ಕೂಡಿಗೆ, ಏ. ೧: ರಾಷ್ಟಿçÃಯ ಹಾಲು ಅಭಿವೃದ್ಧಿ ಮಂಡಳಿ, ಹಾಸನ ಹಾಲು ಒಕ್ಕೂಟ ಮತ್ತು ರಾಷ್ಟಿçÃಯ ಜೇನು ಮಂಡಳಿ, ನಂದಿಪುರ ಹಾಲು ಉತ್ಪಾದಕರ ಮಹಿಳೆ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಾಲು ಉತ್ಪಾದಕರ ಸಂಘಗಳ ಸದಸ್ಯರುಗಳಿಗೆ ಮತ್ತು ಗ್ರಾಮದ ರೈತರಿಗೆ ೭ ದಿನಗಳ ಜೇನು ಸಾಕಾಣಿಕೆಯ ಬಗ್ಗೆ ತರಬೇತಿ ಕಾರ್ಯಾಗಾರ ಕೊಡ್ಲಿಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್‌ಕುಮಾರ್ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಮಹಿಳೆ ಮತ್ತು ಪುರುಷರು ಹೈನುಗಾರಿಕೆಯ ಜೊತೆಯಲ್ಲಿ ಜೇನು ಕೃಷಿಯನ್ನು ಅಳವಡಿಸಿಕೊಂಡು ಜೇನು ಉತ್ಪಾದನೆ ಮಾಡುವ ಮೂಲಕ ಅರ್ಥಿಕವಾಗಿ ಸಬಲರಾಗುವ ಬಗ್ಗೆ ಮಾಹಿತಿಯನ್ನು ನೀಡಿದರು. ಜೇನು ಕೃಷಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಸಿಗುವ ಸಹಕಾರವನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಿಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಹೆಚ್.ಎನ್. ನೀಲಮ್ಮ ವಹಿಸಿದ್ದರು. ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಗೋಪಾಲಯ್ಯ ಅವರು ಜೇನು ಕೃಷಿ, ಸಾಕಾಣಿಕೆ, ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಗೋಪಾಲಯ್ಯ ಪ್ರಮಾಣ ಪತ್ರಗಳನ್ನು ನೀಡಿದರು. ಈ ಸಂದರ್ಭ ಹಾಸನ ಡೈರಿ ವ್ಯವಸ್ಥಾಪಕ ರೂಪೇಶ್, ಕುಮಾರ್, ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಸಹಾಯಕ ವ್ಯವಸ್ಥಾಪಕ ವೇಣುಗೋಪಾಲ, ಸಂಪನ್ಮೂಲ ವ್ಯಕ್ತಿ ತಾಕೇರಿ ಮಂಜುನಾಥ ಹಾಜರಿದ್ದರು. ತರಬೇತಿ ಕಾರ್ಯಾಗಾರದಲ್ಲಿ ೩೨ ಮಹಿಳಾ ಮತ್ತು ಪುರುಷ ತರಬೇತಿದಾರರು ಭಾಗವಹಿಸಿದ್ದರು. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಕೋಮಲ ಸ್ವಾಗತಿಸಿ, ವಂದಿಸಿದರು.