ಸುಂಟಿಕೊಪ್ಪ, ಮಾ.೩೧: ಬಿದ್ದು ಸಿಕ್ಕಿದ ಚೆಕ್ವೊಂದನ್ನು ಗೂಡ್ಸ್ ಆಟೋಚಾಲಕ ಬ್ಯಾಂಕಿನ ವ್ಯವಸ್ಥಾಪಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಸುಂಟಿಕೊಪ್ಪ ಗೂಡ್ಸ್ ಆಟೋಚಾಲಕ ಉಸ್ಮಾನ್ಗೆ ಕರ್ನಾಟಕ ಬ್ಯಾಂಕಿನ ರೂ. ೧೭,೫೦೦ ಮೊತ್ತದ ಚೆಕ್ ರಾಷ್ಟಿçÃಯ ಹೆದ್ದಾರಿ ಬದಿಯ ರಾಮಸ್ಟೊರ್ಸ್ ಮುಂಭಾಗದಲ್ಲಿ ಬಿದ್ದು ಸಿಕ್ಕಿದೆ. ಅದನ್ನು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.