ಸಿದ್ದಾಪುರ, ಮಾ. ೩೦: ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂಭಾಗದ ಪಶುವೈದ್ಯ ಆಸ್ಪತ್ರೆಯ ಬಳಿ ಇರುವ ಸಾರ್ವಜನಿಕ ಬಾವಿಯನ್ನು ಮುಚ್ಚಿಸಿರುವ ಕ್ರಮವನ್ನು ಖಂಡಿಸಿ ಸದಸ್ಯರು ಪಂಚಾಯಿತಿಯ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿ ಬಾವಿಯನ್ನು ಪುನರ್ ನಿರ್ಮಾಣ ಮಾಡಲು ಒತ್ತಾಯಿಸಿದ ಪ್ರಸಂಗ ಎದುರಾಯಿತು.

ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಹೆಚ್.ಎನ್. ಪಳನಿಸ್ವಾಮಿ ಸಿದ್ದಾಪುರದ ಪಶುವೈದ್ಯ ಆಸ್ಪತ್ರೆಯ ಸಮೀಪವಿರುವ ಸಾರ್ವಜನಿಕ ತೆರೆದ ಬಾವಿಯನ್ನು ಗ್ರಾ.ಪಂ. ಸದಸ್ಯರುಗಳ ಗಮನಕ್ಕೆ ತಾರದೆ ಏಕಾಏಕಿ ಸಿದ್ದಾಪುರ, ಮಾ. ೩೦: ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂಭಾಗದ ಪಶುವೈದ್ಯ ಆಸ್ಪತ್ರೆಯ ಬಳಿ ಇರುವ ಸಾರ್ವಜನಿಕ ಬಾವಿಯನ್ನು ಮುಚ್ಚಿಸಿರುವ ಕ್ರಮವನ್ನು ಖಂಡಿಸಿ ಸದಸ್ಯರು ಪಂಚಾಯಿತಿಯ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿ ಬಾವಿಯನ್ನು ಪುನರ್ ನಿರ್ಮಾಣ ಮಾಡಲು ಒತ್ತಾಯಿಸಿದ ಪ್ರಸಂಗ ಎದುರಾಯಿತು.

ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಹೆಚ್.ಎನ್. ಪಳನಿಸ್ವಾಮಿ ಸಿದ್ದಾಪುರದ ಪಶುವೈದ್ಯ ಆಸ್ಪತ್ರೆಯ ಸಮೀಪವಿರುವ ಸಾರ್ವಜನಿಕ ತೆರೆದ ಬಾವಿಯನ್ನು ಗ್ರಾ.ಪಂ. ಸದಸ್ಯರುಗಳ ಗಮನಕ್ಕೆ ತಾರದೆ ಏಕಾಏಕಿ ಸದಸ್ಯೆ ಪ್ರೇಮಾ ಮಾತನಾಡಿ, ತಾನು ವಾರ್ಡಿನ ಸದಸ್ಯೆಯಾಗಿದ್ದರೂ ಕೂಡ ಬಾವಿ ಮುಚ್ಚಿಸಿರುವ ವಿಚಾರ ತಿಳಿಸಲಿಲ್ಲ. ಅಲ್ಲದೆ ಕ್ರಿಯಾ ಯೋಜನೆ ಮಾಡದೇ ಕಾಮಗಾರಿ ಮಾಡಿರುವುದು ಸರಿಯಾದ ಕ್ರಮವಲ್ಲ. ಮುಚ್ಚಿದ ಬಾವಿಯನ್ನು ತೆಗೆದು ಪುನರ್ ನಿರ್ಮಾಣ ಮಾಡಿ ಬಾವಿಯ ಸುತ್ತಲೂ ಬೇಲಿ ಹಾಕಬೇಕೆಂದರು. ಬಾವಿಯನ್ನು ಮುಚ್ಚಿ ರಸ್ತೆ ಮಾಡುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಣೆ ಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ ಮಾತನಾಡಿ, ಮುಂದಿನ ವಾರದಿಂದ ರಸ್ತೆ ಬದಿಯಲ್ಲಿ ಭಾನುವಾರ ಸಂತೆ ದಿನದಂದು ವ್ಯಾಪಾರಸ್ಥರಿಗೆ ರಸ್ತೆ ಬದಿಯಲ್ಲಿ ಅಂಗಡಿ ಹಾಕಲು ನಿರ್ಬಂಧ ವಿಧಿಸಲಾಗಿದೆ. ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದರು. ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ ಎಂದರು. ಇದೇ ಸಂದರ್ಭದಲ್ಲಿ ವಿವಿಧ ವಿಚಾರಗಳ ಬಗ್ಗೆ ಸಂಜೆಯವರೆಗೆ ಸುದೀರ್ಘ ಚರ್ಚೆ ನಡೆಯಿತು. ಸಭೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮನ್‌ಮೋಹನ್, ಕಾರ್ಯದರ್ಶಿ ಮೋಹನ್ ಹಾಜರಿದ್ದರು.