ಸಿದ್ದಾಪುರ, ಮಾ. ೩೧: ರಂಗಸಮುದ್ರ ವಿರುಪಾಕ್ಷಪುರಂ ಶ್ರೀ ಕುರುಂಬ ಭಗವತಿ ದೇವಸ್ಥಾನದ ೨೪ನೇ ಭರಣಿ ವಾರ್ಷಿಕ ಮಹೋತ್ಸವ ಕಿಶಾನ್ ವೆಳಿಚ್ವಪಾಡ್ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಉತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ತಾಲಪೊಲಿಯೊಂದಿಗೆ ಮಹಿಳೆಯರು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು. ಖಡ್ಗ ಹಿಡಿದ ದೇವಿಯ ನರ್ತನದ ನಂತರ ನೆರೆದಿದ್ದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ನೂರಾರು ಭಕ್ತರು ಆಗಮಿಸಿ ದರ್ಶನ ಪಡೆದರು.