ಸೋಮವಾರಪೇಟೆ, ಮಾ. ೩೧: ಇಲ್ಲಿನ ರೋಟರಿ ಕ್ಲಬ್ ಆಶ್ರಯದಲ್ಲಿ ಸ್ಥಳೀಯ ಸಂತ ಜೋಸೆಫರ ಕಾಲೇಜಿನಲ್ಲಿ ನೂತನವಾಗಿ ರೋರ‍್ಯಾಕ್ಟ್ ಘಟಕವನ್ನು ಸ್ಥಾಪಿಸಲಾಗಿದ್ದು, ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ರೋಟರಿ ಅಧ್ಯಕ್ಷ ಪ್ರಕಾಶ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಪದಗ್ರಹಣ ಅಧಿಕಾರಿಯಾಗಿದ್ದ ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಡಾ. ಚಂದ್ರಶೇಖರ್ ಅವರು ಪ್ರಮಾಣ ವಚನ ಬೋಧಿಸಿದರು. ಕಾರ್ಯ ಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ರಾಯಪ್ಪ, ಪಿ.ಜೆ. ಜಸ್ಟಿನ್, ರೋಟ ರ‍್ಯಾಕ್ಟ್ ಚೇರ್‌ಮೆನ್ ಭರತ್ ಭೀಮಯ್ಯ, ರೋಟರಿ ಕಾರ್ಯದರ್ಶಿ ಧರ್ಮಪ್ಪ, ರೋರ‍್ಯಾಕ್ಟ್ ಸಂಯೋಜಕಿ ಚೈತ್ರ ಅವರುಗಳು ಭಾಗವ ಹಿಸಿದ್ದರು. ಕಾಲೇಜಿನ ರೋರ‍್ಯಾಟ್ ಅಧ್ಯಕ್ಷರಾಗಿ ಸಿ.ವಿ. ಸಿಂಧು, ಕಾರ್ಯ ದರ್ಶಿಯಾಗಿ ಎ.ಸಿ. ಸುಮನ್ ಅವರುಗಳು ಅಧಿಕಾರ ಸ್ವೀಕರಿಸಿದರು.