ಗೋಣಿಕೊಪ್ಪ ವರದಿ, ಮಾ. ೨೯: ಹಾಕಿ ಇಂಡಿಯಾ ವತಿಯಿಂದ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯುತ್ತಿರುವ ೧೨ ನೇ ವರ್ಷದ ಕಿರಿಯ ಬಾಲಕಿಯರ ರಾಷ್ಟçಮಟ್ಟದ ಹಾಕಿ ಟೂರ್ನಿಯಲ್ಲಿ ಕೊಡಗು ಆಟಗಾರರನ್ನು ಒಳಗೊಂಡಿರುವ ಕರ್ನಾಟಕ ರಾಜ್ಯ ತಂಡ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದು, ಮಾ. ೩೧ ರಂದು ಹರಿಯಾಣ ತಂಡವನ್ನು ಎದುರಿಸಲಿದೆ.
ಮಂಗಳವಾರ ನಡೆದ ಲೀಗ್ ಪಂದ್ಯದಲ್ಲಿ ಹಾಕಿ ಬೆಂಗಾಲ್ ವಿರುದ್ಧ ೯-೦ ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು. ಲೀಗ್ ಪಂದ್ಯಗಳ ಮೂರು ಪಂದ್ಯ ಗೆದ್ದು ಸಾಧನೆ ಮಾಡಿತು.
೩೮, ೪೦, ೫೪ ನೇ ನಿಮಿಷಗಳಲ್ಲಿ ಸಿ. ಎಂ. ಸಹನಾ ೩ ಗೋಲು ಹೊಡೆದರು. ೬, ೧೫ ನೇ ನಿಮಿಷಗಳಲ್ಲಿ ಪಾಂಡAಡ ದೇಚಮ್ಮ ಗಣಪತಿ ೨ ಗೋಲು, ೩೨, ೪೩ ರಲ್ಲಿ ವುದುಮಾಲಾ ಸೌಮ್ಯ ೨ ಗೋಲು, ೫೯ ರಲ್ಲಿ ಅಪ್ಸರಾ, ೪೨ ರಲ್ಲಿ ಎಸ್. ಬಿ. ನಿಸರ್ಗ ತಲಾ ಒಂದೊAದು ಗೋಲು ಹೊಡೆದು ತಂಡಕ್ಕೆ ನೆರವಾದರು.
ಕೊಡಗಿನ ೧೨ ಆಟಗಾರರು ರಾಜ್ಯ ತಂಡದಲ್ಲಿರುವುದು ವಿಶೇಷ. ಬಿ. ಎಂ. ಕೋಮಲಾ ತರಬೇತುದಾರರಾಗಿ ತಂಡದಲ್ಲಿದ್ದಾರೆ. ಪಾಂಡAಡ ದೇಚಮ್ಮ ಗಣಪತಿ ಹಾಗೂ ಬಿ. ಎಂ. ಕೀರ್ತನಾ ಕಿರಿಯರ ಭಾರತ ತರಬೇತಿ ತಂಡದಲ್ಲಿದ್ದಾರೆ. ತೇಜಸ್ವಿನಿ ಕಿರಿಯ ಭಾರತ ತಂಡದ ಗೋಲ್ ಕೀಪರ್ ಆಗಿದ್ದಾರೆ.