ಸೋಮವಾರಪೇಟೆ, ಮಾ. ೩೧: ಓಡಿಪಿ, ಅಂದೇರಿ ಹಿಲ್ಪೆ ಜರ್ಮನಿ, ಹಾನಗಲ್ಲು ಗ್ರಾಮದ ಪ್ರಕೃತಿ ರೈತ ಉತ್ಪನ್ನ ಕೂಟದ ವತಿಯಿಂದ ಹಾನಗಲ್ಲು ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ಅರಿವು ಕಾರ್ಯಕ್ರಮದಲ್ಲಿ ೧೩೦ ಮಂದಿ ರೈತರಿಗೆ ಟಾರ್ಪಲ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಓಡಿಪಿ ಮೈಸೂರು ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಅವರು, ರೈತರು ಕೃಷಿಯಿಂದ ವಿಮುಖರಾಗದೇ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದರು.
ಓಡಿಪಿ ಸಂಸ್ಥೆಯ ಗ್ರಾಮ ಮಟ್ಟದಲ್ಲಿ ರೈತರಿಗ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಆಸಕ್ತರಿಗೆ ತರಬೇತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ತಾಲೂಕು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬದಾಮಿ ಮಾತನಾಡಿ, ಪಶು ಸಂಗೋಪನೆಯಿAದ ಇರುವ ಲಾಭಗಳು, ಕೃಷಿಕರಿಗೆ ಲಭಿಸುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಶುಗಳಿಗೆ ಯಾವುದೇ ಸಮಸ್ಯೆಯಿದ್ದರೂ ಸಹ ದಿನದ ೨೪ ಗಂಟೆಗಳ ಕಾಲವೂ ತಾವು ಸೇವೆಗೆ ಸಿದ್ಧರಿದ್ದು, ರೈತರು ಇಲಾಖೆಯ ಯೋಜನೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಹಾನಗಲ್ಲು ಗ್ರಾಮದ ಕೃಷಿಕ ವಿಕ್ರಾಂತ್ ಮಾತನಾಡಿ, ಸಾವಯವ ಕೃಷಿಯ ಮಹತ್ವ, ಎರೆಹುಳು ಗೊಬ್ಬರ ತಯಾರಿ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಲಕ್ಷಿö್ಮÃ ಪಾಂಡಿಯನ್ ವಹಿಸಿದ್ದರು. ಉಪಾಧ್ಯಕ್ಷ ಮಿಥುನ್, ಓಡಿಪಿ ಸಂಯೋಜಕ ಜಾನ್ ರೋಡ್ರಿಗಸ್, ಜೋಯ್ಸಿ, ರಮೇಶ್, ಪ್ರಕೃತಿ ರೈತ ಉತ್ಪನ್ನ ಕೂಟದ ಅಧ್ಯಕ್ಷ ರಾಜುಪೊನ್ನಪ್ಪ, ಕಾರ್ಯದರ್ಶಿ ಕೆ.ಟಿ. ಪ್ರಸಾದ್, ಖಜಾಂಚಿ ರಘು, ರಾಮಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಇಲಾಖೆ ವತಿಯಿಂದ ೩೫ಕ್ಕೂ ಅಧಿಕ ಸಾಕು ನಾಯಿಗಳಿಗೆ ಉಚಿತವಾಗಿ ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಲಾಯಿತು.