ಪೊನ್ನಂಪೇಟೆ, ಮಾ. ೩೦: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭಾನುವಾರದಂದು ಮುಕ್ತಾಯ ಗೊಂಡ ಒಬೈದುಲ್ಲಾ ಸ್ಮಾರಕ ಹೆರಿಟೇಜ್ ಹಾಕಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದ ಆರ್ಮಿ ಇಲೆವೆನ್ ತಂಡ ಎದುರಾಳಿ ತಂಡ ಭಾರತೀಯ ರೈಲ್ವೆ ತಂಡದೆದುರು ೨-೧ ಗೋಲುಗಳ ಅಂತರದಲ್ಲಿ ಶರಣಾಗಿ ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಪAದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆರ್ಮಿ ಇಲೆವೆನ್ ತಂಡ ಫೈನಲ್ ಪ್ರವೇಶಿಸಿತ್ತು. ಫೈನಲ್ಸ್ನಲ್ಲಿ ವಿನ್ನರ್ಸ್ ಪ್ರಶಸ್ತಿಗಾಗಿ ಎಷ್ಟೇ ಹೋರಾಟ ನಡೆಸಿದರೂ ಫಲ ನೀಡಲಿಲ್ಲ.
ಬಲಿಷ್ಠ ಆರ್ಮಿ ಇಲೆವೆನ್ ತಂಡ ಫೈನಲ್ ಪ್ರವೇಶಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ತಂಡದ ಪ್ರಮುಖ ಆಟಗಾರ ಕೊಡಗಿನ ಬೇಗೂರು ಗ್ರಾಮದ ಆಲೀರ ಸಿರಾಜ್ ಪಂದ್ಯಾವಳಿ ಯುದ್ದಕ್ಕೂ ವಿಶೇಷವಾಗಿ ಗಮನ ಸೆಳೆದರು. ಪಂದ್ಯಾವಳಿಯಲ್ಲಿ ರನ್ನರ್ಸ್ ಪ್ರಶಸ್ತಿ ಪಡೆದ ಆರ್ಮಿ ಇಲೆವೆನ್ ತಂಡ ರೂ. ೭ಲಕ್ಷ ರೂಪಾಯಿ ಮೊತ್ತದ ನಗದು ಬಹುಮಾನವನ್ನು ಪಡೆದುಕೊಂಡಿದೆ.