ಮಡಿಕೇರಿ, ಏ. ೧: ಸಣ್ಣ ಕಾಫಿ ಬೆಳೆಗಾರರಿಗೆ (೧೦ ಹೆಕ್ಟೇರ್ ಒಳಗಿನ ಕಾಫಿ ತೋಟ ಹೊಂದಿರುವ ಬೆಳೆಗಾರರು) ೨೦೨೨-೨೩ನೇ ಸಾಲಿನಲ್ಲಿ ತಾ. ೩೦.೦೯.೨೦೨೨ರವರೆಗೆ ಕೈಗೊಳ್ಳುವ ಕಾಫಿ ಮರುನಾಟಿ ಹಾಗೂ ಜಲಸಂವರ್ಧನ ಕಾರ್ಯಕ್ರಮಗಳ ಅಡಿಯಲ್ಲಿ ಕಾಫಿ ಮಂಡಳಿಯಿAದ ಸಹಾಯಧನ ಸೌಲಭ್ಯವಿದೆ.
ಆದ್ದರಿಂದ, ಬೆಳೆಗಾರರು ತಮ್ಮ ತೋಟಗಳಲ್ಲಿ ಕಾಫಿ ಮರುನಾಟಿ, ಕೆರೆ - ತೆರೆದ ಬಾವಿ ಅಭಿವೃದ್ಧಿಪಡಿಸಲು ಹಾಗೂ ತುಂತುರು ನೀರಾವರಿ, (Sಠಿಡಿiಟಿಞಟeಡಿ) ಹನಿ ನೀರಾವರಿ (ಆಡಿiಠಿ iಡಿಡಿigಚಿಣioಟಿ) ಅಳವಡಿಸಿಕೊಳ್ಳಲು ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿ ಪ್ರಕಟಣೆ ತಿಳಿಸಿದೆ.