ಹೆಬ್ಬಾಲೆ, ಮಾ. ೩೦: ಯುಗಾದಿ ಹಬ್ಬವು ಗ್ರಾಮೀಣ ರೈತರ ಪಾಲಿಗೆ ಹೊಸ ಸಂವತ್ಸರದ ಆರಂಭ ಮತ್ತು ವಿಶಿಷ್ಟ ದಿನ. ಹೊಸ ವರುಷದ ಯುಗಾದಿ ಸಂದರ್ಭ ರೈತರು ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಮೂಲಕ ತಮ್ಮ ಕೃಷಿ ಚಟುವಟಿಕೆ ಆರಂಭಕ್ಕೆ ಸಕಲ ಸಿದ್ಧತೆಯನ್ನು ಕೈಗೊಂಡಿದ್ದಾರೆ. ಏ.೨ರ ಯುಗಾದಿಯಂದು ಹೊಸ ವರುಷದ ಅಂಗವಾಗಿ ಆಚರಿಸುವ ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವು ರೈತರ ಪಾಲಿಗೆ ಸಡಗರದ ದಿನ. ಅಂದು ಮುಂಜಾನೆ ತಮ್ಮ ಎತ್ತು ಹಾಗೂ ಜಾನುವಾರುಗಳನ್ನು ನದಿ ನೀರಿನಲ್ಲಿ ತೊಳೆದು ಅವುಗಳಿಗೆ ಗವುಸು ಹಾಗೂ ಕೊಂಬಿಗೆ ಹಣಸು ಇತ್ಯಾದಿಯಿಂದ ಶೃಂಗರಿಸಲಾಗುತ್ತದೆ.

ನAತರ ಮನೆ ಮಂದಿಯೆಲ್ಲ ಹೊಸ ಉಡುಗೆ ತೊಡುಗೆಗಳನ್ನು ತೊಟ್ಟು ಬೇವುಬೆಲ್ಲ ಸವಿದು ಕೃಷಿ ಪರಿಕರಗಳಾದ ನೇಗಿಲು, ನೊಗ ಹಾಗೂ ಉಳುಮೆ ಕೋಲು ಮತ್ತು ಎತ್ತಿನಗಾಡಿ ಮತ್ತಿತರ ವಸ್ತುಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸಿ ಸಂಭ್ರಮಿಸುವರು. ರೈತ ಮಹಿಳೆಯರಾದಿಯಾಗಿ ಮಕ್ಕಳು ಒಟ್ಟಿಗೆ ಸೇರಿ ತಮಗಾಗಿ ತಯಾರಿಸಿದ ಒಬ್ಬಟ್ಟು, ಪಾಯಸ ಮತ್ತಿತರ ಭಕ್ಷö್ಯ ಭೋಜನವನ್ನು ರಾಸುಗಳಿಗೆ ತಿನ್ನಿಸಿ ಸಂತಸಪಡುವುದು ಗ್ರಾಮೀಣಿಗರು ಜಾನುವಾರುಗಳ ಮೇಲಿಟ್ಟಿರುವ ಪ್ರೀತಿಯ ಸಂಕೇತವಾಗಿದೆ.

ಭಕ್ಷö್ಯ ಭೋಜನಗಳ ಸವಿಯುಂಡ ನಂತರ ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಹೊನ್ನಾರು ಉಳುಮೆಗೆ ಸಿದ್ಧತೆ ನಡೆಸುತ್ತಾರೆ. ಹೊಸ ಪಂಚಾAಗದAತೆ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ದೇವರ ಜಮೀನಿನಲ್ಲಿ ಪೂಜೆ ಸಲ್ಲಿಸಿ ಹೊನ್ನಾರು (ಚಿನ್ನದ ಉಳುಮೆ)ಹೂಡಿ ವರ್ಷಾಧಾರೆ ಉಳುಮೆಗೆ ಚಾಲನೆ ನೀಡಲಾಗುತ್ತದೆ. ರೈತರು ಊರಿನ ಮುಖ್ಯ ಬೀದಿಯಲ್ಲಿ ತಮ್ಮ ಜಾನುವಾರುಗಳನ್ನು ಮೆರವಣಿಗೆ ಮೂಲಕ ಊರಿನ ಬಸವೇಶ್ವರ ದೇವಸ್ಥಾನಕ್ಕೆ ಕೊಂಡೊಯ್ದು ಅಲ್ಲಿ ಜಾನುವಾರುಗಳಿಗೆ ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ.

ನಂತರ ದೇವರಿಗೆ ಈಡುಗಾಯಿ ಹಾಕಿ ಹೊನ್ನಾರು ಉತ್ಸವ ಆರಂಭಿಸುತ್ತಾರೆ. ಈ ಸಂದರ್ಭ ರೈತರು ಉತ್ತಮ ಮಳೆ ಬಿದ್ದು ಉತ್ತಮ ಬೆಳೆ ಬರಲಿ ಎಂದು ಪ್ರಾರ್ಥಿಸುತ್ತಾರೆ. ಬಳಿಕ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ನೇಗಿಲನ್ನು ಹೂಡಿ ಚಿನ್ನದ ಉಳುಮೆ ಆರಂಭಿಸುತ್ತಾರೆ. ಉತ್ತರ ಕೊಡಗಿನ ಬಯಲು ಸೀಮೆ ಪ್ರದೇಶವಾದ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಮಣಜೂರು, ನಲ್ಲೂರು, ಕೂಡಿಗೆ, ಹುಲುಸೆ, ಕೂಡ್ಲೂರು, ಭುವನಗಿರಿ, ಮದಲಾಪುರ ಗ್ರಾಮಗಳಲ್ಲಿ ಜನಪದ ಸಂಸ್ಕೃತಿಯ ಹೊನ್ನಾರು ಉತ್ಸವವನ್ನು ಮೊದಲಿನಿಂದಲೂ ಚಾಚೂ ತಪ್ಪದೇ ನಡೆಸಿಕೊಂಡು ಬರುತ್ತಿದ್ದಾರೆ. ಆನಪದರು ಬಹಳ ಹಿಂದಿನಿAದಲೂ ಸಾಂಪ್ರAದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವುದು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ. ಹೊನ್ನಾರು ಉತ್ಸವವು ಇಂದಿನ ಆಧುನಿಕ ಹಾಗೂ ಜಾಗತೀಕರಣದ ಪ್ರಭಾವದ ನಡುವೆಯೇ ಜನಪದ ಸೊಗಡಾಗಿಯೇ ಉಳಿದಿರುವುದು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ.