ಶನಿವಾರಸಂತೆ, ಮಾ. ೩೧: ಪಟ್ಟಣದ ಶ್ರೀರಾಮ ಮಂದಿರದಲ್ಲಿ ತಾ. ೨ ರಂದು ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೭ ಗಂಟೆಗೆ ಪಟ್ಟಾಭಿರಾಮನಿಗೆ ಪಂಚಾಮೃತ ಅಭಿಷೇಕ, ೧೦ ಗಂಟೆಗೆ ಮಹಾ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ ೬.೩೦ಕ್ಕೆ ಪಂಚಾAಗ ಶ್ರವಣ, ೭.೩೦ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುತ್ತದೆ.
ತಾ. ೫ ರಂದು ಬೆಳಿಗ್ಗೆ ೮.೩೦ಕ್ಕೆ ಉತ್ಸವ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ, ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರ್ಣ, ದೇವತಾ ನಾಂದಿ, ಕಳಶ ಸ್ಥಾಪನೆ, ಕೌತುಕ ಬಂಧನ, ಮಹಾಮಂಗಳಾರತಿ, ಸಂಜೆ ೫ ಗಂಟೆಗೆ ಅಂಕುರಾರ್ಪಣ, ವಿಗ್ರಹಗಳಿಗೆ ಪಂಚಗವ್ಯ ಶುದ್ಧಿ, ಅಗ್ನಿ ಉತ್ತಾರಣ, ಆದಿವಾಸ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಡೆಯುತ್ತದೆ.
ತಾ. ೬ ರಂದು ಬೆಳಿಗ್ಗೆ ೭ ಗಂಟೆಗೆ ಪಟ್ಟಾಭಿರಾಮ ಸಮೇತ ಸೀತಾ, ಲಕ್ಷö್ಮಣ, ಆಂಜನೇಯ, ಉತ್ಸವ ಮೂರ್ತಿಗಳಿಗೆ ನೇತ್ರೋನ್ಮಿಲನ, ಪ್ರಾಣ ಪ್ರತಿಷ್ಠಾಪನೆ, ಕಲಾ ಆಹಾವನೆ, ಪ್ರತಿಷ್ಠಾಂಗ ಹೋಮ ಹಾಗೂ ರಾಮ ತಾರಕ ಹೋಮ, ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ ಎಂದು ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.