*ಗೋಣಿಕೊಪ್ಪ, ಮಾ. ೩೦: ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ಬುಡಕಟ್ಟು ಸಮುದಾಯಗಳಿಗೆ ನಿವೇಶನ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಹೊಸೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಲೈನ್ ಮನೆ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಲೈನ್ ಮನೆ ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಚಾಲಕ ಗಪುö್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಕ್ಷಣ ಪಂಚಾಯಿತಿ ವ್ಯಾಪ್ತಿಯಲ್ಲಿ ಲೈನ್ ಮನೆ ಕಾರ್ಮಿಕರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಲಾಯಿತು.
ಅಲ್ಲದೇ ಅಮ್ಮತ್ತಿ, ಶ್ರೀಮಂಗಲ ಪಂಚಾಯಿತಿ ವ್ಯಾಪ್ತಿಗಳಲ್ಲಿನ ಲೈನ್ ಮನೆ ಕಾರ್ಮಿಕರಿಗೂ ಹಕ್ಕುಪತ್ರ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ಥಳಕ್ಕೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದಅವರು ಭೇಟಿ ನೀಡಿ ಒಂದು ತಿಂಗಳ ಸಮಯದಲ್ಲಿ ಪ್ರಥಮ ಹಂತವಾಗಿ ಹೊಸೂರು ಗ್ರಾಮ ಪಂಚಾಯಿತಿ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಅಮ್ಮತ್ತಿ, ಶ್ರೀಮಂಗಲ ಪಂಚಾಯಿತಿ ವ್ಯಾಪ್ತಿಯ ಲೈನ್ ಮನೆ ಕಾರ್ಮಿಕ ಕುಟುಂಬ ಗಳಿಗೂ ನಿವೇಶನ ಹಕ್ಕುಪತ್ರ ನೀಡಲು ಸಮೀಕ್ಷೆ ಕಾರ್ಯ ನಡೆಸುವುದಾಗಿ ಮತ್ತು ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ಈ ಬಗ್ಗೆ ಕ್ರಮಕೈಗೊಳ್ಳಲು ಸೂಚಿಸಲಾಗುವುದು ಎಂದು ಭರವಸೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯುವAತೆ ಧರಣಿ ನಿರತರನ್ನು ಮನವೊಲಿಸಿದರು.
ತಹಶೀಲ್ದಾರ್ ಅವರ ಭರವಸೆಗೆ ಮಣಿದ ಪ್ರತಿಭಟನೆಗಾರರು ಧರಣಿಯನ್ನು ಹಿಂಪಡೆದುಕೊAಡರು.