜೆಗುಂಡಿ ಅಯ್ಯಪ್ಪ ದೇವಾಲಯ, ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪಸ್ವಾಮಿ ದೇವಾಲಯ, ಯಡೂರಿನ ಸೆಮಾಡಿಕೊಂಡರು. ಯುಗಾದಿ ಹಬ್ಬದ ಹಿಂದಿನ ದಿನ ಬೇವು ಹಾಗೂ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಪಟ್ಟಣದ ವಿದ್ಯಾಗಣಪತಿ, ಬಸವೇಶ್ವರ, ಸೋಮೇಶ್ವರ, ಕಟ್ಟೆ ಬಸವೇಶ್ವರ, ಅಯ್ಯಪ್ಪಸ್ವಾಮಿ ಹಾಗೂ ಮುತ್ತಪ್ಪ ಸ್ವಾಮಿ, ಹಾನಗಲ್ಲು ಗಣಪತಿ ದೇವಾಲಯ, ಬಜೆಗುಂಡಿ ಅಯ್ಯಪ್ಪ ದೇವಾಲಯ, ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪಸ್ವಾಮಿ ದೇವಾಲಯ, ಯಡೂರಿನ ಸೋಮೇಶ್ವರ ÆÃಮೇಶ್ವರ ದೇವಾಲಯ, ಶಾಂತಳ್ಳಿಯ ಕುಮಾರಲಿಂಗೇಶ್ವರ, ಪಟ್ಟಣದ ಶ್ರೀರಾಮಮಂದಿರ ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.

ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿನಕುಪ್ಪೆ ಸಿದ್ಧಲಿಂಗಪುರ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಹಾಗೂ ನವನಾಗನಾಥ ಸನ್ನಿಧಿಯಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಶನಿವಾರಸಂತೆ: ಪಟ್ಟಣದ ಶ್ರೀ ಚಾಮುಂಡೇಶ್ವರಿ ಬನದಲ್ಲಿ ಶನಿವಾರ ಯುಗಾದಿ ಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ದೇವಿ ಹಾಗೂ ಗುಳಿಗ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಿ ಪದ್ಮಪೀಠ ಹಾಗೂ ದೈವಕ್ಕೆ ಹೂವು, ಧವನ, ಕಹಿಬೇವಿನ ಅಲಂಕಾರ ಮಾಡಿ ಮಡ್ಲಕ್ಕಿ, ಹಣ್ಣುಕಾಯಿ ನೈವೇದ್ಯ ಸಮರ್ಪಿಸಿ, ಮಹಾಮಂಗಳಾರತಿ ಮಾಡಲಾಯಿತು. ಅರ್ಚಕರಾದ ಪ್ರಕಾಶ್ಚಂದ್ರ ಮತ್ತು ಶಿವಾನಂದ ಪೂಜಾ ವಿಧಿ ನೆರವೇರಿಸಿದರು. ಬಂದ ಭಕ್ತಾದಿಗಳಿಗೆ ಮೊದಲಿಗೆ ಬೇವು - ಬೆಲ್ಲ ವಿತರಿಸಿ, ಪ್ರಸಾದ ವಿನಿಯೋಗ ಮಾಡಲಾಯಿತು.

ಪಟ್ಟಣದ ಶ್ರೀ ಚಂದ್ರಮೌಳೇಶ್ವರ - ಪಾರ್ವತಿ - ಗಣಪತಿ ದೇವಾಲಯದಲ್ಲಿ ಹಾಗೂ ಶ್ರೀರಾಮ ಮಂದಿರದಲ್ಲಿ ಅರ್ಚಕರಾದ ಮಾಲತೇಶ್ ಭಟ್ ಹಾಗೂ ಪ್ರಸನ್ನ ರಾವ್ ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಪಂಚಾAಗ ಶ್ರವಣ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಎರಡೂ ದೇವಾಲಯಗಳ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

* ಶನಿವಾರಸಂತೆಯ ಶ್ರೀ ರಾಮ ಮಂದಿರದಲ್ಲಿ ಶನಿವಾರ ಸಂಜೆ ಯುಗಾದಿ ಹಬ್ಬದ ಪ್ರಯುಕ್ತ ಅರ್ಚಕ ಪ್ರಸನ್ನ ಭಟ್ ಪಂಚಾAಗ ಶ್ರವಣ ನೆರವೇರಿಸಿದರು. ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.