ಮಡಿಕೇರಿ, ಏ. ೧: ಕಾಫಿ ಮಂಡಳಿ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ವ್ಯಾಪ್ತಿಯ ಕಾರೆಕಂಡಿ ಗಿರಿಜನ ಹಾಡಿಯಲ್ಲಿ ಆದಿವಾಸಿ ಬುಡಕಟ್ಟು ಕಾಫಿ ಬೆಳೆಗಾರರಿಗೆ ಮೆಣಸು ಕೊಯ್ಲು ಏಣಿ ಮತ್ತು ಬೋಕ್ರ ಟ್ರಾö್ಯಪ್ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಗುರುಶಾಂತಪ್ಪ, ಕಾಫಿ ಮಂಡಳಿಯ ಉಪ ನಿರ್ದೇಶಕಿ (ಉಸ್ತುವಾರಿ) ಡಾಕ್ಟರ್ ಶ್ರೀದೇವಿ ಭಾಗವಹಿಸಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಿದರು.

ಈ ಸಂದರ್ಭ ಗುರುಶಾಂತಪ್ಪ ಮಾತನಾಡಿ, ಆದಿವಾಸಿ ಬುಡಕಟ್ಟು ಕಾಫಿ ಬೆಳೆಗಾರರು ಸವಲತ್ತುಗಳನ್ನು ಪಡೆದುಕೊಂಡು ಜೀವನ ನಡೆಸುವುದಲ್ಲದೆ, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಆ ದೃಷ್ಟಿಯಿಂದ ತಮ್ಮ ತಮ್ಮ ಮಕ್ಕಳನ್ನು ಶಾಲೆಗಳಿಗೆ ತೆರಳುವಂತೆ ಪ್ರೋತ್ಸಾಹಿಸಬೇಕು ಎಂದರು. ಡಾಕ್ಟರ್ ಶ್ರೀದೇವಿ ಮಾತನಾಡಿ ಈ ಬಾರಿ ಮಾಲ್ದಾರೆ, ತಿತಿಮತಿ, ನಾಲ್ಕೇರಿ ಬುಡಕಟ್ಟು ಕಾಫಿ ಬೆಳೆಗಾರರ ಸಂಘಗಳಿಗೆ ಸುಮಾರು ೧೦೨ ಏಣಿಗಳನ್ನು ವಿತರಣೆ ಮಾಡಲಾಗಿದೆ ಮತ್ತು ೬೦೦ ಕಾಫಿ ಬೆಳೆಗಾರರಿಗೆ ಕಾಫಿ ಕಾಯಿ ಕೋರಕ ನಿಯಂತ್ರಣ ಬೋಕ್ರ ಜಾಲವನ್ನು ವಿತರಣೆ ಮಾಡಲಾಗಿದೆ ಹಾಗೆಯೇ ಕಾಫಿ ಮಂಡಳಿಯಿAದ ಸಿಗುವ ಸವಲತ್ತುಗಳನ್ನು ಬುಡಕಟ್ಟು ಬೆಳೆಗಾರರು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ಅಧಿಕಾರಿ ಮಿಥುನ್ ತಾಂತ್ರಿಕ ಸಹಾಯಕ ಮಧು ಕೆ.ಹೆಚ್, ಮತ್ತು ನಿತಿನ್ ಇದ್ದರು.