ಗೋಣಿಕೊಪ್ಪಲು, ಮಾ. ೩೧: ಕಳೆದ ಮೂರು ದಿನಗಳಿಂದ ಹುಲಿಯ ಜಾಡನ್ನು ಅರಸಿ ಹೊರಟ ಕಾರ್ಯಾಚರಣೆ ತಂಡಕ್ಕೆ ಗುರುವಾರ ಮುಂಜಾನೆ ಬಿ. ಶೆಟ್ಟಿಗೇರಿ ಬಳಿಯ ಕುಟ್ಟಂದಿ ಬಳಿ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಇದರಿಂದ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಭಾಗದ ಸುತ್ತಮುತ್ತಲಿನ ಕಾಡು ಹಾಗೂ ತೋಟವನ್ನು ಜಾಲಾಡುತ್ತಿದ್ದಾರೆ.

ಬುಧವಾರ ಸುರಿದ ಮಳೆಯಿಂದ ಭೂಮಿಯು ಹದಗೊಂಡಿರುವುದರಿAದ ಹುಲಿಯ ಸಂಚಾರದ ಬಗ್ಗೆ ಮಾಹಿತಿ ತಿಳಿಯಲು ಕಾರ್ಯಾಚರಣೆ ತಂಡಕ್ಕೆ ಅನುಕೂಲವಾಗಿದೆ. ೫ ತಂಡವಾಗಿ ಬೇರೆ ಬೇರೆ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದೆ. ಪ್ರಮುಖ ತಂಡವು ತಿತಿಮತಿ, ಮತ್ತಿಗೋಡು ಸಾಕಾನೆ ಶಿಬಿರದ ಶ್ರೀಕಂಠ ಹಾಗೂ ಭೀಮ ಎಂಬ ಎರಡು ಸಾಕಾನೆಗಳ ಸಹಾಯ ಪಡೆದು ಕುಟ್ಟಂದಿ, ಕೊಂಗಣ ಭಾಗದಲ್ಲಿ ಹುಡುಕಾಟ ನಡೆಸುತ್ತಿದೆ. ನಾಗರಹೊಳೆ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ. ರಮೇಶ್ ಆನೆಯೊಂದಿಗೆ ಕಾರ್ಯಾಚರಣೆಯಲ್ಲಿದ್ದು, ಇವರಿಗೆ ಎಸ್‌ಟಿಆರ್‌ಎಫ್ ತಂಡ ಬೆಂಬಲವಾಗಿ ನಿಂತಿದೆ.

ಮಾ.೨೮ರ ಸಂಜೆ ವೇಳೆ ಬಿಟ್ಟಂಗಾಲ ಸಮೀಪದ ೧ನೇ ರುದ್ರಗುಪ್ಪೆ ಗ್ರಾಮದಲ್ಲಿ ಅಯ್ಯಪ್ಪ ಎಂಬವರ ತೋಟದಲ್ಲಿ ಕರಿಮೆಣಸು ಕುಯ್ಯುವ ವೇಳೆ ಗೋಣಿಕೊಪ್ಪ ಸಮೀಪದ ಗದ್ದೆಮನೆ ಸಮೀಪವಿರುವ ಯರವರ ಗಣೇಶ್ ಎಂಬವರ ಮೇಲೆ ಹುಲಿ ದಾಳಿ ನಡೆಸಿ ಸ್ಥಳದಲ್ಲಿಯೇ ಸಾಯಿಸಿತ್ತು. ಇದನ್ನು ಖಂಡಿಸಿ ಹಲವು ಸಂಘ-ಸAಸ್ಥೆಗಳು ಪ್ರತಿಭಟನೆ ನಡೆಸಿ ಹುಲಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಇಲಾಖೆ ಮೇಲೆ ಒತ್ತಡ ತಂದಿದ್ದರು. ಎಚ್ಚೆತ್ತ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನೂರಕ್ಕೂ ಅಧಿಕ ಸಿಬ್ಬಂದಿಗಳನ್ನು ಹುಲಿ ಕಾರ್ಯಾಚರಣೆಗೆ ನೇಮಕ ಮಾಡಿದ್ದು,

(ಮೊದಲ ಪುಟದಿಂದ) ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಹುಲಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ವಿವಿಧ ಪ್ರದೇಶದಲ್ಲಿ ೬೦ಕ್ಕೂ ಅಧಿಕ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕ್ಯಾಮರಾದ ಸಮೀಪ ಹುಲಿಯ

ಸಂಚಾರದ ಯಾವುದೇ ಮಾಹಿತಿ ಲಭಿಸಿಲ್ಲ. ಇದರಿಂದಾಗಿ

ಯಾವ ಹುಲಿ ಎಂದು ತಿಳಿದುಕೊಳ್ಳಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ.

ನಾಗರಹೊಳೆ ವನ್ಯಜೀವಿ ವಿಭಾಗದ ಡಿಎಫ್‌ಒ, ಶಿವರಾಮ್ ಬಾಬು, ಮಡಿಕೇರಿ ಡಿಎಫ್‌ಒ ಎ.ಟಿ. ಪೂವಯ್ಯ ಹಾಗೂ ವೀರಾಜಪೇಟೆ ಡಿಎಫ್‌ಒ ಚಕ್ರಪಾಣಿ, ಕ್ಯಾಂಪಿನಲ್ಲಿ ಮೊಕ್ಕಾಂ ಹೂಡಿದ್ದು, ಕಾರ್ಯಾಚರಣೆ ಬಗ್ಗೆ ರೂಪುರೇಷೆ ರೂಪಿಸುತ್ತಿದ್ದಾರೆ. ತಿತಿಮತಿ ಎಸಿಎಫ್ ಉತ್ತಪ್ಪ, ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಅಶೋಕ್ ಹುನಗುಂದ, ದಿವಾಕರ್ ಮತ್ತಿತರರು ಕಾರ್ಯಾಚರಣೆ ತಂಡದೊAದಿಗೆ ತೆರಳುತ್ತ ಕ್ಷಣಕ್ಷಣದ ಮಾಹಿತಿಗಳನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸುತ್ತಿದ್ದಾರೆ.