ಮಡಿಕೇರಿ, ಮಾ. ೩೧: ನಗರದ ಕಾನ್ವೆಂಟ್ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ತಾ. ೨ರಂದು (ನಾಳೆ) ನಡೆಯಲಿದೆ. ದೇವಾಲಯದ ೧೬ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ತಾ. ೧ರಂದು (ಇಂದು) ಬೆಳಿಗ್ಗೆ ೮.೩೦ಕ್ಕೆ ಗುರುಗಣಪತಿ ಪೂಜೆ, ಪುಣ್ಯಾಹ, ನಾಂದಿ, ಸಂಕಲ್ಪ, ಗಣಪತಿ ಹೋಮ, ತತ್ವಕಲಾ ಹೋಮ, ಶಾಂತಿ ಹೋಮ, ಪೂರ್ಣಾಹುತಿ, ಕಲಶಾಭಿಷೇಕ ನೆರವೇರಲಿದೆ. ತಾ. ೨ರಂದು ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಿ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.