ಮಡಿಕೇರಿ, ಏ. ೧: ಮಹಾಬೋಧಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಮುಂದಿನ ಐದು ವರ್ಷಕ್ಕೆ ಚುನಾವಣೆ ನಡೆದಿದ್ದು, ಫಲಿತಾಂಶ ಘೋಷಣೆಯಾಗಿದೆ.
ಮಡಿಕೇರಿ ತಾಲೂಕು ಸಾಮಾನ್ಯ ಸದಸ್ಯರ ಕ್ಷೇತ್ರದಿಂದ ಎಸ್.ಸಿ. ಸತೀಶ್, ಹೆಚ್.ಎಂ. ಕೃಷ್ಣ, ಹೆಚ್.ಎಸ್. ಗಣಪತಿ, ಮಹಿಳಾ ಸದಸ್ಯರ ಕ್ಷೇತ್ರದಿಂದ ಹೆಚ್.ಎನ್. ಶಾರದಾ, ವೀರಾಜಪೇಟೆ ತಾಲೂಕು ಸಾಮಾನ್ಯ ಕ್ಷೇತ್ರದಿಂದ ಕೆ. ಪಳನಿ ಪ್ರಕಾಶ್, ಜೆ.ಎಲ್. ಜನಾರ್ಧನ, ಎಸ್.ಎನ್. ಗೀತಾ, ಮಹಿಳಾ ಸದಸ್ಯರ ಕ್ಷೇತ್ರದಿಂದ ಗಾಯತ್ರಿ ನರಸಿಂಹ, ಸೋಮವಾರಪೇಟೆ ತಾಲೂಕು ಸಾಮಾನ್ಯ ಸದಸ್ಯರ ಕ್ಷೇತ್ರದಿಂದ ಕೆ.ಬಿ. ರಾಜು, ಸಿ.ಜೆ. ಮೋಹನ್, ಎಸ್.ಎ. ಪ್ರತಾಪ್, ಎಸ್.ಬಿ. ಜಯಪ್ಪ, ಮಹಿಳಾ ಸದಸ್ಯರ ಕ್ಷೇತ್ರದಿಂದ ಹೆಚ್.ಟಿ. ಶೋಭಾ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ ಅವಿರೋಧವಾಗಿ ಚುನಾಯಿತರಾಗಿದ್ದಾರೆ.
ಚುನಾವಣೆ ಪ್ರಕ್ರಿಯೆಯನ್ನು ಮಹಾಬೋಧಿ ಪತ್ತಿನ ಸಹಕಾರ ಸಂಘದ ಚುನಾವಣಾಧಿಕಾರಿ ಮೋಹನ್ ಕುಮಾರ್ ನಡೆಸಿಕೊಟ್ಟರು.