ಸೋಮವಾರಪೇಟೆ,ಏ.೧: ನಿನ್ನೆ ದಿನ ಮಸಗೋಡು ಗ್ರಾಮದ ತಿರುವು ರಸ್ತೆಯಲ್ಲಿ ನಡೆದ ಕಾರು ಹಾಗೂ ಬೈಕ್ ನಡುವಿನ ಅಪಘಾತ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಈ ಸಂಬAಧ ಕಾರಿನ ಮಾಲೀಕ ಮಸಗೋಡು ಗ್ರಾಮದ ವಿರೂಪಾಕ್ಷ ಎಂಬಾತನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಅಂತರ್‌ಜಾತಿ ವಿವಾಹದ ದ್ವೇಷದ ಹಿನ್ನೆಲೆ ತನ್ನ ಮೇಲೆ ಕಾರು ಚಾಲಿಸಿ ಹತ್ಯೆ ಮಾಡುವ ಉದ್ದೇಶದಿಂದ ಕೃತ್ಯ ನಡೆಸಿರುವುದಾಗಿ ಬೈಕ್ ಸವಾರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಾರಿನ ಚಾಲಕ ವಿರೂಪಾಕ್ಷ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಸೇರಿದಂತೆ ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.

ಮಸಗೋಡು ಗ್ರಾಮದ ವಿರೂಪಾಕ್ಷ ಅವರ ಪುತ್ರಿ ರಕ್ಷಿತ ಹಾಗೂ ತಣ್ಣೀರುಹಳ್ಳ ಗ್ರಾಮದ ರವಿ ಹಾಗೂ ಮೀನಾ ದಂಪತಿ ಪುತ್ರ ಚರಣ್ ಅವರುಗಳು ಕಳೆದ ೫ ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದು, ಅಂತರ್‌ಜಾತಿ ವಿವಾಹವಾದ್ದರಿಂದ ಹುಡುಗಿಯ ಮನೆಯವರಲ್ಲಿ ಅಸಮಾಧಾನ ಮೂಡಿಸಿತ್ತು ಎನ್ನಲಾಗಿದೆ.

ನಿನ್ನೆ ಸಂಜೆ ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಯ ಮಸಗೋಡು ಗ್ರಾಮದ ತಿರುವಿನಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಚರಣ್ ಹಾಗೂ ರಕ್ಷಿತ ಅವರುಗಳಿಗೆ ಹಿಂಬದಿಯಿAದ ಬಂದ ಕಾರು ಡಿಕ್ಕಿಪಡಿಸಿದ್ದು, ಅದೃಷ್ಟವಶಾತ್ ಬೈಕ್‌ನಲ್ಲಿದ್ದ ಈರ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಣ್ಣಪುಟ್ಟ ಗಾಯಗೊಂಡಿದ್ದ ಚರಣ್ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾನೆ. ಅಂತರ್‌ಜಾತಿ ವಿವಾಹವಾದ್ದರಿಂದ ನಮ್ಮ ಮೇಲೆ ದ್ವೇಷ ಸಾಧಿಸಿ ಕೊಲೆ ಮಾಡುವ ಉದ್ದೇಶದಿಂದ ಕಾರಿನಿಂದ ಡಿಕ್ಕಿಪಡಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ದೂರಿನ ಆಧಾರದ ಮೇರೆ ಕಾರು ಚಾಲಿಸುತ್ತಿದ್ದ ಮಾಲೀಕ ವಿರೂಪಾಕ್ಷ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.