ಮಡಿಕೇರಿ, ಮಾ. ೩೧ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜ್‌ನಲ್ಲಿ ತಾ. ೨ ರಂದು ಬೆಳಿಗ್ಗೆ ೧೦ ಗಂಟೆಗೆ ಎಂ.ಎ. ಕೊಡವ ಸ್ನಾತಕೋತ್ತರ ಕಾರ್ಯಕ್ರಮ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ಕಾರ್ಯಕ್ರಮವನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಜಗತ್ತ್ ತಿಮ್ಮಯ್ಯ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ವೀರಾಜಪೇಟೆಯ ಪೂಮಾಲೆ ವಾರಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ “ಕೊಡಗ್‌ರ ರಾಜಕೀಯ ಇತಿಹಾಸತ್‌ರ ಅವಲೋಕನ” ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ನಂತರ ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ಬರೆದ “ಕೊಡಗ್‌ಲ್ ಮಳೆರ ಅವಾಂತರ” ಹಾಗೂ ಬೊಳ್ಳೆರ ಸುಮನ್ ಸೀತಮ್ಮ ಬರೆದಿರುವ “ನಡೆಕೋರ್ ತೂಡ್” ಎಂಬ ಪುಸ್ತದ ಬಿಡುಗಡೆ ಆಗಲಿದೆ. ಈ ಕಾರ್ಯಕ್ರಮದ ಸ್ನಾತಕೋತ್ತರ ಕೊಡವ ಪಡಿಪು ವಿಭಾಗದ ಸಂಚಾಲಕರಾಗಿ ಎಂ.ಎನ್. ರವಿಶಂಕರ್ ಭಾಗವಹಿಸಲಿದ್ದಾರೆ.