ಮಡಿಕೇರಿ, ಮಾ. ೩೧: ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಕೊಡಗು ಬಲಿಜ ಸಮಾಜ ಆಶ್ರಯದಲ್ಲಿ ವಿವಿಧೆಡೆ ಕೈವಾರ ತಾತಯ್ಯ ೨೯೬ನೇ ಜಯಂತಿ ಆಚರಣೆ ನೆರವೇರಿತು. ಅಧಿಕೃತ ಸರ್ಕಾರಿ ಆಚರಣೆಗೆ ಸಮಾಜದ ಪ್ರಮುಖರು ಪೂರಕ ಸಹಕಾರ ನೀಡಿದರು.

ಶನಿವಾರಸಂತೆ: ಕೊಡಗು ಬಲಿಜ ಸಮಾಜ ಉಪಾಧ್ಯಕ್ಷೆ ಗೀತಾ ಹರೀಶ್ ನೇತೃತ್ವದಲ್ಲಿ ಶನಿವಾರಸಂತೆ ಮಹಿಳಾ ಸಮಾಜದಲ್ಲಿ ಕೈವಾರ ತಾತಯ್ಯ ೨೯೬ನೇ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು. ಶ್ರೀ ಯೋಗಿ ನಾರೇಯಣ ಯತೀಂದ್ರರ ಚರಿತ್ರೆ ಕುರಿತು ಚೈತ್ರಾ ವಿವರಿಸಿದರು, ಚಂಗರಹಳ್ಳಿ ಬಲಿಜ ಮುಖಂಡರಾದ ಸಿ.ವಿ. ಜಯಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಹಿಳಾ ಸಮಾಜ ಅಧ್ಯಕ್ಷೆ ಭುವನೇಶ್ವರಿ, ಗ್ರಾ.ಪಂ. ಸದಸ್ಯ ಎಸ್.ಎಂ. ರಘು, ಸರ್ದಾರ್ ಅಹಮ್ಮದ್, ಕಂದಾಯ ನಿರೀಕ್ಷಕ ಮಂಜುನಾಥ್, ಆರ್. ಜಗದೀಶ್, ಸಮಾಜ ಸೇವಕರಾದ ಟಿ. ಹರೀಶ್ ಪಾಲ್ಗೊಂಡಿದ್ದರು. ಉಪಾಧ್ಯಕ್ಷೆ ಗೀತಾ ಹರೀಶ್ ಸ್ವಾಗತಿಸಿ, ವಂದಿಸಿದರು.ಶಿರAಗಾಲ: ಶಿರಂಗಾಲದಲ್ಲಿ ಅಲ್ಲಿನ ಕೊಡಗು ಬಲಿಜ ಸಮಾಜ ನಿರ್ದೇಶಕ ಕುಮಾರ್ ನೇತೃತ್ವದಲ್ಲಿ ಶ್ರೀ ಯೋಗಿನಾರೇಯಣ ಬಲಿಜ ಸಂಘದ ಅಧ್ಯಕ್ಷ ಎಸ್.ಎಸ್. ಉಮೇಶ್ ಅಧ್ಯಕ್ಷತೆಯಲ್ಲಿ ನೆರವೇರಿತು. ಅಲ್ಲಿನ ಗ್ರಾ.ಪಂ. ಅಧ್ಯಕ್ಷೆ ಭಾಗೀರಥಿ ಉದ್ಘಾಟಿಸಿದರು. ಬಲಿಜ ಸಂಘದ ಕಾರ್ಯದರ್ಶಿ ವಿಜಯೇಂದ್ರ, ಸದಾನಂದ, ಸಂತೋಷ್‌ಕುಮಾರ್, ಎಸ್.ಕೆ. ವೆಂಕಟೇಶ್ ಮುಂತಾದ ಗಣ್ಯರು ಕೈವಾರ ತಾತಯ್ಯ ಜಯಂತಿಯಲ್ಲಿ ಪಾಲ್ಗೊಂಡಿದ್ದರು. ನಿರ್ದೇಶಕ ಕುಮಾರ್ ತಾತಯ್ಯ ಚರಿತ್ರೆಯನ್ನು ವಿವರಿಸಿದರು.ನಾಪೋಕ್ಲು: ನಾಪೋಕ್ಲು ಕಕ್ಕುಂದ ಕಾಡು ಶ್ರೀ ಲಕ್ಷಿ÷್ಮ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಕೊಡಗು ಬಲಿಜ ಸಮಾಜ ನಿರ್ದೇಶಕಿ ಟಿ.ವಿ. ಭವಾನಿ ನೇತೃತ್ವದಲ್ಲಿ ತಾತಯ್ಯ ಜಯಂತ್ಯೋತ್ಸವ ಆಚರಿಸಲಾಯಿತು.

ಸಮಾಜದ ಪ್ರಧಾನ ಕಾರ್ಯದರ್ಶಿ ಟಿ.ಸಿ. ಗೀತಾ ನಾಯ್ಡು ಅವರು, ಕೈವಾರ ತಾತಯ್ಯ ಅವರ ಆದರ್ಶ ಮತ್ತು ಲೋಕ ಕಲ್ಯಾಣಕ್ಕಾಗಿ, ಕಾಲಜ್ಞಾನಿಯ ೧೧೦ ವರ್ಷದ ಜೀವನದ ವೃತ್ತಾಂತವನ್ನು ವಿವರಿಸಿದರು.

ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎಸ್. ಮಂಜಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿರಿಯರಾದ ಟಿ.ಎ.ಆನಂದಸ್ವಾಮಿ ಅವರು ಕೈವಾರ ತಾತಯ್ಯ ಜಯಂತಿ ಆಚರಣೆಯ ಅಗತ್ಯ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಹಿರಿಯರಾದ ಟಿ.ವಿ. ಶ್ರೀನಿವಾಸ್, ದೇವಸ್ಥಾನ ಆಡಳಿತ ಮಂಡಳಿ ಖಜಾಂಚಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲ್ ಎಂ.ಪಿ., ಆಶಾಲತ ಎಂ, ವರದರಾಜು, ಸಮಾಜದ ನಿರ್ದೇಶಕರಾದ ಟಿ.ಆರ್. ವಿಜಯ್, ಹೇಮಾವತಿ, ಸಂತೋಷ್ ನಾಯ್ಡು ಮುಂತಾದವರು ಉಪಸ್ಥಿತರಿದ್ದರು. ಅಕ್ಷತಾ ಪ್ರಾರ್ಥಿಸಿ, ಟಿ.ವಿ. ಭವಾನಿ ಸ್ವಾಗತಿಸಿದರು.ಪೊನ್ನಂಪೇಟೆ: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಸಮಾಜದ ನಿರ್ದೇಶಕ ಟಿ.ಆರ್. ವಿಜಯ ನೇತೃತ್ವದಲ್ಲಿ ಜರುಗಿದ ಜಯಂತ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಎನ್.ಎಸ್. ಪ್ರಶಾಂತ್, ಅಲ್ಲಿನ ಅಟೋ ಮತ್ತು ವಾಹನ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಪೊನ್ನಪ್ಪ, ಶಾಲಾ ಮುಖ್ಯೋಪಾಧ್ಯಾಯ ಬಿ.ಎಂ. ವಿಜಯ, ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆಯ ಅಧ್ಯಕ್ಷ ಪುಳಿಂಜನ ಪೂವಯ್ಯ, ಉಪಾಧ್ಯಕ್ಷೆ ಪಡಿಕಲ್ ಕುಸುಮಾವತಿ, ಶ್ಯಾಮಲಾ ಮುಂತಾದವರು ಭಾಗವಹಿಸಿದ್ದರು. ಪುಷ್ಪ ಪ್ರಾರ್ಥಿಸಿ, ಸಮಾಜದ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಾಡಿದರು. ರಂಗಕರ್ಮಿ ಟಿ.ಎನ್. ಶ್ರೀನಿವಾಸ್ ನಾಯ್ಡು ವಂದಿಸಿದರು.

ವೀರಾಜಪೇಟೆ ತಹಶೀಲ್ದಾರ್ ಕಚೇರಿ ಕೋರ್ಟ್ ಹಾಲ್‌ನಲ್ಲಿ ತಾಲೂಕು ಗ್ರೇಡ್ ೨ ತಹಶೀಲ್ದಾರ್ ಹೆಚ್.ಬಿ. ಪ್ರದೀಪ್ ಕುಮಾರ್ ತಾತಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರ ತತ್ವ, ಆದರ್ಶಗಳ ಬಗ್ಗೆ ವಿವರಿಸಿದರು. ಶಿರಸ್ತೇದಾರ್ ಪೊನ್ನು, ಕಂದಾಯ ಅಧಿಕಾರಿ ಹರೀಶ್ ಮುಂತಾದವರು ಉಪಸ್ಥಿತರಿದ್ದರು.