ವೀರಾಜಪೇಟೆ, ಮಾ. ೩೦: ಮಾಂಸದ ಅಂಗಡಿಗೆ ಬಂದ ವ್ಯಕ್ತಿಯ ಮೇಲೆ ಕೋಳಿ ಮಾಂಸದ ರಕ್ತ ಹಾರಿತು ಎಂಬ ಕಾರಣಕ್ಕಾಗಿ ಕಾದಾಟ ನಡೆದು ಈರ್ವರು ಆಸ್ಪತ್ರೆಗೆ ದಾಖಲಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆÀದಿದೆ.

ವೀರಾಜಪೇಟೆ ನಗರದ ನೆಹರು ನಗರದ ನಿವಾಸಿ ನೂರ್ ಅಹಮ್ಮದ್ ಎಂಬವರ ಪುತ್ರ ಬಶೀರ್ (೪೫) ಮತ್ತು ಬೂದಿಮಾಳ ಗ್ರಾಮದ ನಿವಾಸಿ ಮೂಸ ಎಂಬವರ ಪುತ್ರ ಶರೀಫ್ (೪೩) ಪರಸ್ಪರ ಕಾದಾಟ ಮಾಡಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳು.

ನಗರದ ಖಾಸಗಿ ಬಸ್ಸು ನಿಲ್ದಾಣದ ಸನಿಹವಿರುವ ಪಟ್ಟಣ ಪಂಚಾಯಿತಿ ಮಾರುಕಟ್ಟೆಯಲ್ಲಿ ಇಸ್ಮಾಯಿಲ್ ಎಂಬುವವರ ಮಾಲೀಕತ್ವದಲ್ಲಿ ನಡೆಸಲಾಗುತ್ತಿರುವ ಮಾಂಸದ ಆಂಗಡಿಯಲ್ಲಿ

(ಮೊದಲ ಪುಟದಿಂದ) ಬಶೀರ್ ಎಂಬವರು ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾ.೨೯ರಂದು ಸಂಜೆ ೭ರ ವೇಳೆ ಕೋಳಿ ಮಾಂಸ ಖರೀದಿ ಮಾಡಲು ಶರೀಫ್ ಆಗಮಿಸಿದ್ದಾರೆ. ಈ ಸಂದರ್ಭ ಮಾಂಸ ಕಡಿಯುತ್ತಿರುವ ವೇಳೆ ಮಾಂಸದಿAದ ರಕ್ತ ಶರೀಫ್ ಅವರ ಬಟ್ಟೆಯ ಮೇಲೆ ಹಾರಿದೆ. ಇದೇ ಜಗಳಕ್ಕೆ ಕಾರಣವಾಗಿದೆ. ಬಶೀರ್ ಕ್ಷಮಿಸಿ ಎಂದು ಹೇಳಿದ್ದಾರೆ. ಸಂತುಷ್ಟರಾಗದ ಶರೀಫ್ ಅವಾಚ್ಯ ಶಬ್ದಗಳ ಪ್ರಯೋಗ ಮಾಡಿದ್ದಾರೆ ಈರ್ವರಲ್ಲಿ ಜಗಳವಾಗಿದೆ.

ಶರೀಫ್ ಬಶೀರ್‌ನ ಮೇಲೆ ಹಲ್ಲೆ ನಡೆಸಿ ತಲೆ ಮತ್ತು ಮೂಗಿನ ಭಾಗಗಳಿಗೆ ರಕ್ತಸಿಕ್ತ ಗಾಯಗಳಾಗಿದೆ. ಜಗಳದ ಸಂದರ್ಭ ಬಶೀರ್ ಉಪಯೋಗಿಸುತಿದ್ದ ಮಾಂಸದ ಕತ್ತಿಯು ಶರೀಫ್ ಅವರ ಬಲಗೈ ಸೀಳಿದೆ. ಈರ್ವರು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಉಭಯ ವ್ಯಕ್ತಿಗಳು ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

-ಕಿಶೋರ್ ಕುಮಾರ್ ಶೆಟ್ಟಿ.