ಕೂಡಿಗೆ, ಮಾ. ೩೧: ರಾಷ್ಟಿçÃಯ ಹಾಲು ಅಭಿವೃದ್ಧಿ ಮಂಡಳಿ, ಹಾಸನ ಹಾಲು ಒಕ್ಕೂಟ, ರಾಷ್ಟಿçÃಯ ಜೇನು ಮಂಡಳಿ ನಂದಿಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಾಲು ಉತ್ಪಾದಕರ ಸಂಘಗಳ ಸದಸ್ಯರುಗಳಿಗೆ ಮತ್ತು ಗ್ರಾಮದ ರೈತರಿಗೆ ೭ ದಿನಗಳ ಜೇನು ಸಾಕಾಣಿಕೆಯ ಬಗ್ಗೆ ತರಬೇತಿ ಕಾರ್ಯಾಗಾರ ಕೊಡ್ಲಿಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಉದ್ಘಾಟನೆಯನ್ನು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲೆಯ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಮಹಿಳೆ ಮತ್ತು ಪುರುಷರು ಹೈನುಗಾರಿಕೆಯ ಜೊತೆಯಲ್ಲಿ ಜೇನು ಕೃಷಿಯನ್ನು ಅಳವಡಿಸಿಕೊಂಡು ಜೇನು ಉತ್ಪಾದನೆ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗುವ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ನಂದಿಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಹೆಚ್.ಎನ್. ನೀಮಲಮ್ಮ ವಹಿಸಿದ್ದರು. ಜೇನು ಕೃಷಿ ಸಾಕಾಣಿಕೆ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಗೋಪಾಲಯ್ಯ ಮಾತನಾಡಿದರು.
ಏಳು ದಿನಗಳ ಕಾಲ ನಡೆದ ಜೇನು ಕೃಷಿ ತರಬೇತಿಯನ್ನು ಪಡೆದ ಸದಸ್ಯರುಗಳಿಗೆ ಪ್ರಮಾಣ ಪತ್ರಗಳನ್ನು ಹಾಸನ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಗೋಪಾಲಯ್ಯ ವಿತರಿಸಿದರು. ಈ ಸಂದರ್ಭ ಹಾಸನ ಡೈರಿ ವ್ಯವಸ್ಥಾಪಕ ರೂಪೇಶ್ ಕುಮಾರ್, ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಸಹಾಯಕ ವ್ಯವಸ್ಥಾಪಕ ವೇಣುಗೋಪಾಲ, ಸಂಪನ್ಮೂಲ ವ್ಯಕ್ತಿ ತಾಕೇರಿ ಮಂಜುನಾಥ ಹಾಜರಿದ್ದರು.