ವೀರಾಜಪೇಟೆ, ಏ. ೧: ವೀರಾಜಪೇಟೆ ಮಲೆತಿರಿಕೆಬೆಟ್ಟದ ಮಲೇಮಹಾದೇಶ್ವರ ದೇವಾಲಯದಲ್ಲಿ ತಾ. ೩ ರಿಂದ ೭ ರವರೆಗೆ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಾಲಯದ ತಕ್ಕ ಮುಖ್ಯಸ್ಥ ಕೊಳುವಂಡ ಕಾರ್ಯಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವೇದಮೂರ್ತಿ ಎ.ಜಿ ಪಂಡರೀಶ ಅರಳಿತ್ತಾಯ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನಡೆಸಲಾಗುತ್ತಿದೆ. ತಾ. ೩ ರಂದು ಸಂಜೆ ೪ ಗಂಟೆಗೆ ಭಂಡಾರ ಬರುವುದು. ತಂತ್ರಿಗಳ ಪರಿಗ್ರಹಣ ಸಾಮೂಹಿಕ ಪ್ರಾರ್ಥನೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ತಾ. ೬ ರಂದು ಕಲಾತತ್ವನ್ಯಾಸ ಹೋಮ, ಕಲಾಶಾರಾಧನೆ, ಕಲಶಾಭಿಷೇಕ, ಅಷ್ಠಬಂಧ ಲೇಪನ ಮಹಾಪೂಜೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಶಂಕರಿ ಪೂವಯ್ಯ, ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್, ಸಹಕಾರ್ಯದರ್ಶಿ ಚೋಕಂಡ ರಮೇಶ್ ಖಜಾಂಚಿ ಚಾರಿಮಂಡ ಗಣಪತಿ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.