ಮಡಿಕೇರಿ, ಮಾ. ೩೦: ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಕ್ರೀಡಾಕೌಶಲ್ಯ ಹೊಂದಿರುವ ಯುವಕರ ಆಯ್ಕೆ ಪ್ರಕ್ರಿಯೆ ಮಡ್ರಾಸ್ ರೆಜಿಮೆಂಟ್ ಸೆಂಟರ್ನ ತಂಗರಾಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಪ್ರಿಲ್ ೨೫ ಹಾಗೂ ೨೬ ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಕ್ರೀಡಾಪಟುಗಳು ಮಾತ್ರ ಭಾಗವಹಿಸಬಹುದಾಗಿದೆ. ಏಪ್ರ್ರಿಲ್ ೨೫ ರ ಬೆಳಿಗ್ಗೆ ೬ ಗಂಟೆಗೆ ಕ್ರೀಡಾಂಗಣದಲ್ಲಿ ಹಾಜರಿರಬೇಕಿದೆ. ಆಯ್ಕೆ ಪ್ರಕ್ರಿಯೆ ಅಥ್ಲೆಟಿಕ್ಸ್ಗೆ ಮಾತ್ರ ಸೀಮಿತವಾಗಿರಲಿದೆ.
ದಾಖಲೆಗಳು
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ತಮ್ಮ ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಶಿಕ್ಷಣ ಪ್ರಮಾಣ ಪತ್ರ, ಗುಣ ನಡತೆÀ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಗಳೊಂದಿಗೆ ಈ ಹಿಂದೆ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಹಾಗೂ ಇತರ ಮಟ್ಟಗಳಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಲ್ಲಿ, ಈ ಮೂಲಕ ದೊರೆತಿರುವ ಪದಕ ಹಾಗೂ ಪ್ರಮಾಣ ಪತ್ರದ ಅಸಲಿ ಹಾಗೂ ನಕಲಿ ಪ್ರತಿಯನ್ನು ಹೊಂದಿರಬೇಕು.
ವಯೋಮಿತಿ ಅರ್ಹತೆ
೧೧ ರಿಂದ ೧೪ ವರ್ಷ (ಏಪ್ರಿಲ್ ೨೫ ೨೦೦೮ ರ ನಂತರ ಹಾಗೂ ಏಪ್ರಿಲ್ ೨೪ ೨೦೧೧ ರೊಳಗೆ ಜನಿಸಿದವರು)
೧೫ ರಿಂದ ೧೬ ವರ್ಷ (ರಾಷ್ಟಿçÃಯ ಹಾಗೂ ಅಂರ್ರಾಷ್ಟಿçÃಯ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು ಮಾತ್ರ)
ಕ್ರೀಡಾಪಟುಗಳು ೫ನೇ ತರಗತಿ ತೇರ್ಗಡೆಯಾಗಿರಬೇಕು ಹಾಗೂ ಹಿಂದಿ, ಆಂಗ್ಲ ಭಾಷೆಗಳನ್ನು ಅರಿತಿರಬೇಕು.
ದೈಹಿಕ ಸಾಮರ್ಥ್ಯ - ಅರ್ಹತೆ
೧೧ ವರ್ಷ: ಕನಿಷ್ಟ ಉದ್ದ ಹಾಗೂ ತೂಕದ ಅವಶ್ಯಕತೆಯಿಲ್ಲ.
೧೨ ವರ್ಷ: ಕನಿಷ್ಟ ೧೫೩ ಸೆ.ಮೀ ಉದ್ದ ಹಾಗೂ ಕನಿಷ್ಟ ೩೫ ಕೆ.ಜಿ ತೂಕ.
೧೩ ವರ್ಷ: ಕನಿಷ್ಟ ೧೫೫ ಸೆ.ಮೀ ಹಾಗೂ ಕನಿಷ್ಟ ೪೨ ಕಿ.ಜಿ ತೂಕ.
೧೪ ವರ್ಷ: ಕನಿಷ್ಟ ೧೬೦ ಸೆ.ಮೀ ಹಾಗೂ ೪೭ ಕನಿಷ್ಟ ೪೨ ಕಿ.ಜಿ ತೂಕ.
ಹೆಚ್ಚಿನ ಮಾಹಿತಿಗಾಗಿ ದೂ. ೦೪೨೩-೨೨೩೭೮೯೮ ಸಂಪರ್ಕಿಸಬಹುದು.