ವೀರಾಜಪೇಟೆ, ಮಾ. ೩೦: ಪವಾಡ ಪುರುಷ, ಹಲವಾರು ತತ್ವಗಳನ್ನು ಗ್ರಹಿಸಿ ಪ್ರಪಂಚಕ್ಕೆ ಕಾಲಜ್ಞಾನಿಯಾಗಿ ತಿಳಿಹೇಳಿದ ಯೋಗಿ ಕೈವಾರ ತಾತಯ್ಯ ಅವರ ೨೯೬ನೇ ಜಯಂ ತೋತ್ಸವ ಕಾರ್ಯ ಕ್ರಮವನ್ನು ತಾಲೂಕು ಆಡಳಿತದಿಂದ ಸರಳ ರೀತಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ತಾತಯ್ಯ ಅವರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ ಮಾತನಾಡಿದ ತಾಲೂಕು ಗ್ರೇಡ್ ಎರಡು ತಹಶೀಲ್ದಾರ್ ಹೆಚ್.ಬಿ. ಪ್ರದೀಪ್ ಕುಮಾರ್ ಅವರು ಕೈವಾರ ತಾತಯ್ಯ ಅವರು ಆಧ್ಯಾತ್ಮ ರಹಸ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದ ತಾತಯ್ಯ ಅವರು ಅಧ್ಯಾತ್ಮದ ಸತ್ಯ ಸಂಗತಿಗಳನ್ನು ಅರಿತು ಜನತೆಗೆ ತಿಳಿಹೇಳಿಕೊಟ್ಟರು. ತತ್ವಗಳ ಮೂಲಕ ಗೀತ ರಚನೆಗಳನ್ನು ಮಾಡಿ ಭಕ್ತಿಯ ಸಾರವನ್ನು ಜನತೆಗ ಭಿತ್ತುತ್ತಾ ಸನ್ಮಾರ್ಗದ ಕಡೆಗೆ ಧಾರಿಯನ್ನು ತೋರಿದ ಕೀರ್ತಿ ತಾತಯ್ಯ ಅವರಿಗೆ ಸಲ್ಲಬೇಕು ಎಂದು ಹೇಳಿದರು. ಶಿರಸ್ತೇದಾರ್ ಪೊನ್ನು, ಕಂದಾಯ ಅಧಿಕಾರಿಗಳಾದ ಹರೀಶ್ ಮತ್ತು ತಾಲೂಕು ಕಚೇರಿಯ ಸಿಬ್ಬಂದಿಗಳು ಹಾಗೂ ಬಲಿಜ ಸಮಾಜದ ಪ್ರಮುಖರಾದ ಯತಿರಾಜು ಹಾಜರಿದ್ದರು.