೨೦೦೨ರಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ಮುಂದುವರಿದ ಭಾಗ ಈ ಕೆಳಗಿನಂತಿದೆ.
ಸನ್ಯಾಸಿಯ ಪ್ರತೀಕಾರ
ಇಲ್ಲಿ ತಂತ್ರಿಗಳಿಗೆ ಸೂಕ್ತ ಸ್ಥಾನಮಾನ, ಗೌರವಗಳನ್ನು ನೀಡಿ ಕ್ಷೇತ್ರಾಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತನೆ-ವಿಮರ್ಶೆ ನಡೆಸುವ ಅಭ್ಯಾಸ ಇಲ್ಲವೇ ಇಲ್ಲವಾಗಿರುತ್ತದೆ. ಯಾವುದೇ ಪ್ರಮುಖ ಕಾರ್ಯಕ್ರಮಗಳಿಗೆ ತಂತ್ರಿಗಳಿಗೆ ಆಹ್ವಾನ ನೀಡುವುದೂ ಕಂಡು ಬರುತ್ತಿಲ್ಲ, ಉತ್ಸವಗಳಲ್ಲಿ ಪ್ರಾರಂಭದಿAದ ಅಂತ್ಯದವರೆಗೂ ತಂತ್ರಿಗಳ ಉಪಸ್ಥಿತಿಯಿರÀಬೇಕು. ತಂತ್ರಿ ಗಳವರನ್ನು ಬಿಟ್ಟು ಹಲವು ಪ್ರಮುಖ ಕಾರ್ಯಕ್ರಮಗಳನ್ನು ಇಲ್ಲಿ ಜರುಗಿಸಿದ್ದು ಕಂಡುಬರುತ್ತದೆ. ಇದರಿಂದಾಗಿ ತಂತ್ರಿಗಳಿಗೆ ತೀವ್ರ ಮನಸ್ತಾಪವಿದ್ದು, ಇದು ತಂತ್ರಿಗಳ ಸ್ಥಾನಕ್ಕೆ ಮಾಡಿದ ಅವಮಾನವಾಗಿರುವ ಕಾರಣ ಆಚಾರ್ಯ (ತಂತ್ರಿ) ಶಾಪವಾಗಿ ಪರಿಣಮಿಸಿರುವ ಕಾರಣ ಕ್ಷೇತ್ರಾಭಿವೃದ್ಧಿಗೆ ಇದು ಖಂಡಿತವಾಗಿ ಮಾರಕವಾಗಿರುತ್ತದೆ ಎಂಬುದಾಗಿ ತಿಳಿದು ಬರುತ್ತದೆ. ಈ ಕ್ಷೇತ್ರಾಭಿವೃದ್ಧಿಯನ್ನು ಸದಾ ಹಂಬಲಿಸಿ ಅದಕ್ಕಾಗಿ ತಪಸ್ಸು, ಜನ ಸಂಘಟನೆ, ಧನಾರ್ಜನೆಗಳನ್ನು ಕೈಗೊಂಡು, ಸಾಕಷ್ಟು ಯಶಸ್ವಿಯಾಗಿದ್ದ ಮಹಾಸನ್ಯಾಸಿ ಯೊಬ್ಬರನ್ನು ಅವರಲ್ಲಿದ್ದ ಧನ-ಕನಕ, ಸುವಸ್ತು, ಶಾಲಗ್ರಾಮಾದಿ ಸರ್ವವಸ್ತುಗಳನ್ನು ಅಪಹರಿಸಿ, ಅವರನ್ನು ನಿಗೂಢ ರೀತಿಯಲ್ಲಿ ಹಿಂಸೆ ಮಾಡಿ ಭಯೋತ್ಪಾದನೆಗೈದು, ಅವರು ಸಂಶಯಾಸ್ಪದವಾಗಿ, ಪ್ರಶ್ನಾರ್ಹವಾಗಿ ದೇಹಾಂತ್ಯಗೊAಡಿದ್ದು ಕಂಡು ಬರುತ್ತಿದ್ದು ಅವರ ನಿಗೂಢ ಸಾವಿನ ಕಾರಣವು ಇಂದಿಗೂ ಒಗಟಾಗಿಯೇ ಉಳಿದಿರುವುದು ಅತ್ಯಂತ ಸೋಜಿಗದ ವಿಷಯವೇ ಆಗಿರುತ್ತದೆ.
ಈ ಮಹಾಸನ್ಯಾಸಿಗಳು ತನ್ನ ಬಾಳ್ವೆಯ ಮಹೋನ್ನತ ಕನಸಾಗಿದ್ದ ಶ್ರೀ ತಲಕಾವೇರಿ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರವು ಕನ್ನಡಿಯೊಳಗಿನ ಗಂಟಾಗಿಯೇ ಉಳಿದು, ಅವಕಾಶವಂಚಿತರಾಗಿ ಸಾರ್ವಜನಿಕರ ಸಹಾಯ ವಿರಹಿತರಾಗಿ, ಸಮಾಜಘಾತುಕರ ಸಂಚಿಗೆ ಬಲಿಯಾಗಿ, ಭಗ್ನ ಮನೋರಥ ರಾಗಿ, ಅಂತಿಮವಾಗಿ ತನ್ನ ಪ್ರಾಣೋತ್ಕçಮಣಾವಸ್ಥೆಯ ಸಂದರ್ಭದಲ್ಲಿ ಅತೀವ ವೇದನೆಯಿಂದ ತನ್ನ ಸಾವಿಗೆ ಕಾರಣರಾದವರೆಲ್ಲರನ್ನೂ ಗುರಿಯಾಗಿಸಿ, ಅಸಹಾಯಕ ಸ್ಥಿತಿಯಲ್ಲಿ ಶ್ರೀಕಾವೇರಿ ಮಾತೆಯನ್ನು ನೆನೆದು ಹೃದಯವಿದ್ರಾವಕ ದಾರುಣ ಸ್ಥಿತಿಯಲ್ಲಿ ಉಗ್ರವಾಗಿ, ಘೋರವಾಗಿ, ಶಪಿಸಿ ದೇಹಾವಸಾನಗೊಂಡಿರುವುದು ಕಂಡು ಬರುತ್ತದೆ. ಈ ಸನ್ಯಾಸಿಗಳು ತನ್ನ ಸೇಡಿನ ಪ್ರತಿಫಲ ಪ್ರತೀಕಾರಕ್ಕಾಗಿ ಇಂದಿಗೂ ಈ ಕ್ಷೇತ್ರಾಭಿವೃದ್ಧಿಯನ್ನು ತಟಸ್ಥಗೊಳಿಸುತ್ತಾ ಸನ್ಯಾಸಿಗಳ ವಸ್ತುಗಳನ್ನು ಅಪಹರಿಸಿದವರಿಗೆ ಬಾಧೆಯನ್ನು ಕೊಡುತ್ತಾ, ಈ ಪ್ರದೇಶವಾಸಿಗಳಿಗೆ ಭೀತಿಯನ್ನುಂಟು ಮಾಡುತ್ತಾ, ಸಂಚರಿಸುವ ಭೀಕರ ಬ್ರಹ್ಮರಾಕ್ಷಸನಾಗಿ ಎಲ್ಲರಿಗೂ ಬಹುದೊಡ್ಡ ಸವಾಲಾಗಿ ದ್ದಾರೆಂದು ತಿಳಿದುಬರುತ್ತಿದೆ. ಇದರಿಂದ ಸನ್ಯಾಸಿಗಳ ಶಾಪವೂ ಘಟಿಸಿರು ವುದು ಕಂಡು ಬರುತ್ತದೆ. ಈ ಸನ್ಯಾಸಿಗಳಲ್ಲಿದ್ದ ಬೆಲೆಬಾಳುವ ವಸ್ತುಗಳು ಪುನಃ ಸಿಗುವ ಸಾಧ್ಯತೆಗಳಿದ್ದು, ಸನ್ಯಾಸಿಯ ಆತ್ಮವು ಅದನ್ನೇ ಕೇಂದ್ರವಾಗಿರಿಸಿ ಕೊಂಡು ಸಂಚರಿಸುತ್ತಿರುವ ಕಾರಣ, ಆ ವಸ್ತುಗಳು ಇರುವಂತಹ ವ್ಯಕ್ತಿಗಳ ಕುಟುಂಬದಲ್ಲಿ ಗಂಡಾAತರಕಾರೀ ಉತ್ಪಾತಗಳು ವಿನಾಶಕಾರಿ ಅವಘಡಗಳು ಸಂಭವಿಸುತ್ತಿದ್ದು, ಇನ್ನೂ ಪ್ರಳಯಕಾರಿಯಾಗುವ ಸಾಧ್ಯತೆಗಳು ಬಹಳಷ್ಟಿರುತ್ತದೆ. ಎಂಬದಾಗಿ ತಿಳಿದುಬರುತ್ತದೆ.
ಈ ಬಗ್ಗೆ ಜಾಗೃತೆ ಅಗತ್ಯವೆಂದು ಕಂಡಿರುತ್ತದೆ. ಇದಲ್ಲದೆ ಮರದಿಂದ ಬಿದ್ದು ಸತ್ತ ಪ್ರೇತಸಹಿತ ನಾಲ್ಕು ಪ್ರೇತಬಾಧೆಗಳೂ, ಇನ್ನೋರ್ವ ಸನ್ಯಾಸಿಯನ್ನು ಅವಮಾನ ಪಡಿಸಿದ್ದರ ಫಲವಾಗಿ ಸಾವಿಗೀಡಾದ ಸನ್ಯಾಸಿಯ ಆತ್ಮದ ಮತ್ತು ಉತ್ಸವ ಕಾಲದಲ್ಲಿ ಸತ್ತುಹೋದ ರಕ್ಷಸ್ಸು ಸಹಿತ ಇನ್ನೊಂದು ರಕ್ಷಸ್ಸು ಇತ್ಯಾದಿಗಳ ಬಾಧೆಯು ಈ ಕ್ಷೇತ್ರಕ್ಕೆ ತೀವ್ರವಾಗಿ ಇರುತ್ತದೆ. ಎಂದು ತಿಳಿದು ಬರುತ್ತಿದ್ದು, ಇವುಗಳು ಕ್ಷೇತ್ರಾಭಿವೃದ್ಧಿಗೆ ಪ್ರಬಲ ಸವಾಲಾಗಿ ಅಡ್ಡಿಯಾಗಿದೆಯೆಂದು ತಿಳಿದು ಬರುತ್ತದೆ.
ಪರವೂರಿನವರಿಗೆ ಈ ಕ್ಷೇತ್ರದ ಮೇಲೆ ಇರುವ ಅನುರಾಗಕ್ಕೆ ಹೋಲಿಸಿದರೆ ಇಲ್ಲಿಯ ಸ್ಥಳೀಯರಿಗೆ ಭಕ್ತಿ-ಶ್ರದ್ಧೆಗಳು ಕಡಿಮೆಯಾಗಿರುತ್ತದೆ ಎಂದು ಕಂಡು ಬಂದಿದೆ. ಉತ್ತಮ ಸಂತಾನಕ್ಕಾಗಿ ಸ್ತಿçÃಯರು-ಪುರುಷರು ಅನನ್ಯ ಭಕ್ತಿ, ಶ್ರದ್ಧಾಪೂರ್ವಕವಾಗಿ, ನಿಷ್ಠೆಯಿಂದ ಷಷ್ಠಿ ವ್ರತಾನುಷ್ಠಾನ ಮಾಡಿ ಮತ್ತು ಶ್ರೀ ತಲಕಾವೇರಿ ಕ್ಷೇತ್ರದ ಶ್ರೀ ಕಾವೇರಿ ತೀರ್ಥದಲ್ಲಿ ವ್ರತನಿಷ್ಠರಾದ ದಂಪತಿಗಳು ತೀರ್ಥಸ್ನಾನ ಮಾಡಿ ಪ್ರಾರ್ಥಿಸಿಕೊಂಡಲ್ಲಿ ಕುಲದೀಪಕರಾದ ಸತ್ಪುತ್ರರ ಜನನವಾಗುತ್ತದೆ ಎಂದು ತಿಳಿದು ಬರುತ್ತದೆ.
ಹಿಂದೆ ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕರಾಗಿ, ವೇದಾಂಗ ಪಾರಂಗತರೂ, ತಪಸ್ವಿಗಳೂ, ವೇದಾಧ್ಯಯನ ಸಂಪನ್ನರೂ, ವೈದಿಕ ಕರ್ಮಾನುಷ್ಠಾನ ನಿಷ್ಠರೂ, ಉತ್ತಮ ವಾಕ್ಸಿದ್ದಿ ಮತ್ತು ಮೇಧಾಶಕ್ತಿಯುಳ್ಳವರೂ ಆಗಿದ್ದು, ಭಕ್ತರ ಮನೋಭೀಷ್ಟಕ್ಕೆ ತಕ್ಕಂತೆ ಶ್ರೀ ಕಾವೇರಿ ಮಾತೆಯ ತೀರ್ಥ ಯಾತ್ರೆ ಸಂಬAಧ ಸೇವಾದಿಗಳನ್ನು ನ್ಯೂನಾತೀರೇಕವಿಲ್ಲದಂತೆ ನಡೆಸಿಕೊಟ್ಟು ಜನಾನುರಾಗಿಗಳಾಗಿ ಕೀರ್ತಿಶೇಷರಾದವರು ಇದ್ದರೆಂದು ಕಂಡು ಬರುತ್ತದೆ. ಇದೇ ಪರಂಪರೆಯ ಅರ್ಚಕರು ಈಗ ಇದ್ದರೂ, ಭಕ್ತಾದಿಗಳ ಸೇವೆಯನ್ನು ಬದಲಿ ವ್ಯಕ್ತಿಗಳಿಂದ ಆ ವ್ಯಕ್ತಿಗಳ ಜೀವನೋಪಾಯಕ್ಕಾಗಿ ದುಡಿಮೆಯ ಸಂಬಳಕ್ಕೆ ಕೆಲಸ ಮಾಡಿಸುತ್ತಿರುವದು ಕಂಡು ಬಂದಿದೆ. ಆದ್ದರಿಂದ ಅರ್ಚಕ ವಿಭಾಗದವರೇ ವೇದಾಧ್ಯಯನ, ವೈದಿಕ ಕರ್ಮಾನುಷ್ಠಾನ ಹಾಗೂ ಶ್ರೀ ಅಗಸ್ಯ ಮಹರ್ಷಿ, ಶ್ರೀ ಕಾವೇರಿ ಮುಂತಾದ ವಿಶೇಷ ಮೂಲ ಮಂತ್ರಗಳ ಉಪದೇಶಗಳ ಬಗ್ಗೆ ಅತ್ಯಂತ ಆಸಕ್ತಿ ವಹಿಸಿ, ಅಧ್ಯಯನ ಮಾಡಿ ತರಬೇತಿ ಪಡೆದು ಪೂರ್ವಿಕ ಪರಂಪರೆಯು ಅರ್ಥಪೂರ್ಣವಾಗಿ ಮುಂದುವರೆಯು ವಲ್ಲಿ ಉದ್ಯುಕ್ತರಾಗಬೇಕಾದ ಪ್ರಥಮ ಆದ್ಯತೆ ಅನಿವಾರ್ಯ ಪರಿಸ್ಥಿತಿ ಬಂದೊದಗಿರುತ್ತದೆ ಎಂಬುದನ್ನು ಆತ್ಮಪೂರ್ವಕವಾಗಿ ಮನಗಂಡು ಈಗಿನಿಂದಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕೆಂಬದೇ ಶ್ರೀ ಕಾವೇರಿ ಮಾತೆಯ ಸದಿಚ್ಛೆಯಾಗಿರುತ್ತದೆ ಎಂಬುದಾಗಿ ತಿಳಿದು ಬರುತ್ತದೆ.
ಈ ಕ್ಷೇತ್ರದಲ್ಲಿ ಅರ್ಚಕರು ಮತ್ತು ಆಡಳಿತ ಮಂಡಳಿ ಹಾಗೂ ಪರಿಚಾರಕ ವರ್ಗದವರೊಳಗೆ, ಅನ್ಯೋನ್ಯ ಕಲಹ-ಮನಸ್ತಾಪಗಳು ಇದ್ದು, ಇದರಿಂದಾಗಿ ದೇವತಾ ವಿನಿಯೋಗಾದಿ ಕಾರ್ಯಗಳು ವಿಳಂಬದಿAದ ಅಥವಾ ವೈಕಲ್ಯದಿಂದ ನಡೆಯುತ್ತಿರುವುದು ದೇವತಾ ಸಾನ್ನಿಧ್ಯಕ್ಕೆ ತುಂಬಾ ದೋಷ ಪ್ರದವಾಗಿರುವು ದಾಗಿ ಕಂಡು ಬರುತ್ತದೆ.
ಕೊಡವರ ಕುಲದೇವತೆ
ಒಟ್ಟಿನಲ್ಲಿ, ಶ್ರೀ ಕಾವೇರಿಯು ಕೊಡವರ ಕುಲದೇವತೆ, ಅನುಗ್ರಹದಾತೆ, ಅಭಯಪ್ರದಾತೆಯಾಗಿ ಕೊಡವರ ಬದುಕಿನಲ್ಲಿ, ಹುಟ್ಟಿನಿಂದ ಸಾವಿನ ತನಕ ಜೀವನದಲ್ಲಿ ನಡೆಸುವ ವಿವಿಧ ಸಂಸ್ಕಾರ ಕ್ರಿಯೆಗಳ ಸಂಬAಧವಾಗಿ ಒಂದೊAದು ವಿಧದಲ್ಲಿ ನೆನೆದು ಪೂಜಿಸಿ, ಪ್ರಾರ್ಥಿಸಿ, ಮರಣೋತ್ತರ ಕ್ರಿಯೆಗಳಲ್ಲಿ ಶ್ರೀ ಕಾವೇರಿ ಮಹಾ ಮಾತೆಯನ್ನು ನೆನೆದು ದಕ್ಷಿಣ ಗಂಗೆಯಾದ ಶ್ರೀ ಕಾವೇರಿ ಪುಣ್ಯ ಜಲದಲ್ಲಿ ಸ್ನಾನ ಮಾಡಿ ಪಿತೃಗಳಿಗೆ ತೃಪ್ತಿಯನ್ನು ಉಂಟುಮಾಡಲು ಯಥೋಚಿತ ವಾದ ಕಾರ್ಯ ಕೈಗೊಳ್ಳುವುದು ಕೊಡವರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಧಾರ್ಮಿಕ ಪ್ರಜ್ಞೆ ಮತ್ತು ನಿಯಮಾವಳಿಗಳಾಗಿವೆ. ಅವಿಚ್ಛಿನ್ನವಾಗಿ ಅನಾದಿ ಕಾಲದಿಂದಲೂ ಜಲರೂಪಿ ಯಾಗಿ, ನಿತ್ಯ ನೂತನೆಯಾಗಿ ಶ್ರೀ ಕಾವೇರಿಯಿಂದ ಬಂಗಾಳಕೊಲ್ಲಿಯವರೆಗೆ ಪ್ರವಹಿಸುತ್ತಲೇ ಇದ್ದು, ಶ್ರೀ ಕಾವೇರಿಯ ಜಲವು ಹರಿದಲ್ಲೆಲ್ಲಾ, ಅಕ್ಷಯ ಸುವರ್ಣ ವೃಷ್ಟಿಯಾಗುತ್ತಿದ್ದು, ಆ ಪ್ರದೇಶವನ್ನು ಅಕ್ಷಯ ವಸುಂಧರೆಯನ್ನಾಗಿ, ಕರುಣಾಮಯಿಯಾದ ಕಲುಷ ವಿನಾಶಿನಿಯಾದ, ಸರ್ವ ಆಧ್ಯಾತ್ಮಿಕ ಸಂಪತ್ತು ಮತ್ತು ಭೌತಿಕವಾದ ನಾನಾ ಸಂಪತ್ಪçದಾಯಿನಿಯಾದ ಶ್ರೀ ಕಾವೇರಿ ಮಾತೆಯು ಪರಿವರ್ತಿಸುತ್ತಿದ್ದಾಳೆ ಎಂಬುದು ನಿತ್ಯ ನೂತನ ಸತ್ಯವಾಗಿರುತ್ತದೆ.
ಅಗಸ್ತö್ಯ ಮಹರ್ಷಿಗಳ ನಿರ್ಲಕ್ಷö್ಯ
ಶ್ರೀ ಮಾತೆ ಕಾವೇರಿಯ ಮೂಲ ಕಥೆಯ ಉಗಮದಲ್ಲಿಯೇ ಶ್ರೀ ಅಗಸ್ತö್ಯ ಮಹರ್ಷಿಗಳೊಂದಿಗೆ ವಿವಾದಗಳಿದ್ದರೂ, ಲೋಕಕಲ್ಯಾಣದ ಮಹಾ ಸಂಕಲ್ಪಕ್ಕೆ ಬದ್ಧತೆಯಿದ್ದದ್ದರಿಂದ ತಾಯಿಯಾಗಿ, ತನ್ನ ಕರ್ತವ್ಯ ನಿರ್ವಹಿಸುತ್ತಿದ್ದರೂ, ಶ್ರೀ ಕಾವೇರಿಯ ಜಲವು ತಮ್ಮ ರಾಜ್ಯದ ಗಡಿ ಪರಿಧಿಯೊಳಗೆ ನಿರಂತರ ಹರಿಯುತ್ತಿದ್ದರೂ, ಜಲಾಶಯ-ನಾಲೆಗಳಲ್ಲಿನ ಶ್ರೀ ಕಾವೇರಿಯ ನೀರಿನ ಮಟ್ಟದ ನೈಜ ಪಾಲಿಗಾಗಿ ಎರಡು ರಾಜ್ಯಗಳೊಳಗೆ, ಚರ್ಚೆ, ಹೋರಾಟ, ಕಾದಾಟ, ರಕ್ತಪಾತ, ಗೋಲಿಬಾರ್ಗಳು ಈಗಲೂ ನಡೆಯುತ್ತಲೇ ಇವೆಯಾದರೂ, ಸದರಿ ಮಹಾಸಿದ್ಧ ಮುತ್ಸದ್ಧಿಗಳಲ್ಲೊಬ್ಬರು ಶ್ರೀ ಕಾವೇರಿಯ ಜಲದ ಮೂಲ ಸೆಲೆಯ, ಪರಿಸರ ಸಂರಕ್ಷಣೆಗಾಗಲಿ, ಪಾವಿತ್ರö್ಯ ವರ್ಧನೆÀಗಾಗಲಿ ಕಿಂಚಿತ್ತೂ ಕನಿಷ್ಟ ಗಮನ ನೀಡದಿರುವುದು ಇತಿಹಾಸದ ಘೋರ, ಕ್ರೂರ ವ್ಯಂಗ್ಯವಾಗಿದೆಯನ್ನಲು ಅಡ್ಡಿಯಿಲ್ಲ. ಇದು ನಿಜವಾಗಿಯೂ ಶ್ರೀ ಕಾವೇರಿಯ ಬರಿದಾಗದ, ಬತ್ತಿಸಲಾಗದ, ಅಪಹರಿಸಲಾಗದ, ಇಷ್ಟಾರ್ಥಪ್ರದವಾದ, ಚಿಂತಾಮಣಿ ಕಾಮಧೇನುವಿನಂತಿರುವ ಅಕ್ಷಯ ಪಾತ್ರೆಯಿಂದ ಸಕಲ ಸಂಪತ್ತನ್ನೇ ದೋಚಿಕೊಳ್ಳುತ್ತಾ, ಶ್ರೀ ಅಗಸ್ತö್ಯ ಮಹರ್ಷಿಗಳಿಗೆ ಯಾವುದೇ ಉಚಿತ ಸ್ಥಾನಮಾನ ಗೌರವಾದರಗಳನ್ನೇ ನೀಡದೇ ಅವಮಾನಿಸುತ್ತಾ ಇರುವುದು ವ್ಯಕ್ತವಾಗುತ್ತಿರುವುದರಿಂದ, ಶ್ರೀ ಕಾವೇರಿಯ ಮೂಲ ಮಹಾತ್ಮೆಯ ಕರ್ತೃಗಳೇ ಶ್ರೀ ಅಗಸ್ತö್ಯ ಮಹರ್ಷಿಗಳೆಂಬುದರ ವಿಸ್ಮರಣೆ ಗೊಂಡಿರುವುದರಿAದ ‘ವಾತಾಪಿ ಜೀರ್ಣೋಭವ' ಎಂದು ವಾತಾಪಿಯನ್ನು ಜೀರ್ಣ ಮಾಡಿ ಇಲ್ವಲನನ್ನು ಸುಟ್ಟು ಬೂದಿ ಮಾಡಿ, ಸೂರ್ಯನ ಗತಿಗೆ ವಿಘ್ನವುಂಟುಮಾಡಿದ ವಿಂಧ್ಯ ಪÀರ್ವತವನ್ನು ಕುಗ್ಗಿಸಿ, ಅಹಂಕಾರದಿAದ ಮದೋನ್ಮತ್ತನಾಗಿ ತನ್ನ ತಲೆಗೆ ತುಳಿದಂತಹ ನಹುಷ ಮಹಾರಾಜನಿಗೇ ‘ಸರ್ಪೋಭವ'ಎಂದು ಶಾಪವಿತ್ತು ಹೆಬ್ಬಾವಾಗುವಂತೆ ಮಾಡಿದ ಅಗಸ್ತö್ಯ ಮಹಾಮುನಿಗಳು ಇಂದು ಅಸಮಾಧಾನದಲ್ಲಿರುವುದು ಕಂಡು ಬರುತ್ತಿದ್ದು, ಅವರ ಕೊನೆಯ ಅವಕಾಶವೋ ಎಂಬAತೆ ಹಿಂದೆ ಹಲವು ಘಟನೆಗಳ ದೃಷ್ಟಾಂತಗಳಿಗೆ ತಿಳುವಳಿಕೆ ಉಂಟು ಮಾಡಲು ಪ್ರಯತ್ನಿಸಿದರೂ ಈ ಬಾರಿ ನಮ್ಮೆಲ್ಲರನ್ನೂ ಒಗ್ಗೂಡಿಸಲು ಒಮ್ಮೆಲೇ ಎಚ್ಚರಿಸುವಾಗ ಖಂಡಿತವಾಗಿ ನಾವುಗಳೆಲ್ಲರೂ ಜಾಗ್ರತೆಯಿಂದ ಮೇಲೇಳದಿದ್ದರೆ, ಶ್ರೀ ಅಗಸ್ತö್ಯ ಮಹಾಮುನಿಗಳ ಆ ಉಗ್ರವಾದ ಶಾಪಕ್ಕೆ ಗುರಿಯಾಗುವುದರ ಮೂಲಕ ಸರ್ವನಾಶಕ್ಕೆ ನಾಂದಿಯಾಗುವುದನ್ನು ತಡೆÀಯಲು ಎಲ್ಲಾ ಪ್ರಯತ್ನಗಳನ್ನೂ ಎಲ್ಲರೂ ಸೇರಿ ಮಾಡಬೇಕಾದುದು ಎಲ್ಲರ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಕಂಡು ಬರುತ್ತದೆ. ಏಕೆಂದರೆ, ಹಿಂದೆ ವಾತಾಪಿ, ಇಲ್ವಲರ ವಿಂಧ್ಯ ಪರ್ವತದ ನಹುಷ ಮಹಾರಾಜನ, ಅಂತೆಯೇ ರಾಕ್ಷಸರ ನಾಶಕ್ಕಾಗಿ ಸಮುದ್ರವನ್ನೇ ಶ್ರೀ ಅಗಸ್ತö್ಯರು ಪಾನ ಮಾಡಬೇಕಾಗಿ ಬಂದ ಪರಿಸ್ಥಿತಿ ಹಾಗೂ ಶಾಪವು ಈ ಲೋಕದ ಜೀವಿಗಳಿಗೆ ಸಮಸ್ತ ಚರಾಚರಗಳಿಗೆ, ಖಂಡಿತವಾಗಿ ಬಂದೊದಗಬಾರದೆAಬುದು ಮಾತ್ರ ಐತಿಹಾಸಿಕ. ಆದರೆ, ಸಾರ್ವಕಾಲಿಕ ಸತ್ಯವೆಂಬದು ಸೂರ್ಯನ ಬೆಳಕಿನಷ್ಟೇ ಸುಸ್ಪಷ್ಟವಾಗಿರುತ್ತದೆ ಎಂದು ತಿಳಿದು ಬರುತ್ತದೆ.
ಶ್ರೀ ಅಗಸ್ತö್ಯ ಮಹರ್ಷಿಗಳು, ಶ್ರೀ ಅಗಸ್ತೆö್ಯÃಶ್ವರ, ಶ್ರೀ ಕಾವೇರಮ್ಮ, ಶ್ರೀಶಾಸ್ತಾವು ಶ್ರೀ ಮಹಾ ಗಣಪತಿಯ ಸನ್ನಿಧಿಯಲ್ಲಿ ವಿನಮ್ರವಾಗಿ, ಶುದ್ಧಾಂತಕರಣದಿAದ ಲೋಕಕಲ್ಯಾಣಾರ್ಥವಾಗಿ ಸಂಪೂರ್ಣ ಅನನ್ಯ ಶರಣಾಗತಿಯಿಂದ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತ, ಪೂರ್ಣಕ್ಷಮಾ ಯಾಚನೆಯನ್ನು ಮಾಡುತ್ತಾ, ಈ ಮುಂದೆ ಬರೆಯಲ್ಪಡುವ ಸೇವೆಗಳನ್ನು ಮಾಡಿ ಕಾರ್ಯೋನ್ಮುಖರಾಗಲು ಪೂರ್ಣಾನುಗ್ರಹ ಪೂರ್ವಕವಾದ ಶಕ್ತಿ, ಯುಕ್ತಿ, ಭಕ್ತಿಗಳನ್ನು ದಯಪಾಲಿಸುವಂತೆ ಒಕ್ಕೊರಲಿನಿಂದ ಭಿನ್ನವಿಸಿಕೊಳ್ಳುವು ದೊಂದೇ ದಾರಿಯೆಂದು ತಿಳಿದು ಬರುತ್ತದೆ. ಅದಕ್ಕಾಗಿ ನಾವೆಲ್ಲರೂ ಒಟ್ಟುಗೂಡಿ ಮುನ್ನಡಿ ಇಡುವುದು ಒಳಿತು ಎಂಬುದು ಅತ್ಯಂತ ಮುಖ್ಯ ವಿಚಾರವಾಗಿರುತ್ತದೆ ಎಂದು ಕಂಡುಬAದಿದೆ. (ಮುಂದುವರಿಯುವುದು)
- ಜಿ. ರಾಜೇಂದ್ರ, ಮಡಿಕೇರಿ.