ಸಿದ್ದಾಪುರ, ಏ. ೧: ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಶ್ರೀ ಚೌಡೇಶ್ವರಿ ನಾಟಕ ಕಲಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಮಾಡಿನ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.

ರಂಗಭೂಮಿ ಕಲಾವಿದೆ ಹಾಗೂ ಶಿಕ್ಷಕಿ ಪಿ.ಎ. ಸರಸ್ವತಿ ಚಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿಯ ಕಲೆಗಳ ಬಗ್ಗೆ ಹಾಗೂ ರಂಗಭೂಮಿಯಲ್ಲಿ ನಡೆದು ಬಂದAತಹ ಹಾದಿಯ ಬಗ್ಗೆ ಅವರು ತಿಳಿಸಿದರು. ಕಲೆ ಸಂಸ್ಕೃತಿಯನ್ನು ಬೆಳೆಸುವ ಮೂಲಕ ರಂಗಭೂಮಿಯ ಕಾರ್ಯಕ್ರಮವನ್ನು ಮುಂದುವರೆಸಿಕೊAಡು ಹೋಗಬೇಕೆಂದು ಅವರು ಸಲಹೆಯಿತ್ತರು.

ನರಸಯ್ಯನವರು ಕೊಡಗಿನ ಜಾನಪದ ವಾದ್ಯಗೋಷ್ಠಿ ರಾಜ್ಯ ಪ್ರಶಸ್ತಿ ಪುರಸ್ಕೃತ ನರಸಯ್ಯ, ಮಾಲತಿ ದತ್ತಿ ಶ್ರೀ ಪುರಸ್ಕೃತ ರಂಗ ಕಲಾವಿದೆ ಪಿ.ಎ. ಸರಸ್ವತಿ ಚಂಗಪ್ಪ ಇವರುಗಳÀನ್ನು ಈ ಸಂದರ್ಭ ಸನ್ಮಾನ ಮಾಡಲಾಯಿತು. ಉಪನ್ಯಾಸಕ ಅರ್ಜುನ್ ಮೌರ್ಯ ಅವರು ಮಾತನಾಡಿ, ನಮ್ಮೂರಿನ ರಂಗಭೂಮಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ನಡೆಸುವಂತಾಗಲಿ ಎಂದು ಹಾರೈಸಿದರು.

ಅಮ್ಮತ್ತಿ ಕಾರ್ಮಾಡ್ ಗ್ರಾ.ಪಂ. ಸದಸ್ಯ ಅಭಿಜಿತ್, ಅಲ್ಲಾರಂಡ ವಿಠಲ್ ನಂಜಪ್ಪ, ನಾಟಕ ಕಲಾ ಸಂಘದ ಉಪಾಧ್ಯಕ್ಷ ಜಗದೀಶ್ ಅಂದಾನಿ ಉಪಸ್ಥಿತರಿದ್ದರು. ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಚೌಡೇಶ್ವರಿ ನಾಟಕ ಕಲಾ ಸಂಘ ವತಿಯಿಂದ ‘ಗಾಂಧಿ ಕನ್ನಡಕ’ ನಾಟಕ ಪ್ರದರ್ಶನ ಮಾಡಲಾಯಿತು.