ಮಡಿಕೇರಿ, ಮಾ. ೩೧: ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ- ತಲಕಾವೇರಿ ದೇವಾಲಯಲ್ಲಿ ತಾ.೨ರಂದು ಚಾಂದ್ರಮಾನ ಯುಗಾದಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.
ಬೆಳಿಗ್ಗೆ ೭ ಗಂಟೆಗೆೆ ಪಂಚಾAಗ ಶ್ರವಣ, ೭.೩೦ ಕ್ಕೆ ಪಾರ್ವತಿ ಅಮ್ಮನವರ ಉತ್ಸವ ಹಾಗೂ ಪಂಚಾಮೃತ ಅಭಿಷೇಕ, ರುಧ್ರಾಭಿಷೇಕ ಮತ್ತು ದೇವರಿಗೆ ವಿಶೇಷ ಅಲಂಕಾರ ಬಿಲ್ವಪತ್ರಾರ್ಚನೆ ಮತ್ತು ಭಸ್ಮಾರ್ಚನೆ, ಸಾರ್ವಜನಿಕ ಭಕ್ತಾದಿಗಳಿಗೆ ಬೇವು ಬೆಲ್ಲ ವಿತರಣೆ, ಮಧ್ಯಾಹ್ನ ೧೨ ಗಂಟೆಗೆ ಮಹಾ ಮಂಗಳಾರತಿ, ೧೨.೩೦ಕ್ಕೆ ಭಗಂಡೇಶ್ವರ ದೇವರ ಉತ್ಸವ, ೧ ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ ೭.೩೦ಕ್ಕೆ ಮಹಾ ಮಂಗಳಾರತಿ ಮತ್ತು ಭಗಂಡೇಶ್ವರ ದೇವರ ಉತ್ಸವ ಮತ್ತು ಅಷ್ಟಾವಧಾನ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.