ಗೋಣಿಕೊಪ್ಪ ವರದಿ, ಮಾ. ೩೧: ಯುಗಾದಿ ಪ್ರಯುಕ್ತ ಮರೆನಾಡ್ ಶೂಟರ್ಸ್ ಕ್ಲಬ್ ವತಿಯಿಂದ ಬಿರುನಾಣಿಯಲ್ಲಿರುವ ಮರೆನಾಡ್ ಪ್ರೌಢಶಾಲೆಯಲ್ಲಿ ಏಪ್ರಿಲ್ ೩ ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ ತಿಳಿಸಿದ್ದಾರೆ.
ರಾಜ್ಯಮಟ್ಟದ ಮುಕ್ತ ಶೂಟಿಂಗ್ ಸ್ಪರ್ಧೆಯಾಗಿದ್ದು, ಮಹಿಳೆಯರು ಸೇರಿದಂತೆ ೧೨ ವರ್ಷ ಪ್ರಾಯದ ಮೇಲಿನ ಯಾರು ಬೇಕಾದರು ಕೂಡ ಭಾಗವಹಿಸಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ ೯ ಗಂಟೆಯಿAದ ಸ್ಪರ್ಧೆ ಆರಂಭಗೊಳ್ಳಲಿದ್ದು, ೩ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. .೨೨, ೧೨ನೇ ಬೋರ್, ಆರ್ ರೈಫಲ್ ವಿಭಾಗದಲ್ಲಿ ಭಾಗವಹಿಸಬಹುದು. ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. ಹಬ್ಬದ ಪ್ರಯುಕ್ತ ಅನ್ನದಾನ ನಡೆಯಲಿದೆ ಎಂದರು.
ವಕೀಲ ಮಲ್ಲೇಂಗಡ ಗಗನ್ ಬೆಳ್ಯಪ್ಪ ಉದ್ಘಾಟಿಸಲಿದ್ದಾರೆ. ಕೊರೊನಾ ಕಾಲದಲ್ಲಿ ಉತ್ತಮ ಸೇವೆ ನೀಡಿದ ಇಬ್ಬರು ದಾದಿಯರನ್ನು ಈ ಸಂದರ್ಭ ಸನ್ಮಾನಿಸಲಾಗುವುದು. ಹೆಚ್ಚಿನ ಮಾಹಿತಿಗೆ ೮೭೬೨೩೪೭೫೧೭ ಸಂಖ್ಯೆಯಲ್ಲಿ ಸಂಪರ್ಕಿಸಲು ಕೋರಿದರು.
ಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿ ನೆಲ್ಲೀರ ಧನು, ಖಜಾಂಚಿ ಕಳ್ಳಂಗಡ ನವೀನ್, ಸದಸ್ಯ ಮೋಹನ್ ಇದ್ದರು.