ಮಡಿಕೇರಿ, ಏ. ೧: ಕೊಡವರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುವುದಲ್ಲದೆ, ಕೊಡವರ ಹಕ್ಕನ್ನು ಪ್ರಶ್ನಿಸಿ ಜಿಲ್ಲೆಯ ಸಾಮರಸ್ಯ ಕದಡುವ ಕೆಲಸ ವೈ.ಕೆ. ಚೇತನ್ ಅವರಿಂದ ಆಗುತ್ತಿದೆ ಎಂದು ಆರೋಪಿಸಿ ಕೊಡವಾಮೆರ ಕೊಂಡಾಟ ಸಂಘಟನೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಕೊಡವರ ಕೋವಿ ಹಕ್ಕು ಸೇರಿದಂತೆ ಹಲವು ವಿಚಾರಗಳನ್ನು ವಿರೋಧಿಸುವುದಲ್ಲದೆ ಕೊಡವ ಸಾಧಕರ ವಿರುದ್ಧ ಮಾತನಾಡುತ್ತಿರುವ ಚೇತನ್ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸಂಘಟನೆ ದೂರು ನೀಡಿದೆ. ಕೊಡವರು ಸ್ಥಳೀಯ ಠಾಣೆಗಳಲ್ಲಿ ದೂರು ನೀಡಬೇಕು ಎಂದು ಕರೆ ನೀಡಿದೆ.