ಮಡಿಕೇರಿ, ಏ. ೧: ಸುಂಟಿಕೊಪ್ಪ ಮೂಲದ ಸಾಹಿತಿ ಅಬ್ದುಲ್

ರಶೀದ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯಶ್ರೀ’ ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಅಬ್ದುಲ್ ರಶೀದ್ ಅವರು ಸೇರಿದಂತೆ ೯ ಸಾಹಿತಿಗಳು ‘ಸಾಹಿತ್ಯಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.