ಮಡಿಕೇರಿ, ಏ. ೧: ಜಿಲ್ಲೆಯವರಾದ ಲೆಫ್ಟಿನೆಂಟ್ ಜನರಲ್ ಚೆನ್ನೀರ ಬನ್ಸಿ ಪೊನ್ನಪ್ಪ ಅವರು ಭಾರತೀಯ ಸೇನಾಪಡೆಯ ಅಡ್ಜುಟೆಂಟ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ‘ಡೆಪ್ಯುಟಿ ಚೀಫ್ ಆಫ್ ಆರ್ಮಿ ಸ್ಟಾಫ್’ ಆಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ ಪೊನ್ನಪ್ಪ ಅವರನ್ನು ಇದೀಗ ಈ ಮಹತ್ವದ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ಭೂಸೇನೆಯಲ್ಲಿ ಮುಖ್ಯವಾಗಿ ಆಡಳಿತ ಹಾಗೂ ಸರಬರಾಜು ವಿಭಾಗಗಳಿದ್ದು, ಆಡಳಿತ ವಿಭಾಗದ ಮುಖ್ಯಸ್ಥರನ್ನು ಅಡ್ಜುಟೆಂಟ್ ಜನರಲ್ ಎಂದು ಕರೆಯಲ್ಪಡಲಾಗುತ್ತದೆ. ಈ ಹುದ್ದೆಯ ಮೂಲಕ ದೇಶದ ಸೈನಿಕರ ವರ್ಗಾವಣೆ, ರಾಜೀನಾಮೆ ಸೇರಿದಂತೆ ಇತರ ಆಡಳಿತ ವಿಚಾರಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಪೊನ್ನಪ್ಪ ಅವರು ವಹಿಸಲಿದ್ದು ನೇರವಾಗಿ ‘ಚೀಫ್ ಆಫ್ ದಿ ಆರ್ಮಿ ಸ್ಟಾಫ್’ ಜನರಲ್ ಮನೋಜ್ ಮುಕುಂದ್ ನರ್ವಾನೆ ಅವರಿಗೆ ರಿಪೋರ್ಟ್ ಮಾಡಲಿದ್ದಾರೆ.
ಅತಿ ವಿಶಿಷ್ಟ ಸೇವಾ ಮೆಡಲ್ ಹಾಗೂ ವಿಶಿಷ್ಟ ಸೇವಾ ಮೆಡಲ್‌ಗೆ ಭಾಜನರಾಗಿರುವ ಬನ್ಸಿ ಪೊನ್ನಪ್ಪ ಅವರು ಮೂಲತಃ ಜಿಲ್ಲೆಯ ನಾಂಗಾಲ ಗ್ರಾಮದವರು. ಆಫ್ರಿಕಾದ ಕಾಂಗೋ ದೇಶದಲ್ಲಿ ನಡೆದ ಕಲಹ ಸಂದರ್ಭ ಯುನೈಟೆಡ್ ನೇಷನ್ಸ್ನ ‘ಒಔಓUSಅಔ’ (ಯುನೈಟೆಡ್ ನೇಷನ್ಸ್ನ ಶಾಂತಿಪಾಲನೆ ದಳ)ದ ಕಮಾಂಡರ್ ಆಗಿ ಪ್ರಮುಖ ಪಾತ್ರ ವಹಿಸಿದ್ದರು.