ಮಡಿಕೇರಿ, ಮಾ. ೩೧: ಕೆಲವು ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅಸಮಾಧಾನ ವ್ಯಕ್ತಪಡಿಸಿ ಕರ್ತವ್ಯ ನಿರ್ವಹಣೆಯಲ್ಲಿ ಸೋಮಾರಿತನ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಘಟನೆ ಕೆ.ಡಿ.ಪಿ. ಸಭೆಯಲ್ಲಿ ನಡೆಯಿತು.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಕುರಿತಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೆಲವು ಇಲಾಖಾಧಿಕಾರಿಗಳು ಅಭಿವೃದ್ಧಿ ಕಾರ್ಯಗಳ ಪ್ರಗತಿ ಸಂಬAಧ ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಸಮರ್ಪಕ ಮಾಹಿತಿ ನೀಡದ ಕುರಿತು ಸಿಡಿಮಿಡಿಗೊಂಡ ಸಚಿವ ನಾಗೇಶ್ ಅವರು ಕೆ.ಡಿ.ಪಿ. ಸಭೆ ಎಂದರೆ ಅದಕ್ಕೆ ಅದರದೇ ಆದ ಮಹತ್ವವಿದೆ. ಆದರೆ ಹಿಂದಿನ ಸಭೆಗಳಲ್ಲಿ ಚರ್ಚೆಗೊಂಡ ಸಮಸ್ಯೆಗಳು ಈಗಲೂ ಪರಿಹಾರ ಕಾಣದೆ ಬಾಕಿ ಉಳಿದಿವೆ. ಅಭಿವೃದ್ಧಿ ಕೆಲಸಗಳ ಸಂಬAಧ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತನ್ನಿ. ಅವುಗಳ ಪರಿಹಾರಕ್ಕೆ ನಾವು ಕೂಡ ಸಹಕಾರ ನೀಡುತ್ತೇವೆ. ಅದನ್ನು ಬಿಟ್ಟು ಕೆಲಸ ಕಾರ್ಯಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷö್ಯ ತೋರಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.

ಇಂದಿನ ಸಭೆಯಲ್ಲಿ ಚರ್ಚೆಯಾದ ಸಮಸ್ಯೆಗಳು ಆದಷ್ಟು ಶೀಘ್ರ ಪರಿಹಾರಗೊಳ್ಳಬೇಕು. ತಾನು ಮತ್ತೊಮ್ಮೆ ಸಭೆ ಕರೆದ ವೇಳೆ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿದ್ದಲ್ಲಿ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ವರ್ಗಕ್ಕೆ ಎಚ್ಚರಿಕೆ ನೀಡಿದರು.

ಸಭೆಗೆ ಡಿಎಫ್‌ಓ ಗೈರು ಹಾಜರಾಗಿದ್ದ ಬಗ್ಗೆ ಕಿಡಿಕಾರಿದ ಸಚಿವರು ಯಾಕಾಗಿ ಡಿಎಫ್‌ಓ ಸಭೆಗೆ ಬಂದಿಲ್ಲ ಎಂದು ಸಭೆಯಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿ ಮೊಯ್ಸಿನ್ ಪಾಷಾ ಅವರನ್ನು ಪ್ರಶ್ನಿಸಿದರು. ಈ ವೇಳೆ ಡಿಎಫ್‌ಓ ಹುಲಿ ಕಾರ್ಯಾಚರಣೆಗೆ ತೆರಳಿದ್ದಾರೆ ಎಂಬ ಉತ್ತರ ಬಂದಾಗ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಿಇಓ ಅವರಿಗೆ ಮಾಹಿತಿ ನೀಡಿದ್ದಾರೆಯೆ ಎಂದು ಸ್ಪಷ್ಟನೆ ಬಯಸಿದರು. ಆದರೆ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದ ಕಾರಣ ಆಕ್ರೋಶಗೊಂಡ ಸಚಿವರು ಡಿಸಿ ಹಾಗೂ ಸಿಇಓ ಅವರಿಗೂ ಮಾಹಿತಿ ನೀಡದೆ ಕೆಡಿಪಿ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿ ಸರ್ಕಾರಕ್ಕಿಂತಲೂ ದೊಡ್ಡವರೇನು? ಸಭೆಯ ಬಗ್ಗೆ ಗಂಭೀರತೆ ಇಲ್ಲವೆ ಎಂದು ಹಾರಿಹಾಯ್ದರು. ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ಯೋಜನೆಗಳಿಗೆ ಸಂಬAಧಿಸಿದAತೆ ಸಲ್ಲಿಕೆಯಾಗಿದ್ದ ಅರ್ಜಿಗಳು ಸಮರ್ಪಕವಗಿ ವಿಲೇವಾರಿಯಾಗದ ಬಗ್ಗೆ ಸಚಿವರು ಗರಂ ಆದರು. ಒಂದು ವರ್ಷಗಳಿಂದಲೂ ಅರ್ಜಿ ವಿಲೇವಾರಿ ಆಗಿಲ್ಲ ಎಂದರೆ ನಾಚಿಕೆಯಾಗುವುದಿಲ್ಲವೆ ಎಂದು ಕಿಡಿಕಾರಿದರು. ಈ ಸಂದರ್ಭ ವಿದ್ಯುತ್ ಯೋಜನೆ ಅನುಷ್ಠಾನ ಸಂಬAಧ ಅರಣ್ಯ ಇಲಾಖೆ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿದ್ಯುತ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಸಭೆ ನಡೆಸಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಏನೇ ಗೊಂದಲಗಳಿದ್ದರೂ ಸರಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಸುಳ್ಳು ಮಾಹಿತಿಗೆ ಗರಂ

ವಿದ್ಯುತ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಭೀಮ್‌ಶೆಟ್ಟಿ ಅವರು ಸಭೆಗೆ ಹಾಜರಾಗಿರಲಿಲ್ಲ. ಈ ಬಗ್ಗೆ ಸಚಿವರು ಮಾಹಿತಿ ಬಯಸಿದಾಗ ಭೀಮ್‌ಶೆಟ್ಟಿಯವರು ಮೇಲಧಿಕಾರಿಗಳ ಸಭೆಗೆ ತೆರಳಿದ್ದಾರೆ ಎಂದು ಸಭೆಯಲ್ಲಿದ್ದ ಕಾರ್ಯಪಾಲಕ ಅಭಿಯಂತರ ಅಶೋಕ್ ಮಾಹಿತಿ ನೀಡಿದರು. ಈ ಸಂದರ್ಭ ಅಶೋಕ್ ಅವರ ಬಳಿಯಿಂದ ಮೇಲಧಿಕಾರಿಯವರ ದೂರವಾಣಿ ಸಂಖ್ಯೆ ಪಡೆದು ಕರೆ ಮಾಡಿದ ಸಚಿವರು ಸಭೆಯ ಬಗ್ಗೆ ವಿಚಾರಿಸಿದರು.

(ಮೊದಲ ಪುಟದಿಂದ) ಈ ಸಂದರ್ಭ ಅಂತಹ ಯಾವುದೇ ಸಭೆಯನ್ನು ತಾನು ಕರೆದಿಲ್ಲ ಎಂದು ಮೇಲಧಿಕಾರಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೋಪಗೊಂಡ ಸಚಿವ ನಾಗೇಶ್ ಸರ್ಕಾರದ ಸಂಬಳ ಸೌಲಭ್ಯ ಎಲ್ಲವನ್ನು ಪಡೆದುಕೊಂಡು ಎಷ್ಟೊಂದು ಧೈರ್ಯದಿಂದ ಸುಳ್ಳು ಹೇಳುತ್ತೀರಾ ಇದೇ ಕೊನೆ ಇನ್ನು ಮುಂದೆ ಈ ರೀತಿ ಮಾಡಿದರೆ ಸೇವೆಯಿಂದ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.

ನೀರು-ಕರೆಂಟ್ ಕೊಡಬೇಡಿ

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಅರಣ್ಯ ಇಲಾಖೆ ಅಡ್ಡಿ ಮಾಡುತ್ತಿದೆ. ಕಳ್ಳರು ಅರಣ್ಯದಿಂದ ಮರ ಕಳವು ಮಾಡಿಕೊಂಡು ಹೋದರೂ ಏನೂ ಮಾಡದ ಅರಣ್ಯ ಇಲಾಖೆ ಅಭಿವೃದ್ಧಿ ಕೆಲಸಗಳಿಗೆ ಮಾತ್ರ ಕಾನೂನಿನ ನೆಪವೊಡ್ಡಿ ತೊಂದರೆ ಕೊಡುತ್ತದೆೆ. ಇದೇ ರೀತಿ ಮುಂದುವರಿದರೆ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗೆ ನೀರು ಹಾಗೂ ವಿದ್ಯುತ್ ವ್ಯವಸ್ಥೆ ಕೊಡಬೇಡಿ ಎಂದು ಶಾಸಕ ಕೆ.ಜಿ. ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ ಎಂದು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಕೂಟಿಯಾಲ ಸೇತುವೆ ಸಂಬAಧ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ, ಜಿ.ಪಂ. ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳನ್ನು ಒಳಗೊಂಡು ಬೆಂಗಳೂರಿನಲ್ಲಿ ಸಭೆ ಏರ್ಪಡಿಸುವುದಾಗಿ ರವಿಕುಶಾಲಪ್ಪ ಹೇಳಿದರು.

ಮಾನ-ಮರ್ಯಾದೆ ಇಲ್ವಾ...?

ಕೆಪಿಟಿಸಿಎಲ್ ಜಿಲ್ಲೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಿದ್ಯುತ್ ಸ್ಥಾವರ ನಿರ್ಮಾಣ ಸಂಬAಧ ನಿರ್ಲಕ್ಷö್ಯ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ಅಪ್ಪಚ್ಚು ರಂಜನ್ ಎರಡು-ಮೂರು ವರ್ಷಗಳಿಂದ ಸೂಚನೆ ನೀಡುತ್ತಿದ್ದರೂ ನೀವುಗಳು ಪಾಲಿಸುತ್ತಿಲ್ಲ. ನಿಮಗೆ ಮಾನ ಮರ್ಯಾದೆ ಇಲ್ವಾ...? ಯೂಸ್‌ಲೆಸ್ ಫೆಲೋಸ್ ನೀವು ಎಂದು ಅಧಿಕಾರಿಗಳನ್ನು ಜರಿದರು. ಯುಜಿಡಿ ಸಂಬAಧ ಕೆ. ಬಾಡಗದಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪನೆಗೆ ಖಾಸಗಿ ವ್ಯಕ್ತಿಯ ಜಾಗ ಅಡ್ಡಿಯಾಗುತ್ತಿದ್ದು, ಬದಲಿ ಜಾಗ ಪಡೆಯಲು ಆ ವ್ಯಕ್ತಿ ಒಪ್ಪದ ಕಾರಣ ಈಗಾಗಲೇ ಗುರುಸಿರುವ ಜಾಗವನ್ನು ಜಿಲ್ಲಾಡಳಿತ ವಶÀಕ್ಕೆ ಪಡೆಯುವಂತೆ ರಂಜನ್ ಹೇಳಿದರು.

ಅಧಿಕಾರ ಸದುಪಯೋಗವಾಗಬೇಕು

ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನಪರಿಷತ್ ಸದಸ್ಯ ಬೋಜೇಗೌಡ ಅಧಿಕಾರಿಗಳ ಅಸಮರ್ಪಕ ಮಾಹಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮಾಹಿತಿ ನೀಡದೆ ಸಭೆಗೆ ಗೈರು ಹಾಜರಾಗುವ; ಸರಿಯಾಗಿ ಕೆಲಸ ಮಾಡದಿರುವ ಅಧಿಕಾರಿಗಳ ವಿರುದ್ಧ ಸಚಿವರು ಹಾಗೂ ಜಿಲ್ಲಾಧಿಕಾರಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ ಅವರು ಅಧಿಕಾರಿಗಳು ತಮಗೆ ಸಿಕ್ಕಿರುವ ಅಧಿಕಾರವನ್ನು ಜನರ ಒಳಿತಿಗಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಪರಿಕರಗಳನ್ನು, ಮಳೆ ಹಾನಿಯಿಂದ ಮನೆ ಕಳೆದುಕೊಂಡವರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು.

ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿ.ಪಂ. ಸಿಇಓ ಭಂವರ್ ಸಿಂಗ್ ಮೀನಾ, ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.