ಗೋಣಿಕೊಪ್ಪ ವರದಿ, ಮಾ. ೩೧: ಪ್ರಶಸ್ತಿ ಸುತ್ತಿಗೇರುವ ಹುಮ್ಮಸ್ಸಿನಲ್ಲಿದ್ದ ಹಾಕಿ ಕರ್ನಾಟಕ ಬಾಲಕಿಯರ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಪಂದ್ಯಾವಳಿಯಿAದ ಹೊರ ಬಿದ್ದಿದೆ.
ಹಾಕಿ ಇಂಡಿಯಾ ವತಿಯಿಂದ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯುತ್ತಿರುವ ೧೨ನೇ ವರ್ಷದ ಟೂರ್ನಿಯಲ್ಲಿ ಕೊಡಗು ಆಟಗಾರರನ್ನು ಒಳಗೊಂಡಿರುವ ತಂಡವು ಹರಿಯಾಣ ತಂಡದ ವಿರುದ್ಧ ೨-೬ ಗೋಲುಗಳಿಂದ ಸೋಲನುಭವಿಸಿತು.
೩೩ ನೇ ನಿಮಿಷದಲ್ಲಿ ಸೀಮಾ ಆನಂದ್‌ರಾವ್ ಪವಾರ್, ೬೦ನೇ ನಿಮಿಷದಲ್ಲಿ ಬಾರಿಕೆ ಜೀವಿತಾ ತಲಾ ಒಂದೊAದು ಗೋಲು ಹೊಡೆದು ಸೋಲಿನ ಅಂತರ ತಪ್ಪಿಸಿದರು. ಲೀಗ್ ಪಂದ್ಯದಲ್ಲಿ ಅಜೇಯವಾಗಿದ್ದ ತಂಡ ಪ್ರಶಸ್ತಿ ಸುತ್ತಿಗೇರುವ ನಿರೀಕ್ಷೆ ಹುಸಿಯಾಗಿದೆ.
ಪಾಂಡAಡ ದೇಚಮ್ಮ ಗಣಪತಿ, ಡಿ.ಎನ್. ತೇಜಸ್ವಿನಿ, ಬಿ.ಎಂ. ಕೀರ್ತನಾ, ಬಿ.ಜಿ. ಜೀವಿತಾ, ಸಿದ್ದಂಗAಗಾ, ನಿಸರ್ಗ, ವಾಣಿ, ತಡಿಯಪ್ಪನ ಸುಚಿತಾ, ಕೈಬಿಲಿ ದಿಲನ್, ಕುಂದಚಿರ ತಾಜ್ ಬೆಳ್ಯಪ್ಪ, ಅಪ್ಸರ. ತರಬೇತುದಾರರಾಗಿ ಬಿ.ಎಂ. ಕೋಮಲಾ ತಂಡದಲ್ಲಿದ್ದರು.