ಮಡಿಕೇರಿ, ಮಾ. ೩೧: ಮಡಿಕೇರಿಯ ಮುಳಿಯ ಜ್ಯುವೆಲ್ಸ್ ವತಿಯಿಂದ ತಾ. ೨ ರಂದು ಕರೋಕೆ ಹಾಡುಗಳ ಗಾಯನ ಸ್ಪರ್ಧೆ ‘ಮುಳಿಯ ಗಾನ ರತ್ನ’ ಏರ್ಪಡಿಸಲಾಗಿದೆ. ಖಾಸಗಿ ಬಸ್ ನಿಲ್ದಾಣದ ಬಳಿ ಸಂಜೆ ೪ ಗಂಟೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ೧೨ ರಿಂದ ೨೧ ವರ್ಷ ಹಾಗೂ ಈ ೨೧ ರಿಂದ ಮೇಲ್ಪಟ್ಟವರಿಗೆ ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಕನ್ನಡ, ಹಿಂದಿ, ಕೊಡವ ಭಾಷೆಯಲ್ಲಿ ಹಾಡಲು ಅವಕಾಶವಿದೆ. ಹೆಸರು ನೋಂದಾಯಿಸಲು ೯೩೭೯೯೨೨೯೧೬ ಸಂಪರ್ಕಿಸಬಹುದಾಗಿದೆ.