ಯಡಿಯೂರಪ್ಪ ವಿರುದ್ಧ ‘ವಿಶೇಷ ಕ್ರಿಮಿನಲ್ ಕೇಸ್' ದಾಖಲಿಸುವಂತೆ ಆದೇಶ

ಬೆಂಗಳೂರು, ಮಾ. ೩೦: ಬಿ.ಎಸ್. ಯಡಿಯೂರಪ್ಪ ಅವರು ೨೦೦೬-೦೭ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿದ್ದ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬAಧಿಸಿದAತೆ ಮಾಜಿ ಮುಖ್ಯಮಂತ್ರಿ ವಿರುದ್ಧ ‘ವಿಶೇಷ ಕ್ರಿಮಿನಲ್ ಕೇಸ್’ ದಾಖಲಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ. ವಾಸುದೇವ ರೆಡ್ಡಿ ಎಂಬವರು ಸಲ್ಲಿಸಿದ್ದ ಖಾಸಗಿ ದೂರಿನ ಆಧಾರದ ಮೇಲೆ ಕರ್ನಾಟಕದ ಚುನಾಯಿತ ಸಂಸದರು-ಶಾಸಕರಿಗೆ ಸಂಬAಧಿಸಿದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯದ ಸೆಷನ್ಸ್ ನ್ಯಾಯಾಧೀಶ ಬಿ. ಜಯಂತ ಕುಮಾರ್ ಅವರು ಈ ಆದೇಶ ಹೊರಡಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯಿದೆ, ೧೯೮೮ರ ಕಲಂ ೧೩(೧)(ಡಿ) ಆರ್/ಡಬ್ಲ್ಯೂ ಕಲಂ. ೧೩(೨) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ಆರೋಪಿ ನಂ. ೨ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಿಶೇಷ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ. ಸೆಕ್ಷನ್. ೨೦೪(೨) ಅಡಿ. ಪಿಸಿ ಅಡಿಯಲ್ಲಿ ಅಗತ್ಯವಿರುವಂತೆ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸಿದ ನಂತರವೇ ವಿಚಾರಣೆಗೆ ಹಾಜರಾಗುವಂತೆ ಆರೋಪಿ ನಂಬರ್ ೨ ಸಮನ್ಸ್ ನೀಡಿ ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಯಡಿಯೂರಪ್ಪ ಅವರು ಬೆಳ್ಳಂದೂರು ಹಾಗೂ ದೇವರಬೀಸನಹಳ್ಳಿಯಲ್ಲಿ ಐಟಿ ಕಾರಿಡಾರ್‌ಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಶಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಯಡಿಯೂರಪ್ಪ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ‘ಯಡಿಯೂರಪ್ಪ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಲೋಕಾಯುಕ್ತ ಪೊಲೀಸರು ಎರಡು ಬಾರಿ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಎರಡೂ ವರದಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಎರಡನೇ ‘ಬಿ’ ರಿಪೋರ್ಟ್ ಅನ್ನು ೨೦೨೧ರ ನವೆಂಬರ್ ೨೭ ರಂದು ತಿರಸ್ಕರಿಸಿದ್ದ ನ್ಯಾಯಾಲಯ, ನೇರವಾಗಿ ವಿಚಾರಣೆ ಆರಂಭಿಸುವ ತೀರ್ಮಾನ ಪ್ರಕಟಿಸಿತ್ತು.

ಮೀಸಲಾತಿ ಹೆಚ್ಚಳ: ಸರ್ವಪಕ್ಷ ಸಭೆ ನಡೆಸಿ ಅಂತಿಮ ನಿರ್ಧಾರ - ಸಿಎಂ

ಬೆAಗಳೂರು, ಮಾ. ೩೦: ಮೀಸಲಾತಿ ಹೆಚ್ಚಳ ಕುರಿತಂತೆ ಶೀಘ್ರದಲ್ಲೇ ಸರ್ವಪಕ್ಷ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ. ಇಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಎಸ್‌ಟಿ ಸಮುದಾಯದ ಮೀಸಲಾತಿಯನ್ನು ಶೇ. ೭.೫ಕ್ಕೆ ಏರಿಸಬೇಕೆಂದು ಅವರ ಒತ್ತಾಯ ಇದೆ. ಈ ಹಿಂದೆ ಮೀಸಲಾತಿ ಶೇ. ೫೦ ದಾಟಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅದನ್ನ ತಳ್ಳಿ ಹಾಕಿತು. ಈ ವೇಳೆ ಸಮ್ಮಿಶ್ರ ಸರ್ಕಾರ ಇದ್ದಾಗ ಸಮಿತಿಯೊಂದನ್ನು ರಚನೆ ಮಾಡಿತ್ತು. ಜಸ್ಟೀಸ್ ನಾಗಮೋಹನ್ ದಾಸ್ ಈಗಾಗಲೇ ವರದಿ ನೀಡಿದ್ದಾರೆ ಎಂದು ತಿಳಿಸಿದರು. ಇದಾದ ಬಳಿಕ ಬೇರೆ ಬೇರೆ ಸಮುದಾಯಗಳು ಹಲವು ಬೇಡಿಕೆಗಳನ್ನ ಇಟ್ಟರು. ಜನಸಂಖ್ಯೆ ಆಧಾರದ ಮೇಲೆ ಎಸ್‌ಸಿ-ಎಸ್‌ಟಿ ಸಮುದಾಯದವರು ಒತ್ತಾಯ ಮಾಡುತ್ತಿದ್ದಾರೆ. ಒಬಿಸಿಯಲ್ಲಿರುವವರು ಎಸ್‌ಟಿ ಮೀಸಲಾತಿ ಕೊಡಿ ಎಂದಿದ್ದಾರೆ. ೩ಎ ನಲ್ಲಿರುವವರು ೨ಎ ಗೆ ಬರಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ ಸುಪ್ರೀಂಕೋರ್ಟ್ ಒಂದು ತೀರ್ಪು ನೀಡಿದ್ದು, ಎಲ್ಲಾ ರಾಜ್ಯಗಳಿಗೆ ತಮ್ಮ ಅಭಿಪ್ರಾಯ ಕೇಳಿದೆ ಎಂದರು. ಜನಸಂಖ್ಯೆ ಹೆಚ್ಚಾಗಿದೆ ಮೀಸಲಾತಿಯಲ್ಲಿ ಮಾರ್ಪಾಡು ಬೇಕೆಂದು ನಾವು ಕೂಡ ಕೊಟ್ಟಿದ್ದೆವು. ಎಲ್ಲವನ್ನೂ ಪರಿಶೀಲನೆ ಮಾಡಿ ಎಂದು ನಾವು ಜಸ್ಟೀಸ್ ಸುಭಾಶ್ ಅಡಿ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಇಂದಿರಾ ಸಹಾನಿ ಕೇಸ್ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಮೀಸಲಾತಿ ಶೇ. ೫೦ ರೊಳಗೆ ಇರಬೇಕು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆ ಮಾಡಿ ಅಂತಿಮ ತೀರ್ಮಾನ ಶೀಘ್ರದಲ್ಲೇ ಕೊಡುತ್ತೇವೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಬಹುಮತ ಕಳೆದುಕೊಂಡ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್, ಮಾ. ೩೦: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದೆ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ)ನ ಪ್ರಮುಖ ಮೈತ್ರಿ ಪಕ್ಷ ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್ (ಎಂಕ್ಯೂಎA) ಹೊರಬಂದು ಪ್ರಮುಖ ವಿರೋಧ ಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿAದ ಇಮ್ರಾನ್ ಖಾನ್ ಅವರಿಗೆ ಹಿನ್ನಡೆಯಾಗಿದೆ. ಸಂಯುಕ್ತ ವಿಪಕ್ಷ ಮತ್ತು ಎಂಕ್ಯೂಎA ಒಪ್ಪಂದ ಮಾಡಿಕೊಂಡಿವೆ. ರಬ್ತಾ ಸಮಿತಿ ಒಕಿಒ ಮತ್ತು ಪಿಪಿಪಿ ಸಿಇಸಿ ಈ ಒಪ್ಪಂದವನ್ನು ಅನುಮೋದಿಸುತ್ತದೆ. ನಾಳೆ ಸುದ್ದಿಗೋಷ್ಠಿಯಲ್ಲಿ ಸಂಪೂರ್ಣ ವಿವರ ನೀಡಲಿದ್ದೇವೆ. ಪಾಕಿಸ್ತಾನಕ್ಕೆ ಅಭಿನಂದನೆಗಳು ಎಂದು ಪಿಪಿಪಿ ಅಧ್ಯಕ್ಷ ಬಿಲವಲ್ ಭಟ್ಟೋ ಜರ್ದಾರಿ ಟ್ವೀಟ್ ಮಾಡಿದ್ದಾರೆ. ತಾ. ೩೧ ರಂದು (ಇಂದು) ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಮೊದಲು ಕಳೆದ ತಡರಾತ್ರಿ ನಡೆದ ಬೆಳವಣಿಗೆಯ ನಂತರ ಪಿಟಿಐ ಸರ್ಕಾರವು ಸಂಸತ್ತಿನ ಕೆಳಮನೆಯಲ್ಲಿ ಬಹುಮತವನ್ನು ಕಳೆದುಕೊಂಡಿತು. ಆಡಳಿತಾರೂಢ ಸಂಯುಕ್ತ ಪಾಲುದಾರ ಪಕ್ಷ ಎಂಕ್ಯೂಎAಪಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದಿಂದ ಹೊರಬಂದ ಕಾರಣ ೧೭೭ ಸದಸ್ಯ ಬಲದ ಸಂಸತ್ತಿನಲ್ಲಿ ೧೬೪ ಸದಸ್ಯರು ಹೊರಬಂದಿದ್ದಾರೆ. ಇಲ್ಲಿ ನಾಳೆ ನಡೆಯಲಿರುವ ವಿಶ್ವಾಸ ಮತದಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ೧೭೨ ಸದಸ್ಯರ ಬೆಂಬಲ ಅಗತ್ಯವಿದೆ. ಈ ಮಧ್ಯೆ ವಿದೇಶಿ ಅನುದಾನ ಪಡೆಯುವ ಮೂಲಕ ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಇಮ್ರಾನ್ ಖಾನ್ ಅವರು ಆರೋಪ ಮಾಡಿದ ನಂತರ ಪ್ರತಿಕ್ರಿಯೆ ನೀಡಿರುವ ಫೆಡರಲ್ ಸಚಿವ ಅಸದ್ ಉಮರ್, ತಮ್ಮ ಸರ್ಕಾರಕ್ಕೆ ಬಹುಮತ ಇರುವುದನ್ನು ಸಾಬೀತುಪಡಿಸಲು ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಸಿದ್ದವಿದ್ದಾರೆ ಎಂದರು. ಪಾಕಿಸ್ತಾನದಲ್ಲಿ ಸರ್ಕಾರ ಬದಲಿಸಲು ವಿದೇಶಿ ಹಣದ ಮೂಲಕ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಕೆಲವರು ನಮ್ಮ ವಿರುದ್ಧ ಹಣವನ್ನು ಬಳಸುತ್ತಿದ್ದಾರೆ. ಯಾವ ಸ್ಥಳಗಳಿಂದ ನಮ್ಮ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ನಮಗೆ ತಿಳಿದಿದೆ. ನಮಗೆ ಲಿಖಿತವಾಗಿ ಬೆದರಿಕೆ ಹಾಕಲಾಗಿದೆ. ಆದರೆ ನಾವು ರಾಷ್ಟಿçÃಯ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು.

೧೫ ಲಘು ಯುದ್ಧ ಹೆಲಿಕಾಪ್ಟರ್ ಖರೀದಿಗೆ ಭದ್ರತಾ ಸಂಪುಟ ಸಮಿತಿ ಅನುಮೋದನೆ

ನವದೆಹಲಿ, ಮಾ. ೩೦: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಭದ್ರತಾ ಸಂಪುಟ ಸಮಿತಿ, ರೂ. ೩,೮೮೭ ಕೋಟಿ ವೆಚ್ಚದಲ್ಲಿ ಸ್ವದೇಶಿ ನಿರ್ಮಿತ ೧೫ ಲಘು ಯುದ್ಧ ಹೆಲಿಕಾಪ್ಟರ್ ಖರೀದಿಸಲು ಅನುಮೋದನೆ ನೀಡಿದೆ. ಭಾರತೀಯ ವಾಯುಪಡೆಗಾಗಿ ೧೦ ಹೆಲಿಕಾಪ್ಟರ್ ಹಾಗೂ ಭಾರತೀಯ ಸೇನೆಗೆ ಐದು ಹೆಲಿಕಾಪ್ಟರ್ ಖರೀದಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ರೂ. ೩೭೭ ಕೋಟಿ ಮೊತ್ತದ ಮೂಲಸೌಕರ್ಯ ಅಭಿವೃದ್ಧಿಗೆ ಮಂಜೂರಾತಿಯೊAದಿಗೆ ರೂ. ೩,೮೮೭ ಕೋಟಿ ವೆಚ್ಚದಲ್ಲಿ ೧೫ ಲಘು ಯುದ್ಧ ಹೆಲಿಕಾಪ್ಟರ್ ಲಿಮಿಟೆಡ್ ಸರಣಿ ಉತ್ಪಾದನೆಯನ್ನು ಖರೀದಿಸಲು ಭದ್ರತೆ ಮೇಲಿನ ಸಂಪುಟ ಸಮಿತಿ ಅನುಮೋದಿಸಿದೆ ಎಂದು ಅದು ಹೇಳಿದೆ. ಸುಮಾರು ಶೇ. ೪೫ ರಷ್ಟು ಸ್ವದೇಶಿ ಅಂಶದೊAದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಲಘು ಯುದ್ಧ ಹೆಲಿಕಾಪ್ಟರ್‌ಗಳು, ಶತ್ರು ರಾಷ್ಟçಗಳ ವಾಯು ರಕ್ಷಣೆ ಮತ್ತು ಪ್ರತಿ ಬಂಡಾಯ ಕಾರ್ಯಾಚರಣೆಗಳ ನಾಶ, ಪತ್ತೆ ಮತ್ತು ರಕ್ಷಣೆ ಸೇರಿದಂತೆ ಅಗತ್ಯವಿರುವ ಚುರುಕುತನ, ಕುಶಲತೆ ಹೊಂದಿರುವುದಾಗಿ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.