ಮಡಿಕೇರಿ, ಏ. ೧: ೨ ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯುವುದರಲ್ಲಿ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕ ಯಶಸ್ವಿಯಾಗಿದೆ.
ತಾ.೧ ರಂದು ಗುಡ್ಡೆಹೊಸೂರಿ ನಿಂದ ಹಾರಂಗಿ ರಸ್ತೆಯಲ್ಲಿನ ಬೊಳ್ಳೂರು ಮಾದಾಪಟ್ಟಣ ಕಡೆಗೆ ಹೋಗುವ ರಸ್ತೆಯ ಜಂಕ್ಷನ್ ಬಳಿ ಆರೋಪಿಗಳಾದ ನಂಜನಗೂಡಿನ ವುಜೈರ್ ಅಹಮದ್, ಹುಣಸೂರಿನ ನಯಾಜುದ್ದಿನ್ ಖಾನ್ ಹಾಗೂ ಪೊನ್ನಂಪೇಟೆಯ ಅಶ್ರಫ್ ಎಂ.ಎ ಬೆಲೆಬಾಳುವ ೨ ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಅರಣ್ಯ ಘಟಕದ ಸಿಬ್ಬಂದಿ ದಂತ ಸಹಿತ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಹೊಂಡಾ ಆ್ಯಕ್ಟಿವಾ (ಕೆ.ಎ. ೪೫ ಡಬ್ಲುö್ಯ ೬೦೭೧) ಅನ್ನು ವಶಕ್ಕೆ ಪಡೆದಿದ್ದಾರೆ. ೨ ದಂತಗಳೂ ಸುಮಾರು ೩ ಅಡಿ ಉದ್ದ ಇದ್ದು, ಒಟ್ಟು ೪.೮೫ ಕೆ.ಜಿ
(ಮೊದಲ ಪುಟದಿಂದ) ತೂಕವಿರುವುದಾಗಿ ತಿಳಿದುಬಂದಿದೆ. ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ ಶರತ್‌ಚಂದ್ರ ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಚಂದ್ರಕಾAತ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು ಸವಿ, ಹೆಡ್‌ಕಾನ್ಸ್ಟೆಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್ ಎ.ಜಿ, ಮೋಹನ, ದೇವಯ್ಯ, ಯೋಗೇಶ್ ಮತ್ತು ಕಾನ್ಸ್ಟೇಬಲ್‌ಗಳಾದ ಸ್ವಾಮಿ, ಮಂಜುನಾಥ, ನಂದ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.