ಮಡಿಕೇರಿ, ಏ.೧: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಚುನಾವಣೆ ಘೋಷಣೆಯಾಗಿದ್ದು, ವೇಳಾ ಪಟ್ಟಿ ಪ್ರಕಟಿಸಲಾಗಿದೆ.

ತಾ. ೪ರಂದು ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೩ ಗಂಟೆವರೆಗೆ ನಾಮ ಪತ್ರ ಅರ್ಜಿ ಸ್ವೀಕಾರ ಮಾಡಲು ಅವಕಾಶ ನೀಡಲಾಗಿದೆ. ತಾ.೯ರಂದು ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೩ಗಂಟೆವರೆಗೆ ನಾಮ ಪತ್ರ ಸಲ್ಲಿಸಬಹುದು. ತಾ.೧೦ರಂದು ಬೆಳಿಗ್ಗೆ ೧೧.೩೦ರಿಂದ ನಾಮಪತ್ರ ಪರಿಶೀಲನೆ ಹಾಗೂ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವದು. ತಾ.೧೧ರಂದು ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೩ಗಂಟೆ ಒಳಗಡೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಮಧ್ಯಾಹ್ನ ೩ಗಂಟೆಯಿAದ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಕಾರ್ಯ ನಡೆಯಲಿದೆ. ೧೨ರಂದು ಮಧ್ಯಾಹ್ನ ೧ಗಂಟೆಯಿAದ ಚಿಹ್ನೆ ಸಹಿತ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವದು. ಮತದಾನ ಅವಶ್ಯವಿದ್ದಲ್ಲಿ ತಾ. ೧೭ರಂದು ಚುನಾವಣೆ ನಡೆಸಲಾಗುವದು. ಸಂಜೆ ೪ ಗಂಟೆಯ ನಂತರ ಮತ ಎಣಿಕೆ ಕಾರ್ಯ ನಡೆಯಲಿದ್ದು, ಬಳಿಕ ಫಲಿತಾಂಶ ಘೋಷಣೆ ಯಾಗಲಿದೆ ಎಂದು ಚುನಾವಣಾಧಿಕಾರಿ ಎಸ್.ಎಂ.ರಘು ತಿಳಿಸಿದ್ದಾರೆ.