ಕೂಡಿಗೆ, ಏ. ೧: ರಾಷ್ಟಿçÃಯ ಹೈನು ಅಭಿವೃದ್ಧಿ ಮಂಡಳಿ ಹಾಗೂ ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಕೊಡಗು ಜಿಲ್ಲಾ ಜೇನು ಉತ್ಪಾದಕರ ಸಹಕಾರ ಸಂಘ ಸ್ಥಾಪನೆ ಹಿನ್ನಲೆಯಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡುಮಂಗಳೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾಮಸಭೆ ನಡೆಯಿತು.
ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಕೆ. ಜಯಪ್ರಕಾಶ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕೃಷಿ ಮತ್ತು ಹಾಲು ಉತ್ಪಾದರ ಸಹಕಾರ ಸಂಘದAತೆ ಜೇನು ಉತ್ಪಾದನೆಗೆ ಯೋಜನೆ ಹಮ್ಮಿಕೊಳ್ಳಲಾಗಿದೆ. ೧೯೦೫ ರಲ್ಲಿ ಕೃಷಿ ಸಹಕಾರ ಸಂಘ ಸ್ಥಾಪನೆಯಾಗಿದ್ದು, ೧೯೪೬ ರಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಯಾಯಿತು. ಇದೀಗ ೭೫ ವರ್ಷಗಳ ಬಳಿಕ ಜೇನು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೆ ಚಿಂತನೆ ಹರಿಸಲಾಗಿದೆ. ಸಣ್ಣಪುಟ್ಟ ಪ್ರಮಾಣದಲ್ಲಿ ಜೇನು ಉತ್ಪಾದನೆಯಾಗುತ್ತಿದೆಯಾದರೂ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಜೇನು ವ್ಯಾಪಿಸಬೇಕಾದರೆ ಸಹಕಾರ ಸಂಘದ ಸ್ಥಾಪನೆಯ ಅಗತ್ಯವಿದೆ ಎಂದರು.
ಜಾತಿ, ಧರ್ಮ ಮೀರಿದ ಉತ್ಪಾದನಾ ಕ್ಷೇತ್ರವಾಗಿರುವ ಹಾಲು ಉತ್ಪಾದಕರ ಸಂಘದAತೆ ಕೊಡಗು ಜಿಲ್ಲೆಯಲ್ಲಿ ಜೇನು ಸಹಕಾರ ಸಂಘ ಕೂಡ ಬೆಳೆಯಬೇಕಿದೆ. ಸಂಘದ ಸದಸ್ಯರಾಗುವವರು ನಿಸ್ವಾರ್ಥ ಸೇವೆ ಮೂಲಕ ಸಹಕಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ಕುಮಾರ್ ನೆರ ವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ವ್ಯವಸ್ಥಾಪಕ ಪದ್ಮನಾಭ ವಹಿಸಿದ್ದರು. ರಾಷ್ಟಿçÃಯ ಹೈನು ಅಭಿವೃದ್ಧಿ ಮಂಡಳಿ ಅಧಿಕಾರಿ ರಂಜಿನಿ ತ್ರೀ ಪಾಟಿ ಅವರು ಜೇನು ಅಭಿವೃದ್ಧಿ ಪಡಿಸುವ ಯೋಜನೆಗಳ ಬಗ್ಗೆ ಮತ್ತು ಸಹಕಾರ ಸಂಘಗಳ ರಚನೆ ಬಗ್ಗೆ ಗ್ರಾಮಸಭೆಯಲ್ಲಿ ಮಾತನಾಡಿದರು.
ಹಾಸನ ಒಕ್ಕೂಟದ ವ್ಯವಸ್ಥಾಪಕ ವೇಣುಗೋಪಾಲ ಜೇನು ಕೃಷಿ ತರಬೇತಿಯ ಬಗ್ಗೆ ರೈತರಿಗೆ ಯೋಜನಾ ಮಾಹಿತಿಯನ್ನು ನೀಡಿದರು.