ಮಡಿಕೇರಿ, ಮಾ. ೩೦: ಆಹಾರ ಹಾಗೂ ಜೀವನಶೈಲಿ ಸಮರ್ಪಕವಾಗಿದ್ದರೆ ಯಾವ ಕಾಯಿಲೆಯು ಮಾರಕವಲ್ಲ. ಮಾನವನ ಜೀವನ ಹಾಗೂ ಆಹಾರ ಶೈಲಿಯಿಂದ ಮದುಮೇಹ ಮತ್ತು ಬಿ.ಪಿ. ಬರುತ್ತಿದೆ. ನಮ್ಮ ಬದುಕಿನ ಶೈಲಿ ಬದಲಾದರೆ ಯಾವ ಕಾಯಿಲೆಯೂ ಮಾರಕವಲ್ಲ ಎಂದು ಮೈಸೂರು ಬೃಂದಾವನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಾತಂಡ ಆರ್. ಅಯ್ಯಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ಮಾಲಿಕೆಯ ಐದನೇ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಧುಮೇಹ, ಬಿ.ಪಿ. ಎನ್ನುವುದು ಪ್ರತಿಯೊಬ್ಬ ಮಾನವನಲ್ಲಿಯೂ ಕಂಡುಬರುವ ಸಾಮಾನ್ಯ ರೋಗ ಲಕ್ಷಣಗಳು. ಇದನ್ನು ಕೀಳರಿಮೆ ಅಥವಾ ನಿರ್ಲಕ್ಷ್ಯ ಮಾಡದೆ ನಮ್ಮ ಬದುಕಿನ ಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊAಡರೆ ಸಾಮಾನ್ಯ ಬದುಕು ನಡೆಸಬಹುದು. ಹಲವಾರು ವರ್ಷಗಳ ಹಿಂದೆ ಈ ರೋಗಗಳು ೫೦-೬೦ ವರ್ಷಗಳ ನಂತರ ಬರುವ ಕಾಯಿಲೆ ಎನ್ನುವ ತಪ್ಪು ಕಲ್ಪನೆ ಇತ್ತು, ಅಂದು ತಪಾಸಣೆಯ ವಿಳಂಬದಿAದಾಗಿ ಹಾಗೂ ಕೆಲವು ಮೂಡನಂಬಿಕೆಯ ಕಲ್ಪನೆಯಿಂದಾಗಿ ಹಾಗಾಗುತ್ತಿತ್ತು. ಇದರಿಂದ ಹದಿಹರಯದಲ್ಲಿ ಹೃದಯಾಘಾತ, ಪಾರ್ಶ್ವವಾಯುವಿನಂತ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತಿದ್ದವು.
ಆದರೆ ಆಧುನಿಕ ವೈದ್ಯಕೀಯ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಆಗಿರುವುದರಿಂದ ಇಂತ ರೋಗ ಲಕ್ಷಣಗಳನ್ನು ಬೇಗನೇ ಪತ್ತೆ ಹಚ್ಚಬಹುದಾಗಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ರೋಗ ಉಲ್ಬಣಗೊಳ್ಳುವುದನ್ನು ತಡೆಯಬಹುದು ಎಂದರು. ಸಾಮಾನ್ಯವಾಗಿ ಶುಗರ್, ಬಿ.ಪಿ. ಲಕ್ಷಣಗಳು ಆಲ್ಕೋಹಾಲ್ ಮತ್ತು ತಂಬಾಕು ಉತ್ಪನ್ನಗಳನ್ನು ಅತಿಯಾಗಿ ಸೇವಿಸುವರನ್ನು ಅತಿ ಬೇಗ ಕಾಡುತ್ತದೆ. ಅಲ್ಲದೆ ವಂಶಪಾರAಪರ್ಯವಾಗಿ, ಅತೀ ಜೀವನದೊತ್ತಡ, ಮಾನಸಿಕ ಒತ್ತಡದಿಂದ ಹಾಗೂ ಮಹಿಳೆಯರು ಗರ್ಭವತಿಯರಾಗಿರುವ ಸಮಯದಲ್ಲಿಯೂ ಹೆಚ್ಚಾಗಿ ಕಾಣುತ್ತದೆ. ಇದನ್ನು ನಿರ್ಲಕ್ಷ್ಯಿಸದೆ, ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಶುಗರ್, ಬಿ.ಪಿ. ಎನ್ನುವುದನ್ನು ಈ ಹಿಂದೆ ಶ್ರೀಮಂತರ ಕಾಯಿಲೆ ಎನ್ನಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ರೋಗವಾಗಿರುವುಲ್ಲದೆ, ಪುಟ್ಟ ಮಕ್ಕಳಲ್ಲಿಯೂ ಕಂಡುಬರುತ್ತಿದೆ. ಅಂಕಿ ಅಂಶಗಳನ್ನು ಗಮನಿಸಿದರೆ ಮಧುಮೇಹವು ಭಾರತದಲ್ಲಿ ಇತರ ರಾಷ್ಟçಗಳಿಗಿಂತಲೂ ಹೆಚ್ಚಾಗೆ ಕಾಣುತ್ತಿದೆ. ಇದು ನಮ್ಮ ಬದುಕು ಮತ್ತು ಆಹಾರ ಪದ್ಧತಿ ಬದಲಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.
ಮಧುಮೇಹವನ್ನು ಯಾರೂ ಕೂಡ ನಿರ್ಲಕ್ಷ್ಯಿಸದೆ ಸೂಕ್ತ ಸಮಯದಲ್ಲಿ ಪರೀಕ್ಷೆಗೆ ಒಳಪಟ್ಟು ಸೂಕ್ತ ಪರಿಹಾರ ಮತ್ತು ಬದುಕಿನ ಶೈಲಿಯನ್ನು ಬದಲಿಸಿಕೊಂಡಾಗ ಮತ್ತು ಮಧುಮೇಹಿಗಳನ್ನು ನಿರ್ಲಕ್ಷ್ಯಿಸದೆ, ಅವಮಾನಿಸದೆ ಸಾಮಾನ್ಯರಂತೆ ಕಂಡಾಗ ರೋಗ ಉಲ್ಬಣಗೊಳ್ಳುವುದನ್ನು ತಡೆಯಬಹುದು. ಮಧುಮೇಹವು ಅಧಿಕವಾದರೆ, ಕಿಡ್ನಿ, ಹೃದಯಕ್ಕೆ ಸಂಬAಧಿಸಿದ ಮತ್ತು ಪಾರ್ಶ್ವವಾಯುವಿನಂತಹ ಭಯಾನಕ ತೊಂದರೆಗಳು ಕಾಣಿಕೊಳ್ಳುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಅನುಕೂಲಕ್ಕೆ ತಕ್ಕಂತೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ಮಾಡಿದರಲ್ಲದೆ ರೋಗ ಲಕ್ಷಣಗಳು ಕಾಣದವರೂ ಕೂಡ ಮುನ್ನೆಚ್ಚರಿಕೆಯಾಗಿ ಆಹಾರ ಮತ್ತು ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವಾಮೆರ ಕೊಂಡಾಟ ಸಂಘಟನೆಯ ಆಡಳಿತ ಮಂಡಳಿ ನಿರ್ದೇಶಕ ಚಿರಿಯಪಂಡ ವಿಶುಕಾಳಪ್ಪ ಅವರು, ಸಂಘಟನೆಯು ಪ್ರತಿ ತಿಂಗಳಿನAತೆ ಈ ಬಾರಿಯು ತನ್ನ ತಿಂಗಕೋರ್ ಅರಿವು ಮಾಲಿಕೆಯಲ್ಲಿ ವಿಭಿನ್ನ ಹಾಗೂ ಸರ್ವರಿಗೂ ಅವಶ್ಯ ಆರೋಗ್ಯ ಮಾಹಿತಿಯನ್ನು ಒದಗಿಸುವ ಪ್ರಯತ್ನ ಮಾಡಿದೆ, ನಮ್ಮ ಪ್ರಯತ್ನಕ್ಕೆ ಕೈ ಜೋಡಿಸಿದ ಸರ್ವರಿಗೂ ವಂದನೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಸರಣಿ ಮಾಲಿಕೆಯ ಐದನೇ ಕಾರ್ಯಕ್ರಮದಲ್ಲಿ ಸರ್ವೆಸಾಮಾನ್ಯ ರೋಗ ಲಕ್ಷಣವಾಗಿರುವ ಶುಗರ್ ಬಿ.ಪಿ.ಯ ಕುರಿತು ಅರಿವಿನೊಂದಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಜನಜಾಗೃತಿಯಾದರೆ ನಮ್ಮ ಯೋಜನೆ ಸಾರ್ಥಕ ಎಂದರಲ್ಲದೆ ಮುಂದೆಯೂ ಕೂಡ ವಿಭಿನ್ನ ಯೋಜನೆಯೊಂದಿಗೆ ಅರಿವಿಕೆಯನ್ನು ನೀಡುವ ಪ್ರಯತ್ನ ಮಾಡುತ್ತೇವೆ ಎಂದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟಾçರ್ ಅಜ್ಜಿಕುಟ್ಟಿರ ಗಿರೀಶ್, ಮಾಳೇಟಿರ ಶ್ರೀನಿವಾಸ್, ಸುಬೇದಾರ್ ಮೇಜರ್ ಬಿದ್ದಂಡ ನಾಣಿದೇವಯ್ಯ ಸೇರಿದಂತೆ ಹಲವರು ಹಾಜರಿದ್ದರು. ಸದಸ್ಯೆ ಐಯ್ಯಲಪಂಡ ಕವಿತ ಭೀಮಯ್ಯ ಸ್ವಾಗತಿಸಿ, ಸದಸ್ಯೆ ಮತ್ರಂಡ ದೇಚಮ್ಮ ನಿರೂಪಿಸಿ, ಸದಸ್ಯ ಚೆಯ್ಯಂಡ ಕೀರ್ತನ್ ವಂದಿಸಿದರು.