ಮಡಿಕೇರಿ, ಮಾ. ೩೦: ವಿಶ್ವ ಹಿಂದೂ ಪರಿಷತ್ ಪೊನ್ನಂಪೇಟೆ ಪ್ರಖಂಡದಿAದ ಧರ್ಮ ರಕ್ಷಣಾ ನಿಧಿ ಅರ್ಪಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಟ್ಟುಕತ್ತಿರ ಸೋಮಣ್ಣ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂದ್ಯAಡ ಹರೀಶ್ ಪ್ರಾಸ್ತಾವಿಕ ನುಡಿಯನ್ನಾಡಿದರು. ವನವಾಸಿ ಕಲ್ಯಾಣ ಸಂಯೋಜಕ ಹರೀಶ್ ಬೌದ್ಧಿಕ್ ಬೋಧಿಸಿದರು.
ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷ ಕೃಷ್ಣಮೂರ್ತಿ ಹಿತ ನುಡಿಗಳನ್ನಾಡಿದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಪೊನ್ನಂಪೇಟೆ ತಾಲೂಕಿನ ಪ್ರಧಾನ ಕಾರ್ಯದರ್ಶಿ ಅಮ್ಮತೀರಾ ಸುರೇಶ್, ಭಜರಂಗ ದಳದ ಜಿಲ್ಲಾ ಸಂಚಾಲಕ ಅನಿಶ್, ಪೊನ್ನಂಪೇಟೆ ಸಂಚಾಲಕ ಸಜು, ದುರ್ಗಾ ವಾಹಿನಿಯ ಅಂಬಿಕಾ ಉಪಸ್ಥಿತರಿದ್ದರು. ಸುಬ್ರಮಣಿ ಸ್ವಾಗತಿಸಿದರು.