ಮಡಿಕೇರಿ, ಏ. ೧: ದೆಹಲಿಯ ಕವಿತಾ ಮೀಡಿಯಾ ಸೋರ್ಸ್ ಲಿಮಿಟೆಡ್, ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿವಾಹಿನಿ, ಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಮಾಡುವ ಪ್ರಶಸ್ತಿಗೆ ಭಾಜನರಾಗಿರುವ ಭಾಗಮಂಡಲದ ತಣ್ಣಿಮಾನಿ ಗ್ರಾಮದ ಕುದುಪಜೆ ರಂಜಿತ್ ಅವರಿಗೆ ಪ್ರದಾನ ಮಾಡಲಾಯಿತು. ದೆಹಲಿಯಲ್ಲಿ ನಡೆದ ಕನ್ನಡ ಕಲಾ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ವಿಜಯನಗರ ಜಿಲ್ಲೆಯ ನಂದಿಪುರ ಗ್ರಾಮದ ಡಾ. ಮಹೇಶ್ವರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಬಳ್ಳಾರಿಯ ಕಲ್ಯಾಣ ಸ್ವಾಮಿ ಮಠದ ಮ.ನಿ.ಪ್ರ. ಕಲ್ಯಾಣ ಮಹಾಸ್ವಾಮಿ, ಹಿರೇಮಠ ಬೆಣ್ಣೆಹಳ್ಳಿಯ ಪಂಚಾಕ್ಷರಿ ಶಿವಾಚಾರ್ಯ ಸ್ವಾಮಿ, ಅಜಾತ ಶಂಭುಲಿAಗ ಶಿವಾಚಾರ್ಯ ಸ್ವಾಮಿ, ವೇದಮೂರ್ತಿ ಹಾಲಯ್ಯ ಶಾಸ್ತಿç, ಹೈಬ್ರಿಡ್ ನ್ಯೂಸ್ ಮುಖ್ಯಸ್ಥ ಬಿ.ಎನ್. ಹೊರಪೇಟಿ ಇದ್ದರು.

ಸಾಂಪ್ರದಾಯಿಕ ದಿರಿಸಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ರಂಜಿತ್ ‘ಕೊಡಗು ನಡುಗುತ್ತಿದೆ’ ಎಂಬ ಕವನ ವಾಚನ ಮಾಡಿದರು. ರಂಜಿತ್ ತಣ್ಣಿಮಾನಿಯ ಕುದುಪಜೆ ದಾಮೋದರ ಹಾಗೂ ಜಾನಕಿ ದಂಪತಿಯ ಪುತ್ರ.