ಪೊನ್ನಂಪೇಟೆ, ಏ. ೧: ತಿತಿಮತಿಯಲ್ಲಿರುವ ಗಿರಿಜನರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘ (ಲ್ಯಾಂಪ್ಸ್) ಸೊಸೈಟಿ ವತಿಯಿಂದ ಕಾಡುಗಳಲ್ಲಿ ದೊರೆಯುವ ಕಿರು ಉತ್ಪನ್ನಗಳನ್ನು ಇದೀಗ ಸಂಗ್ರಹಿಸಲಾಗುತ್ತದೆ. ಈ ಕುರಿತು ಪ್ರಕ್ರಿಯೆ ಆರಂಭಗೊAಡಿದೆ ಎಂದು ತಿತಿಮತಿಯ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಪಿ.ಕೆ. ಮಣಿಕುಂಜ್ಞ ತಿಳಿಸಿದ್ದಾರೆ.
ತಿತಿಮತಿ ಲ್ಯಾಂಪ್ಸ್ ಸೊಸೈಟಿ ವತಿಯಿಂದ ಕಾಲಾನುಗುಣಕ್ಕೆ ಸರಿಯಾಗಿ ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಗಿರಿಜನರಿಗಾಗಿರುವ ಸಹಕಾರ ಸಂಘದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲಾಗುತ್ತದೆ. ಜೊತೆಗೆ ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸುವವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಈ ಕಾರಣದಿಂದಲೇ ಕಳೆದ ಬಾರಿಯೂ ತಿತಿಮತಿ ಲ್ಯಾಂಪ್ಸ್ ಸೊಸೈಟಿ ಲಾಭದ ಹಾದಿಯಲ್ಲಿ ಸಾಗುವಂತಾಯಿತು ಎಂದು ಹೇಳಿದರು.
ಮಾರ್ಚ್ ನಂತರದ ಕಾಲಾವಧಿಯು ಅಂಟುವಾಳಕಾಯಿ ಮತ್ತು ಸೀಗೆಕಾಯಿಯ ಸಮಯವಾದ್ದರಿಂದ ಇವುಗಳನ್ನು ಖರೀದಿಸಲಾಗುವುದು. ಜೊತೆಗೆ ಕಾಡು ಜೇನು, ಹುತ್ತ ಜೇನು, ರಾಮಪತ್ರೆ, ಮರಾಠಿ ಮೊಗ್ಗು, ಮರಪಾಚಿ ಮೊದಲಾದವುಗಳನ್ನು ಖರೀದಿ ಮಾಡಲಾಗುವುದು.
ಕಾಡಿನ ಈ ಕಿರು ಉತ್ಪನ್ನಗಳನ್ನು ವೀರಾಜಪೇಟೆ ಮತ್ತು ಪೊನ್ನಂಪೇಟೆ ಪೊನ್ನಂಪೇಟೆ, ಏ. ೧: ತಿತಿಮತಿಯಲ್ಲಿರುವ ಗಿರಿಜನರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘ (ಲ್ಯಾಂಪ್ಸ್) ಸೊಸೈಟಿ ವತಿಯಿಂದ ಕಾಡುಗಳಲ್ಲಿ ದೊರೆಯುವ ಕಿರು ಉತ್ಪನ್ನಗಳನ್ನು ಇದೀಗ ಸಂಗ್ರಹಿಸಲಾಗುತ್ತದೆ. ಈ ಕುರಿತು ಪ್ರಕ್ರಿಯೆ ಆರಂಭಗೊAಡಿದೆ ಎಂದು ತಿತಿಮತಿಯ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಪಿ.ಕೆ. ಮಣಿಕುಂಜ್ಞ ತಿಳಿಸಿದ್ದಾರೆ.
ತಿತಿಮತಿ ಲ್ಯಾಂಪ್ಸ್ ಸೊಸೈಟಿ ವತಿಯಿಂದ ಕಾಲಾನುಗುಣಕ್ಕೆ ಸರಿಯಾಗಿ ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಗಿರಿಜನರಿಗಾಗಿರುವ ಸಹಕಾರ ಸಂಘದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲಾಗುತ್ತದೆ. ಜೊತೆಗೆ ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸುವವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಈ ಕಾರಣದಿಂದಲೇ ಕಳೆದ ಬಾರಿಯೂ ತಿತಿಮತಿ ಲ್ಯಾಂಪ್ಸ್ ಸೊಸೈಟಿ ಲಾಭದ ಹಾದಿಯಲ್ಲಿ ಸಾಗುವಂತಾಯಿತು ಎಂದು ಹೇಳಿದರು.
ಮಾರ್ಚ್ ನಂತರದ ಕಾಲಾವಧಿಯು ಅಂಟುವಾಳಕಾಯಿ ಮತ್ತು ಸೀಗೆಕಾಯಿಯ ಸಮಯವಾದ್ದರಿಂದ ಇವುಗಳನ್ನು ಖರೀದಿಸಲಾಗುವುದು. ಜೊತೆಗೆ ಕಾಡು ಜೇನು, ಹುತ್ತ ಜೇನು, ರಾಮಪತ್ರೆ, ಮರಾಠಿ ಮೊಗ್ಗು, ಮರಪಾಚಿ ಮೊದಲಾದವುಗಳನ್ನು ಖರೀದಿ ಮಾಡಲಾಗುವುದು.
ಕಾಡಿನ ಈ ಕಿರು ಉತ್ಪನ್ನಗಳನ್ನು ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಯಾರೇ ಹೊಂದಿದ್ದರೂ ಅವುಗಳನ್ನು ನೇರವಾಗಿ ತಿತಿಮತಿ-ಹುಣಸೂರು ಮುಖ್ಯ ರಸ್ತೆ ಬದಿಯಲ್ಲಿರುವ ಲ್ಯಾಂಪ್ಸ್ ಸೊಸೈಟಿಯ ಕಚೇರಿಗೆ ಬಂದು ನೀಡಬಹುದಾಗಿದೆ ಎಂದು ಮಾಹಿತಿ ನೀಡಿರುವ ಮಣಿಕುಂಜ್ಞ ಅವರು, ಸೂಚಿತ ಕಿರು ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿದ್ದರೆ ಅವುಗಳನ್ನು ಸೊಸೈಟಿ ವತಿಯಿಂದಲೇ ಸ್ಥಳಕ್ಕೆ ತೆರಳಿ ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಲ್ಯಾಂಪ್ಸ್ ಸೊಸೈಟಿ ವತಿಯಿಂದ ಖರೀದಿಸಲಾಗುವ ಉತ್ಪನ್ನಗಳಿಗೆ ನ್ಯಾಯೋಚಿತವಾದ ಬೆಲೆ ನೀಡಲಾಗುವುದು. ಕಿರು ಉತ್ಪನಗಳನ್ನು ಶ್ರಮಪಟ್ಟು ಸಂಗ್ರಹಿಸಿದವರಿಗೆ ಯಾವುದೇ ಕಾರಣಕ್ಕೂ ಮೋಸವಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿರುವ ಮಣಿಕುಂಜ್ಞ ಅವರು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳಾದ ೭೮೯೯೨೬೩೩೪೫ ೯೪೮೪೪೮೪೧೦೫ ಅಥವಾ ೯೯೪೫೬೩೯೨೫೩ ಅನ್ನು ಸಂಪರ್ಕಿಸುವAತೆ ಕೋರಿದ್ದಾರೆ.
ಲ್ಯಾಂಪ್ಸ್ ಸೊಸೈಟಿ ವತಿಯಿಂದ ಮಾರಾಟ ಮಾಡಲಾಗುವ ಜೇನು-ತುಪ್ಪದ ಬಗ್ಗೆ ಬಹಳ ಬೇಡಿಕೆ ಇದೆ. ಕಳೆದ ಬಾರಿ ೨೫೦ ಕೆ.ಜಿ.ಗೂ ಅಧಿಕ ಜೇನು-ತುಪ್ಪವನ್ನು ಸಂಗ್ರಹಿಸಿ ಮಾರಾಟ ಮಾಡಲಾಗಿತ್ತು. ಮಾರಾಟವಾದ ಜೇನು-ತುಪ್ಪದ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಗೊಂಡಿದೆ ಎಂದು ಮಣಿಕುಂಜ್ಞ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.