ಸುಂಟಿಕೊಪ್ಪ, ಮಾ. ೩೦: ಕೊಡಗಿನಿಂದ ಪ್ರತಿವರ್ಷ ಕಾವೇರಿ ಜಲಾನಯನ ಪ್ರದೇಶದಿಂದ ಹೊರರಾಜ್ಯ ಹೊರಜಿಲ್ಲೆಗಳಿಂದ ೩೫೦ ಟಿಎಂಸಿ ನೀರು ಬೇಸಾಯಕ್ಕೆ ಬಳಕೆಯಾಗುತ್ತಿದೆ. ಆದರೆ ಕೊಡಗಿನ ನೀರು ಸ್ಥಳೀಯರ ಬಳಕೆಗೆ ಲಭಿಸುತ್ತಿಲ್ಲ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಅವರು, ಕೊರೊನಾದಿಂದ ಕಳೆದ ೩ ವರ್ಷಗಳಲ್ಲಿ ಈ ರಸ್ತೆ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ ಈಗ ೨ ಕೋಟಿ ರೂ ಸರಕಾರದಿಂದ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇನ್ನು ೨ಕೋಟಿ ರೂ ಬಿಡುಗಡೆಗೆ ನೀರಾವರಿ ಸಚಿವ ಕಾರಜೋಳ ಹಸಿರು ನಿಶಾನೆ ನೀಡಿದ್ದಾರೆ. ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸರಕಾರ ನೀಡುತ್ತಿದೆ. ೪ ಮೀಟರ್ ಅಗಲದ ಕಾಂಕ್ರಿಟ್ ರಸ್ತೆ ಹಾಗೂ ಡಾಮರೀಕರಣ ರಸ್ತೆ ನಿರ್ಮಾಣ ಆಗಲಿದೆ ಎಂದೂ ಹೇಳಿದರು. ೧ ಟಿಎಂಸಿ ನೀರಿನಿಂದ ೬೨,೦೦೦ ಎಕ್ರೆ ಜಮೀನಿಗೆ ನೀರು ಉಣಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಕಂಬಿಬಾಣೆ ಗ್ರಾ.ಪಂ.ಅಧ್ಯಕ್ಷೆ ಮಧು ನಾಗಪ್ಪ, ಉಪಾಧ್ಯಕ್ಷೆ ಅಶ್ವಿನಿ, ಹೊಸಕೋಟೆ ಗ್ರಾ.ಪಂ.ಅಧ್ಯಕ್ಷ ರಮೇಶ, ಉಪಾಧ್ಯಕ್ಷ ಜೋಸೆಫ್, ಗ್ರಾ.ಪಂ.ಸದಸ್ಯರುಗಳಾದ ಚಂದ್ರವತಿ, ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರುಗಳು ಉಪಸ್ಥಿತರಿದ್ದರು. ಪಿಡ್ಲುö್ಯಡಿ ಇಂಜಿನಿಯರ್ ಮಹೇಂದ್ರ ಕುಮಾರ್, ಕಿರಣ್, ಮಾಜಿ ಗ್ರಾ.ಪಂ. ಅಧ್ಯಕ್ಷ ಶಶಿಕಾಂತ ರೈ ಮೊದಲಾದವರು ಬಿಜೆಪಿ ಸೋಮವಾರಪೇಟೆ ತಾಲೂಕು ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎನ್.ಕೊಮಾರಪ್ಪ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಆರ್.ಕೆ. ಚಂದ್ರು, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ ಮತ್ತಿತರರು ಇದ್ದರು.