ಭಾಗಮಂಡಲ, ಏ. ೧: ಭಾಗಮಂಡಲದ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ವತಿಯಿಂದ ಬೆಳೆಗಾರರಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ನೂತನವಾಗಿ ಆವಿಷ್ಕಾರವಾದ ಅಡಿಕೆ ಮರ ಮತ್ತು ತೆಂಗಿನ ಮರ ಹತ್ತುವ ಉಪಕರಣಗಳ ಪ್ರಾತ್ಯಕ್ಷಿಕೆಯನ್ನು ಮಂಗಳವಾರ ಏರ್ಪಡಿಸಲಾಗಿತ್ತು. ಚೇರಂಬಾಣೆಯ ಪಟ್ಟಮಾಡ ಗವಿನ್ ಮತ್ತು ಜೀತು ಅವರ ಅಡಿಕೆ ಹಾಗೂ ತೆಂಗಿನ ತೋಟದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು. ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ಅಧ್ಯಕ್ಷ ಕೋಡಿ ಪೊನ್ನಪ್ಪ, ಉಪಾಧ್ಯಕ್ಷ ಕಿಶೋರ್ ಬಿ.ಎಂ. ನಿರ್ದೇಶಕರಾದ ದೇವರಾಜ್, ವಿಠಲ, ಪಾರ್ವತಿ, ತಮ್ಮಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿನ್ನಿ, ತೋಟಗಾರಿಕಾ ಅಧಿಕಾರಿ ಬಿ.ಡಿ. ವಸಂತ ಹಾಗೂ ಇನ್ನೂರು ಮಂದಿ ರೈತರು ಪಾಲ್ಗೊಂಡಿದ್ದರು. ಅಡಿಕೆ ಮತ್ತು ತೆಂಗಿನ ಮರ ಹತ್ತುವ ಯಂತ್ರಗಳು ಕಂಪೆನಿಯ ಎಲ್ಲಾ ಶಾಖೆಗಳಲ್ಲಿ ಲಭ್ಯವಿದ್ದು ಆಸಕ್ತ ರೈತರು ಅವುಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.